ಸೋಮವಾರಪೇಟೆ,ಫೆ.26: ಸರ್ಕಾರದ ಆದೇಶದನ್ವಯ ಫೆ.27ರಿಂದ ಮಾ.14ರವರೆಗೆ ಗ್ರಾಮ ಪಂಚಾಯಿತಿಗಳಲ್ಲಿ ಪಡಿತರ ಚೀಟಿಗಳನ್ನು ವಿತರಿಸಲಾಗುವದು. ಫಲಾನುಭವಿಗಳು ಸೌಲಭ್ಯವನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಆಹಾರ ನಿರೀಕ್ಷರರಾದ ಡಿ.ರಾಜಣ್ಣ ತಿಳಿಸಿದ್ದಾರೆ.
ಫಲಾನುಭವಿಗಳು ಸಂಬಂಧಪಟ್ಟ ಗ್ರಾಮ ಪಂಚಾಯಿತಿಗೆ ನಿಗದಿತ ದಿನಾಂಕ ಮತ್ತು ಸಮಯದಂದು ಕುಟುಂಬ ಸದಸ್ಯರ ಪೈಕಿ ಯಾರಾದರೂ ಒಬ್ಬರ ಹೆಸರಿನಲ್ಲಿರುವ ಇತ್ತೀಚಿನ ಆದಾಯ ದೃಢೀಕರಣ ಪತ್ರದೊಂದಿಗೆ ಅರ್ಜಿಯಲ್ಲಿರುವ ಒಬ್ಬರು ಸದಸ್ಯರು ಹಾಜರಾಗಿ ಪಡಿತರ ಚೀಟಿ ಪಡೆದುಕೊಳ್ಳಬಹುದು.
ತಾ .27ರಂದು ಬೆಳಿಗ್ಗೆ 10ರಿಂದ 12 ಮಳ್ಳುಸೋಗೆ ಗ್ರಾಮ ಪಂಚಾಯಿತಿ, ಮಧ್ಯಾಹ್ನ 12.30 ರಿಂದ 3ಗಂಟೆಯ ವರೆಗೆ ಕೂಡುಮಂಗಳೂರು ಗ್ರಾಪಂ, ಸಂಜೆ 3ರಿಂದ 5.30 ರ ವರೆಗೆ ಕೂಡಿಗೆ ಗ್ರಾಪಂ ನಲ್ಲಿ ಪಡಿತರ ಚೀಟಿ ನೀಡಲಾಗುತ್ತದೆ.
ತಾ. 28ರಂದು ಹೆಬ್ಬಾಲೆ (ಬೆಳಿಗ್ಗೆ), ತೊರೆನೂರು (ಮಧ್ಯಾಹ್ನ), ಶಿರಂಗಾಲ (ಸಂಜೆ), ಮಾ.1ರಂದು ಗುಡ್ಡೆಹೊಸೂರು (ಬೆ), ನಂಜರಾಯಪಟ್ಟಣ (ಮ), ವಾಲ್ನೂರು ತ್ಯಾಗತ್ತೂರು (ಸಂ), ಮಾ.2ರಂದು ನೆಲ್ಲಿಹುದಿಕೇರಿ (ಬೆ), ಚೆಟ್ಟಳ್ಳಿ (ಮ), ಕೆದಕಲ್ (ಸಂ) ಮಾ.3ರಂದು 7ನೇ ಹೊಸಕೋಟೆ (ಬೆ), ಕೊಡಗರಹಳ್ಳಿ (ಮ), ಕಂಬಿಬಾಣೆ(ಸಂ), ಮಾ.5ರಂದು ಸುಂಟಿಕೊಪ್ಪ (ಬೆ), ನಾಕೂರು ಶಿರಂಗಾಲ (ಮ), ಹರದೂರು (ಸಂ) ಗ್ರಾ.ಪಂ.ನಲ್ಲಿ ಪಡಿತರ ಚೀಟಿ ವಿತರಣೆ ಕಾರ್ಯ ನಡೆಯಲಿದೆ.
ಮಾ.6 ರಂದು ಐಗೂರು (ಬೆ), ಮಾದಾಪುರ (ಮ), ಗರ್ವಾಲೆ (ಸಂ), ಮಾ.7ರಂದು ಬೇಳೂರು (ಬೆ), ಕಿರಗಂದೂರು (ಮ), ಹಾನಗಲ್ಲು (ಸಂ), ಮಾ.8ರಂದು ತೋಳೂರುಶೆಟ್ಟಳ್ಳಿ (ಬೆ), ಶಾಂತಳ್ಳಿ (ಮ), ಬೆಟ್ಟದಳ್ಳಿ(ಸಂ) ಮಾ. 9ರಂದು ಚೌಡ್ಲು (ಬೆ), ದೊಡ್ಡಮಳ್ತೆ (ಮ), ಗೌಡಳ್ಳಿ (ಸಂ), ಮಾ.10ರಂದು ಶನಿವಾರಸಂತೆ (ಬೆ), ದುಂಡಳ್ಳಿ (ಮ), ಬ್ಯಾಡಗೊಟ್ಟ (ಸಂ), ಮಾ.12ರಂದು ಹಂಡ್ಲಿ (ಬೆ), ಬೆಸೂರು (ಮ), ಕೊಡ್ಲಿಪೇಟೆ (ಸಂ), ಮಾ.13ರಂದು ಆಲೂರು ಸಿದ್ದಾಪುರ(ಬೆ), ಗಣಗೂರು (ಮ), ನೇರುಗಳಲೆ (ಸಂ), ಮಾ.14ರಂದು ಪೂರ್ವಾಹ್ನ ನಿಡ್ತ ಗ್ರಾ.ಪಂ.ನಲ್ಲಿ ಪಡಿತರ ಚೀಟಿ ವಿತರಿಸಲಾಗುವದು ಎಂದು ರಾಜಣ್ಣ ತಿಳಿಸಿದ್ದಾರೆ.