ಮಡಿಕೇರಿ, ಫೆ. 26: ಮೈಸೂರು ಭಾರತ್ ಅರ್ಥ್ ಮೂವರ್ಸ್ ಲಿಮಿಟೆಡ್ ವತಿಯಿಂದ ಐ.ಟಿ.ಐ. ಪಾಸಾದ ಅಭ್ಯರ್ಥಿಗಳಿಂದ ಅಪ್ರೆಂಟಿಷಿಪ್ ತರಬೇತಿಗಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದ್ದು, ಅಭ್ಯರ್ಥಿಗಳಿಗೆ ಮಾಸಿಕ ವೇತನ ರೂ.6995 ಜೊತೆಗೆ ಕ್ಯಾಂಟೀನ್ ಸೌಲಭ್ಯ, ಯೂನಿಫಾರ್ಮ್ ಮತ್ತು ಪುಸ್ತಕ ಇತರೆ ಸೌಲಭ್ಯ ನೀಡಲಾಗುವದು ಎಂದು ಜಿಲ್ಲಾ ಉದ್ಯೋಗ ವಿನಿಮಯ ಅಧಿಕಾರಿ ಜಗನಾಥ್ ತಿಳಿಸಿದ್ದಾರೆ.

ಪಿಟ್ಟರ್, ವೆಲ್ಡರ್, ಟರ್ನರ್, ಮೆಶಿನಿಸ್ಟ್, ಎಲೆಕ್ಟ್ರಿಶಿಯನ್, ಎಲೆಕ್ಟ್ರಾನಿಕ್ ಮೆಕ್ಯಾನಿಕ್, ಎಂ.ಎಂ.ವಿಯಲ್ಲಿ ತೇರ್ಗಡೆ ಹೊಂದಿ ಪ್ರಾವಿಶನಲ್ ಅಂಕಪಟ್ಟಿ ಯನ್ನು ಹೊಂದಿರು ವಂತಹ ಅಭ್ಯರ್ಥಿಗಳು ನೇರವಾಗಿ ಬಿ.ಇ.ಎಂ.ಎಲ್. ಟ್ರೈನಿಂಗ್ ಸೆಂಟರ್, ಬೆಳವಾಡಿ ಪೋಸ್ಟ್ ಮೈಸೂರು ಇಲ್ಲಿಗೆ ಅಥವಾ ಆನ್‍ಲೈನ್ (ತಿತಿತಿ. ಚಿಠಿಠಿಡಿeಟಿಣiಛಿeshiಠಿ.gov.iಟಿ) ಅರ್ಜಿಯನ್ನು ಮಾರ್ಚ್ 10 ರೊಳಗೆ ಸಲ್ಲಿಸಬಹುದು.