ವೀರಾಜಪೇಟೆ, ಫೆ. 22: ಕೇರಳದ ಹುಲಿಕಲ್‍ನ ಆದಿ ಬೈತೂರು ದೇವಾಲ ಯದಲ್ಲಿ ತಾ. 28ರಂದು (ಇಂದು) ನಾಗಪೂಜಾ ಉತ್ಸವವನ್ನು ಆಚರಿಸ ಲಾಗುವದು ಎಂದು ದೇವಾಲಯದ ವ್ಯವಸ್ಥಾಪಕ ಜಯನ್ ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಜಯನ್ ಅವರು ಪ್ರತಿ ವರ್ಷದಂತೆ ಫೆಬ್ರವರಿ ತಿಂಗಳ ಕುಂಭ ಮಾಸದಲ್ಲಿ ನಾಗಪೂಜಾ ಉತ್ಸವವನ್ನು ಹಮ್ಮಿಕೊಳ್ಳಲಾಗಿದೆ ತಾ. 28ರಂದು ನಾಗ ದೇವರ ಹೆಸರಿನಲ್ಲಿ ವಿವಿಧ ಪೂಜೆಗಳು ನಡೆಯಲಿವೆ. ಪೂರ್ವಾಹ್ನ 11 ಗಂಟೆಗೆ ನಾಗ ದೇವರ ಮಹಾಪೂಜಾ ಸೇವೆ ನಡೆಯಲಿದೆ. ಅದೇ ದಿನ ಸಂಜೆ ಸಾಂಪ್ರದಾಯಿಕ ಸರ್ಪಬಲಿ, ಆಶ್ಲೇಷಬಲಿ ಪೂಜೆ ನಡೆಯಲಿದೆ. ಈ ಸರ್ಪಬಲಿ ಆಶ್ಲೇಷ ಬಲಿ ಪೂಜೆಗಾಗಿ ಜಯನ್ ಮೊ. 9947182071 ಸಂಪರ್ಕಿಸಬಹುದು ಎಂದು ಹೇಳಿದರು.
ಬೈತೂರು ದೇವಾಲಯದ ಆಡಳಿತ ಮಂಡಳಿಯ ಅಧ್ಯಕ್ಷರಾದ ಪುಗ್ಗೇರ ಪೊನ್ನಪ್ಪ ಮಾತನಾಡಿ ವರ್ಷಕ್ಕೆ ಒಮ್ಮೆ ನಡೆಯುವ ನಾಗಪೂಜಾ ಉತ್ಸವದಲ್ಲಿ ಕೇರಳದ ಹುಲಿಕಲ್‍ನ ಆದಿ ಬೈತೂರಪ್ಪ ದೇವಾಲಯ ಕೊಡಗಿನ ಭಕ್ತಾದಿಗ ಳೊಂದಿಗೆ ಅವಿನಾಭಾವ ಸಂಬಂಧ ಹೊಂದಿರುವದರಿಂದ ಹರಕೆ ಹಾಗೂ ಮಹಾಪೂಜಾ ಸೇವೆಯಲ್ಲಿ ಭಾಗಿಯಾಗುವ ಕೊಡಗಿನವರು ಹೆಚ್ಚಿನ ಮಾಹಿತಿಗಾಗಿ ಮೊ. 9663977304 ನ್ನು ಸಂಪರ್ಕಿಸಬಹುದು ಎಂದರು.
ಆದಿ ಬೈತೂರು ದೇವಾಲಯದ ಬಳಿಯಲ್ಲಿ ಭಕ್ತಾದಿಗಳಿಗೆ ತಂಗಲು ಹೊಸದಾಗಿ ಅತಿಥಿ ಗೃಹದ ಸೌಲಭ್ಯ ಒದಗಿಸಿರುವದನ್ನು ಬಿಲ್ಡಿಂಗ್ ಫಂಡ್‍ನ ಪುಗ್ಗೇರ ರಂಜಿ ದೇವಯ್ಯ ಈ ಸಂದರ್ಭದಲ್ಲಿ ತಿಳಿಸಿದರು.
ಗೋಷ್ಠಿಯಲ್ಲಿ ದೇವಾಲಯದ ಟ್ರಸ್ಟಿ ವೇಣುಗೋಪಾಲ್, ಪುಗ್ಗೇರ ನಂದಾ, ಶಿವಕುಮಾರ್ ಉಪಸ್ಥಿತರಿದ್ದರು.