ಮಡಿಕೇರಿ, ಫೆ. 25: ಕೊಡಗು ಜಿಲ್ಲೆಯ ವಿವಿಧೆಡೆ ವಿದ್ಯಾರ್ಥಿಗಳ ಸಾಧನೆ ಹಾಗೂ ಶಿಕ್ಷಣ ಚಟುವಟಿಕೆಗಳು ಜರುಗಿವೆ. ಅಲ್ಲದೆ ವಿವಿಧ ರಂಗದಲ್ಲಿ ವಿದ್ಯಾರ್ಥಿಗಳು ಪುರಸ್ಕಾರ ಪಡೆದಿದ್ದಾರೆ.ಬ್ರೈನೋ ಬ್ರೈನ್ ಪ್ರಶಸ್ತಿ ಸ್ವೀಕಾರಮಡಿಕೇರಿ: ಮಡಿಕೇರಿಯ ಬ್ರೈನೋ ಬ್ರೈನ್ ಅಬಾಕಸ್ ಕೇಂದ್ರಕ್ಕೆ ರಾಜ್ಯದಲ್ಲೇ ಅತ್ಯುತ್ತಮ ಕೇಂದ್ರ ಎಂಬ ಪ್ರಶಸ್ತಿ ಲಭಿಸಿದೆ. ಇತ್ತೀಚೆಗೆ ನಗರದ ಹೊಟೇಲ್ ಕೂರ್ಗ್ ಇಂಟರ್ ನ್ಯಾಷನಲ್‍ನಲ್ಲಿ ನಡೆದ ಪದವಿ ಪ್ರದಾನ ಸಮಾರಂಭದಲ್ಲಿ ಬ್ರೈನೋ ಬ್ರೈನ್ ಕರ್ನಾಟಕ ವಲಯ ನಿರ್ದೇಶಕ ಆರ್. ರಾಮಕೃಷ್ಣ ಅವರಿಂದ ಕೇಂದ್ರದ ಮುಖ್ಯಸ್ಥೆ ಮಾಪಂಗಡ ಕವಿತಾ ಕರುಂಬಯ್ಯ ಪ್ರಶಸ್ತಿ ಸ್ವೀಕರಿಸಿದರು.

ಕಾಲ್ಸ್ ಶಾಲೆಯಲ್ಲಿ ಗೌರವ ಸಮರ್ಪಣೆ

ಗೋಣಿಕೊಪ್ಪ ವರದಿ: ವಿದ್ಯಾರ್ಥಿಗಳು ತಮ್ಮ ಭವಿಷ್ಯವನ್ನು ಉತ್ತಮ ರೀತಿಯಲ್ಲಿ ರೂಪಿಸಿಕೊಳ್ಳುವಂತಾಗಬೇಕು ಎಂದು ನಿವೃತ್ತ ಐಎಎಸ್ ಗೋಣಿಕೊಪ್ಪಲುಅಧಿಕಾರಿ ಎಂ.ಕೆ. ಶಂಕರಲಿಂಗಗೌಡ ಹೇಳಿದರು.

ಗೋಣಿಕೊಪ್ಪಲಿನ ಕಾಲ್ಸ್ ಶಾಲೆಯಿಂದ ನಿರ್ಗಮನಗೊಳ್ಳಲಿರುವ 10ನೇ ತರಗತಿ ವಿದ್ಯಾರ್ಥಿಗಳಿಗೆ ಆಯೋಜಿಲಾಗಿದ್ದ ಗೌರವ ಸಮರ್ಪಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಗುರು-ಹಿರಿಯರಿಗೆ ಗೌರವ ಕೊಡುವದನ್ನು ಬೆಳೆಸಿಕೊಳ್ಳಬೇಕು. ಮಧ್ಯಮ ವರ್ಗದ ಜನರು ಕಷ್ಟಪಟ್ಟು ಸಾಲ ಮಾಡಿ ಮಕ್ಕಳಿಗೆ ವಿದ್ಯಾಭ್ಯಾಸ ಕಲ್ಪಿಸುವ ಕೆಲಸ ಮಾಡುತ್ತಾರೆ. ಇದನ್ನು ವಿದ್ಯಾರ್ಥಿಗಳು ಅರ್ಥೈಸಿಕೊಂಡು ಉತ್ತಮ ಭವಿಷ್ಯವನ್ನು ಕಟ್ಟಿಕೊಳ್ಳಬೇಕಾಗಿದೆ ಎಂದರು.

ವಿದ್ಯಾರ್ಥಿಗಳು ಸಾಂಸ್ಕøತಿಕ ಕಾರ್ಯಕ್ರಮ ನೀಡಿ ರಂಜಿಸಿದರು. ವಿದ್ಯಾರ್ಥಿಗಳು ಮತ್ತು ಪೋಷಕರು ಅನುಭವವನ್ನು ಹಂಚಿಕೊಂಡರು. ಶಾಲಾ ವ್ಯವಸ್ಥಾಪಕ ದತ್ತಾ ಕರುಂಬಯ್ಯ, ಅಶ್ವಿನಿ ನಾಚಪ್ಪ, ಪ್ರಾಂಶುಪಾಲೆ ಗೌರಮ್ಮ ಉಪಸ್ಥಿತರಿದ್ದರು.

‘ಶುಚಿತ್ವವನ್ನು ಕಾಯ್ದುಕೊಂಡರೆ ಉತ್ತಮ ಆರೋಗ್ಯ’

ಸುಂಟಿಕೊಪ್ಪ: ವಿದ್ಯಾರ್ಥಿಗಳು ತಮ್ಮ ಕಲಿಕೆಯೊಂದಿಗೆ ಆರೋಗ್ಯದ ಶುಚಿತ್ವವನ್ನು ಕಾಯ್ದುಕೊಂಡರೆ ದೇಹದ ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಾಧ್ಯವಾಗಲಿದೆ. ಮಕ್ಕಳು ಹಲ್ಲಿನ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವದು ಸೂಕ್ತ ಎಂದು ವೀರಾಜಪೇಟೆ ದಂತ ವೈದ್ಯಕೀಯ ಕಾಲೇಜಿನ ದಂತ ವೈದ್ಯ ಡಾ. ನೌಶ್ಯ ಮಾಹಿತಿ ನೀಡಿದರು.

ಸುಂಟಿಕೊಪ್ಪ ಜೆ.ಸಿ.ಐ. ಸಂಸ್ಥೆ ಹಾಗೂ ವೀರಾಜಪೇಟೆ ದಂತ ವೈದ್ಯಕೀಯ ಕಾಲೇಜು ಸಹಯೋಗದಲ್ಲಿ ಇಲ್ಲಿನ ಕೆದಕಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೊರೂರು, ಸರಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ದಂತ ರಕ್ಷಣೆ ಬಗ್ಗೆ ಏರ್ಪಡಿಸಲಾಗಿದ್ದ ದಂತ ಮಾಹಿತಿ ಶಿಬಿರದಲ್ಲಿ ಮಾತನಾಡಿದರು. ಹಲ್ಲುಗಳ ಸ್ವಚ್ಛತೆ ಮತ್ತು ಆಹಾರ ಸೇವನೆ ನಂತರ ಹಲ್ಲಿನ ಸ್ವಚ್ಛತೆಯನ್ನು ನಿರ್ವಹಿಸುವದರಿಂದ ದೇಹಕ್ಕೆ ಹರಡುವ ಹಲವು ರೋಗಗಳನ್ನು ತಡೆಗಟ್ಟಲು ಸಾಧ್ಯವೆಂದು ನುಡಿದರು.

ಜೆ.ಸಿ.ಐ. ಸಂಸ್ಥೆ ಅದ್ಯಕ್ಷ ಹೆಚ್.ಆರ್. ಅರುಣ್ ಕುಮಾರ್ ಮಾತನಾಡಿ, ಮಾನವರ ರೂಪವು ಅಂದವಾಗಿ ಇತರರಿಗೆ ಕಾಣಬೇಕಾದರೆ ಹಲ್ಲುಗಳು ಪ್ರಧಾನ ಪಾತ್ರ ವಹಿಸುತ್ತವೆ. ಬಾಲ್ಯದಲ್ಲಿ ಹಲ್ಲಿನ ಬಗ್ಗೆ ಅರಿವು ಮೂಡಿಸಿ ಕೊಂಡರೆ ಜೀವನದುದ್ದಕ್ಕೂ ಹಲ್ಲಿನ ಸಮಸ್ಯೆ ಕಾಡದು ಎಂದರು.

ಈ ಸಂದರ್ಭ ಶಾಲಾ ಮಕ್ಕಳಿಗೆ ಉಚಿತವಾಗಿ ಪೇಸ್ಟ್ ಮತ್ತು ಬ್ರಶ್‍ಗಳನ್ನು ವಿತರಿಸಲಾಯಿತು. ಶಿಬಿರದಲ್ಲಿ ವೀರಾಜಪೇಟೆ ದಂತ ವೈದ್ಯಕೀಯ ಕಾಲೇಜಿನ ದಂತ ವೈದ್ಯೆ ಪೂಜಾ, ಜೆ.ಸಿ.ಐ. ಸಂಸ್ಥೆಯ ಪೂರ್ವ ವಲಯ ಅಧ್ಯಕ್ಷ ದೇವಿ ಪ್ರಸಾದ್ ಕಾಯರ್ ಮಾರ್, ಖಜಾಂಚಿ ನಿರಂಜನ್, ಉಪಾಧ್ಯಕ್ಷ ನಂದಕುಮಾರ್, ಶಾಲಾ ಮುಖ್ಯ ಶಿಕ್ಷಕಿ ನಾಗರತ್ನ, ಶಿಕ್ಷಕಿ ಜಯಶ್ರೀ, ಅಂಗನವಾಡಿ ಶಿಕ್ಷಕಿ ನಳಿನಿ ಶಿವಣ್ಣ, ದಂತ ವೈದ್ಯಕೀಯ ಸಹಾಯಕ ಸಿಬ್ಬಂದಿ ಗಣೇಶ ಮತ್ತಿತರರು ಹಾಜರಿದ್ದರು.

ಶಿಶುಪಾಲನಾ ಕೇಂದ್ರದ ವಾರ್ಷಿಕೋತ್ಸವ

ಮಡಿಕೇರಿ: ಮೂರ್ನಾಡು ಮಹಿಳಾ ಮಂಡಳಿ ವತಿಯಿಂದ ಶಿಶುಪಾಲನಾ ಕೇಂದ್ರದಲ್ಲಿ ವಾರ್ಷಿಕೋತ್ಸವವು ಪುಟಾಣಿಗಳು ಉತ್ಸಾಹದಿಂದ ಪಾಲ್ಗೊಳ್ಳುವ ಮೂಲಕ ನಡೆಯಿತು.

ಛದ್ಮವೇಷ, ಕಾಳು ಹೆಕ್ಕುವದು, ಓಟ, ಹಾಡುಗಾರಿಕೆ ಮುಂತಾದ ಸ್ಪರ್ಧೆಗಳಲ್ಲಿ ಪುಟಾಣಿಗಳು ಮಿಂಚಿದರು. ಮಂಡಳಿಯ ಉಪಾಧ್ಯಕ್ಷೆ ಮೀನಾಕ್ಷಿ ಕೇಶವ, ಕಾರ್ಯದರ್ಶಿ ಪೂರ್ಣಿಮ ಸುರೇಶ್, ಖಜಾಂಚಿ ಫಾತಿಮ ಆಲಿ, ಸದಸ್ಯರಾದ ವಾಣಿ ಶಬರೀಶ್, ಸುಜಾತ ಸಜೀವ, ಭವ್ಯ ದಿನೇಶ್, ರಶ್ಮಿ, ಶಿಕ್ಷಕರಾದ ರುಕ್ಮಿಣಿ, ಇಂದಿರಾ ಹಾಗೂ ಸ್ಟೆಲ ಹಾಜರಿದ್ದರು.ಚಿಂತನಾ ದಿನಾಚರಣೆ

ವೀರಾಜಪೇಟೆ: ತಾ. 22 ರಂದು ಸ್ಕೌಟ್ಸ್ ಮತ್ತು ಗ್ಯೆಡ್ಸ್‍ನ ಸಂಸ್ಥಾಪಕ ಲಾರ್ಡ್ ಬೇಡನ್ ಪೊವೆಲ್ ಅವರ ಜನ್ಮ ದಿನವನ್ನು ಚಿಂತನಾ ದಿನವನ್ನಾಗಿ ಅರಮೇರಿಯ ಎಸ್.ಎಂ.ಎಸ್. ಶಾಲೆಯ ಆವರಣದಲ್ಲಿ ಆಚರಿಸಲಾಯಿತು.

ಶಾಲೆಯ ಸ್ಕೌಟ್ಸ್ ಮತ್ತು ಗೈಡ್ಸ್‍ನವರು ಧ್ವಜಾರೋಹಣ ನೆರವೇರಿಸಿದರು. ಏಳನೇ ತರಗತಿ ಗೈಡ್ ವಂಶಿಕಾ ಸ್ವಾಗತಿಸಿದರು. ಸಮಾರಂಭದ ಅಧ್ಯಕ್ಷತೆಯನ್ನು ಅರಮೇರಿ ಕಳಂಚೇರಿ ಮಠದ ಪೀಠಾಧಿಪತಿ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ವಹಿಸಿದ್ದರು.

ಉಡುಪಿಯ ನಿವೃತ್ತ ಕನ್ನಡ ಅಧ್ಯಾಪಕ ಯು.ಬಿ. ಜಯರಾಮ್ ರಾವ್ ಲಾರ್ಡ್ ಬೇಡನ್ ಪೋವೆಲ್ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ, ಗುರು-ಹಿರಿಯರಿಗೆ ಗೌರವ, ಭಕ್ತಿಯನ್ನು ತೋರಿ, ಬದುಕಿನಲ್ಲಿ ಅಳವಡಿಸಿಕೊಳ್ಳಬೇಕಾದ ಶಿಸ್ತಿನ ಬಗ್ಗೆ ಮನವರಿಕೆ ಮಾಡಿಕೊಟ್ಟರು. ಏಳನೇ ತರಗತಿಯ ಆರುಷಿ ಅಯ್ಯಪ್ಪ ದಿನದ ಮಹತ್ವವನ್ನು ತಿಳಿಸಿದರು.

ಶಾಲೆಯ ಪ್ರಾಂಶುಪಾಲೆ ಕೆ.ಪಿ. ಕುಸುಂ, ಸ್ಕೌಟ್ ಮಾಸ್ಟರ್ ಭೀಮಯ್ಯ ಮತ್ತು ಗೈಡ್ಸ್ ಶಿಕ್ಷಕಿ ಮೈಥಿಲಿ ರಾವ್ ಹಾಗೂ ಶಿಕ್ಷಕ ವೃಂದ ಸಮಾರಂಭದಲ್ಲಿ ಪಾಲ್ಗೊಂಡಿದ್ದರು.

ವೇದಿಕೆಯಲ್ಲಿ ಸ್ವಾಮೀಜಿಯವರು ತಮ್ಮ ಗುರುಗಳಾದ ಯು.ಬಿ. ಜಯರಾಮ್ ರಾವ್ ಅವರನ್ನು ಗೌರವಿಸಿ, ಕಿರುಕಾಣಿಕೆ ನೀಡಿ ಸನ್ಮಾನಿಸಿದರು.

ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ

ಆಲೂರು-ಸಿದ್ದಾಪುರ: ವಿದ್ಯಾರ್ಥಿಗಳು ಮುಂದಿನ ಭವಿಷ್ಯವನ್ನು ಉತ್ತಮ ಅಂಕಗಳಿಸುವ ಮೂಲಕ ಉಜ್ವಲಗೊಳಿಸಿಕೊಳ್ಳಬೇಕಾಗಿದೆ ಎಂದು ಶನಿವಾರಸಂತೆ ವಿಘ್ನೇಶ್ವರ ಬಾಲಿಕಾ ಪದವಿಪೂರ್ವ ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷ ಬಿ.ಕೆ. ಸುಬ್ರಮಣಿ ಅಭಿಪ್ರಾಯಪಟ್ಟರು.

ಸ್ಥಳೀಯ ವಿಘ್ನೇಶ್ವರ ಬಾಲಿಕ ಪದವಿಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಕಾಲೇಜಿನ ವತಿಯಿಂದ ಹಮ್ಮಿಕೊಂಡಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿ, ಇಂದು ಸ್ಪರ್ಧಾತ್ಮಕ ಯುಗವಾಗಿದ್ದು ವಿದ್ಯಾರ್ಥಿಗಳು ಶೇ. 100 ರಷ್ಟು ಅಂಕಗಳಿಸುವ ಗುರಿಯನ್ನು ಇಟ್ಟುಕೊಂಡು ಓದಬೇಕಾಗಿದೆ. ಪರೀಕ್ಷೆಯನ್ನು ಉನ್ನತ ವ್ಯಾಸಾಂಗವನ್ನು ಪಡೆಯವ ಮೂಲಕ ಕಾಲೇಜಿನ ಕೀರ್ತಿಯನ್ನು ಹೆಚ್ಚಿಸುವ ಹೊಣೆಗಾರಿಕೆ ಮಕ್ಕಳಾದ ನಿಮ್ಮ ಕೈಯಲ್ಲಿದೆ ಎಂದರು.

ಕಾಲೇಜು ಪ್ರಾಂಶುಪಾಲ ಶಿವಪ್ರಕಾಶ್ ಮಾತನಾಡಿ, ವಿದ್ಯಾರ್ಥಿಗಳಿಗೆ ಯಾವದೇ ಓದಿನ ವಿಷಯದಲ್ಲಿ ಅನುಮಾನಗಳಿದ್ದರೆ ನೇರವಾಗಿ ತಮ್ಮ ಉಪನ್ಯಾಸಕರಲ್ಲಿ ಚರ್ಚಿಸಿ ಸಮಸ್ಯೆ ಬಗೆಹರಿಸಿಕೊಳ್ಳಿ. ಉಪನ್ಯಾಸಕರುಗಳು ಹೇಳಿರುವ ಮಾದರಿಯಲ್ಲೇ ಪರೀಕ್ಷೆಯನ್ನು ಎದುರಿಸಿ ಎಂದು ಸಲಹೆ ನೀಡಿದರು.

ಶಾರದಾ ಪೂಜೆಯನ್ನು ವಿದ್ಯಾರ್ಥಿಗಳು ನಡೆಸಿದರು. ವೇದಿಕೆಯಲ್ಲಿ ಕಾಲೇಜು ಕಾರ್ಯದರ್ಶಿ ಬೆಳ್ಳಿಯಪ್ಪ, ನಿರ್ದೇಶಕಿ ನಿತ್ಯನಿಧಿ ಹಾಗೂ ಉಪನ್ಯಾಸಕರುಗಳು ಉಪಸ್ಥಿತರಿದ್ದರು.

ಚುನಾವಣೆಯಲ್ಲಿ ಭ್ರಷ್ಟತೆ ರಾಷ್ಟ್ರಕ್ಕೆ ಮಾರಕ

ವೀರಾಜಪೇಟೆ: ಚುನಾವಣೆಗಳು ಪ್ರಜಾಪ್ರಭುತ್ವದ ಬುನಾದಿ. ಇಂದಿನ ಭ್ರಷ್ಟ ವ್ಯವಸ್ಥೆಯಲ್ಲಿ ಪ್ರಜಾಪ್ರಭುತ್ವ ಕವಲು ದಾರಿಯಲ್ಲಿ ನಿಂತಿದೆ ಎಂದು ವೀರಾಜಪೇಟೆ ಪ್ರೆಸ್ ಕ್ಲಬ್ ಅಧ್ಯಕ್ಷ ಕೋಲತಂಡ ರಘು ಮಾಚಯ್ಯ ಹೇಳಿದರು.

ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವೀರಾಜಪೇಟೆ, ಮಂಗಳೂರು ವಿಶ್ವವಿದ್ಯಾಲಯದ ರಾಜ್ಯ ಶಾಸ್ತ್ರ ಅಧ್ಯಾಪಕರ ಸಂಘದ ಆಶ್ರಯದಲ್ಲಿ ‘ರಾಜ್ಯಶಾಸ್ತ್ರದ ಬೆಳಕು ಭಿತ್ತಿಪತ್ರಿಕೆ’, ‘ಪ್ರಜಾಪ್ರಭುತ್ವ’ ಹಾಗೂ ‘ಸಮ್ಮಿಶ್ರ ಸರಕಾರ’ ಎಂಬ ವಿಷಯದ ಬಗ್ಗೆ ಒಂದು ದಿನದ ವಿಚಾರಗೋಷ್ಠಿಯ ಸಮಾರೋಪ ಸಮಾರಂಭದದಲ್ಲಿ ಮಾತನಾಡಿದರು. ಅಲ್ಪ ಕಾಸಿನ ಆಸೆಗಾಗಿ ನಮ್ಮ ಮತವನ್ನು ಮಾರಿಕೊಳ್ಳುವದರಿಂದ ಸಮ್ಮಿಶ್ರ ಸರಕಾರಗಳು ಉದ್ಭವವಾಗುತ್ತಿದೆ. ಇತರರಿಂದ ಹಣ ಪಡೆದುಕೊಂಡು ಮತದಾನ ಮಾಡುವವರು ಭ್ರಷ್ಟತೆಗೆ ತಮಗರಿಯದ ರೀತಿಯಲ್ಲಿ ಭ್ರಷ್ಟತೆಗೆ ದಾರಿ ಮಾಡಿಕೊಡುತ್ತಿದ್ದಾರೆ. ಉತ್ತಮ ವ್ಯಕ್ತಿಯನ್ನು ಆರಿಸಿ ಕಳುಹಿಸುವ ಜವಾಬ್ದಾರಿ ನಮ್ಮದಾಗಿರುತ್ತದೆ ಎಂದು ಹೇಳಿದರು.

ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಟಿ.ಕೆ. ಬೋಪಯ್ಯ ಮಾತನಾಡಿ, ಬಹುತೇಕ ವಿದ್ಯಾರ್ಥಿಗಳು ಪಿಯುಸಿ ಮುಗಿಸಿ ಹೊರ ದೇಶಗಳಿಗೆ ತೆರಳುತ್ತಿರುವದರಿಂದ ಅವರುಗಳು ಮತದಾನದ ಹಕ್ಕನ್ನು ಕಳೆದುಕೊಳ್ಳುತ್ತಿದ್ದಾರೆ. ಸರಿಯಾದ ಪ್ರಮಾಣದಲ್ಲಿ ಮತದಾನ ನಡೆಯದ ಕಾರಣ ಸಮ್ಮಿಶ್ರ ಸರಕಾರಗಳಿಗೆ ಮೊರೆ ಹೋಗುತ್ತಾರೆ. ದೇಶದ ಭವಿಷ್ಯವನ್ನು ಕಂಡುಕೊಳ್ಳಲು ಉತ್ತಮ ವ್ಯಕ್ತಿಯನ್ನು ಆರಿಸಿ ಕಳುಹಿಸುವದು ಉತ್ತಮ ಎಂದು ಹೇಳಿದರು. ಇದೇ ಸಂದರ್ಭ ವಿವಿಧ ಕಾಲೇಜು ವಿದ್ಯಾರ್ಥಿಗಳಿಗೆ ನಡೆದ ಸ್ಪರ್ಧೆಯ ಅಣುಕು ರಾಜಕಾರಣಿ ಕೆ.ಟಿ. ಪ್ರದೀಪ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮಡಿಕೇರಿ (ಪ್ರ), ಅದಾನ್ ಎಫ್.ಎಂ.ಸಿ. ಕಾಲೇಜು ಮಡಿಕೇರಿ (ದ್ವಿ), ಸಂವಿಧಾನದ ಪೂರ್ವ ಪೀಠಿಕೆ ಹೇಳುವ ಸ್ಪರ್ಧೆಯಲ್ಲಿ ನೀಲಮ್ಮ ಎಫ್.ಎಂ.ಸಿ. ಕಾಲೇಜು ಮಡಿಕೇರಿ (ಪ್ರ), ರೇಣು ಎಂ.ಪಿ. ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮಡಿಕೇರಿ (ದ್ವಿ), ಭಾಷಣ ಸ್ಪರ್ಧೆಯ ಸಂಯುಕ್ತ ಸರ್ಕಾರದ ಕಾಲಘಟ್ಟದಲ್ಲಿ ಪ್ರಜಾಪ್ರಭುತ್ವ ಇರುವ ಸವಾಲುಗಳು ವಿಷಯದಲ್ಲಿ ಮಧುರಾ ಪ್ರಥಮ ದರ್ಜೆ ಕಾಲೇಜು ವೀರಾಜಪೇಟೆ (ಪ್ರ), ಗಾನವಿ ಪ್ರಥಮ ದರ್ಜೆ ಕಾಲೇಜು ಕೊಡ್ಲಿಪೇಟೆ (ದ್ವಿ), ದೇಶಭಕ್ತಿ ನೃತ್ಯ ಸ್ಪರ್ಧೆಯಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮಡಿಕೇರಿ (ಪ್ರ), ಎಫ್.ಎಂ.ಸಿ. ಕಾಲೇಜು ಮಡಿಕೇರಿ (ದ್ವಿ) ಸ್ಥಾನ ಪಡೆದುಕೊಂಡರು.

ವೇದಿಕೆಯಲ್ಲಿ ಗೋಣಿಕೊಪ್ಪದ ಉದ್ಯಮಿ ಉಂಬೈ, ರಾಜ್ಯಶಾಸ್ತ್ರದ ಉಪನ್ಯಾಸಕರಾದ ವಿದ್ಯಾ, ಅಕ್ಷತಾ, ವನಿತ್ ಕುಮಾರ್, ಬೆಳಕು ಸಂಘದ ಅಧ್ಯಕ್ಷ ರವಿ ಉಪಸ್ಥಿತರಿದ್ದರು.

ಅಪ್ಪಚ್ಚಕವಿ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ

ಪೊನ್ನಂಪೇಟೆ: ಇಲ್ಲಿನ ಅಪ್ಪಚ್ಚಕವಿ ವಿದ್ಯಾಲಯದ ಹತ್ತನೇ ತರಗತಿ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭವನ್ನು ಇತ್ತೀಚೆಗೆ ಏರ್ಪಡಿಸಲಾಗಿತ್ತು. ಅಧ್ಯಕ್ಷತೆಯನ್ನು ಶಾಲಾ ಆಡಳಿತ ಮಂಡಳಿ ಅಧ್ಯಕ್ಷೆ ಮಲಚೀರ ಆಶಾ ಗಣೇಶ್, ಮುಖ್ಯ ಅತಿಥಿಯಾಗಿ ಉಸ್ತುವಾರಿ ಸಚಿವರ ಆಪ್ತ ಕಾರ್ಯದರ್ಶಿ ಕದ್ದಣಿಯಂಡ ಹರೀಶ್ ಬೋಪಣ್ಣ ಭಾಗವಹಿಸಿದ್ದರು.

ಶಾಲಾ ಉಪಾಧ್ಯಕ್ಷ ಮೂಕಳಮಾಡ ಅರಸು ನಂಜಪ್ಪ, ಖಜಾಂಚಿ ಆರದ ಎ.ಆರ್., ಶಾಲೆಯ ಖಾಯಂ ಸದಸ್ಯ ಕಾಟಿಮಾಡ ಎ. ಜಿಮ್ಮಿ ಅಣ್ಣಯ್ಯ, ಲೆಕ್ಕಪರಿಶೋಧಕ ಯಂ.ಬಿ. ನಂಜಪ್ಪ, ಪೊನ್ನಂಪೇಟೆ ಕೊಡವ ಸಮಾಜದ ಸದಸ್ಯೆ ಆಶಾ ಪ್ರಕಾಶ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸಾಂಸ್ಕøತಿಕ ಕಾರ್ಯಕ್ರಮದೊಂದಿಗೆ ಭೋಜನಕೂಟ ಏರ್ಪಡಿಸಲಾಗಿತ್ತು. ಮನೀಷ್ ತಂಡ ಪ್ರಾರ್ಥಿಸಿ, ಮುಖ್ಯೋಪಾಧ್ಯಾಯಿನಿ ಎಸ್.ಎಸ್. ತನುಜ ಸ್ವಾಗತಿಸಿ, ಶಿಕ್ಷಕಿ ಭವ್ಯ ವಂದಿಸಿದರು.ಚಿಂತನಾ ದಿನಾಚರಣೆ

ವೀರಾಜಪೇಟೆ: ತಾ. 22 ರಂದು ಸ್ಕೌಟ್ಸ್ ಮತ್ತು ಗ್ಯೆಡ್ಸ್‍ನ ಸಂಸ್ಥಾಪಕ ಲಾರ್ಡ್ ಬೇಡನ್ ಪೊವೆಲ್ ಅವರ ಜನ್ಮ ದಿನವನ್ನು ಚಿಂತನಾ ದಿನವನ್ನಾಗಿ ಅರಮೇರಿಯ ಎಸ್.ಎಂ.ಎಸ್. ಶಾಲೆಯ ಆವರಣದಲ್ಲಿ ಆಚರಿಸಲಾಯಿತು.

ಶಾಲೆಯ ಸ್ಕೌಟ್ಸ್ ಮತ್ತು ಗೈಡ್ಸ್‍ನವರು ಧ್ವಜಾರೋಹಣ ನೆರವೇರಿಸಿದರು. ಏಳನೇ ತರಗತಿ ಗೈಡ್ ವಂಶಿಕಾ ಸ್ವಾಗತಿಸಿದರು. ಸಮಾರಂಭದ ಅಧ್ಯಕ್ಷತೆಯನ್ನು ಅರಮೇರಿ ಕಳಂಚೇರಿ ಮಠದ ಪೀಠಾಧಿಪತಿ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ವಹಿಸಿದ್ದರು.

ಉಡುಪಿಯ ನಿವೃತ್ತ ಕನ್ನಡ ಅಧ್ಯಾಪಕ ಯು.ಬಿ. ಜಯರಾಮ್ ರಾವ್ ಲಾರ್ಡ್ ಬೇಡನ್ ಪೋವೆಲ್ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ, ಗುರು-ಹಿರಿಯರಿಗೆ ಗೌರವ, ಭಕ್ತಿಯನ್ನು ತೋರಿ, ಬದುಕಿನಲ್ಲಿ ಅಳವಡಿಸಿಕೊಳ್ಳಬೇಕಾದ ಶಿಸ್ತಿನ ಬಗ್ಗೆ ಮನವರಿಕೆ ಮಾಡಿಕೊಟ್ಟರು. ಏಳನೇ ತರಗತಿಯ ಆರುಷಿ ಅಯ್ಯಪ್ಪ ದಿನದ ಮಹತ್ವವನ್ನು ತಿಳಿಸಿದರು.

ಶಾಲೆಯ ಪ್ರಾಂಶುಪಾಲೆ ಕೆ.ಪಿ. ಕುಸುಂ, ಸ್ಕೌಟ್ ಮಾಸ್ಟರ್ ಭೀಮಯ್ಯ ಮತ್ತು ಗೈಡ್ಸ್ ಶಿಕ್ಷಕಿ ಮೈಥಿಲಿ ರಾವ್ ಹಾಗೂ ಶಿಕ್ಷಕ ವೃಂದ ಸಮಾರಂಭದಲ್ಲಿ ಪಾಲ್ಗೊಂಡಿದ್ದರು.

ವೇದಿಕೆಯಲ್ಲಿ ಸ್ವಾಮೀಜಿಯವರು ತಮ್ಮ ಗುರುಗಳಾದ ಯು.ಬಿ. ಜಯರಾಮ್ ರಾವ್ ಅವರನ್ನು ಗೌರವಿಸಿ, ಕಿರುಕಾಣಿಕೆ ನೀಡಿ ಸನ್ಮಾನಿಸಿದರು.

ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ

ಆಲೂರು-ಸಿದ್ದಾಪುರ: ವಿದ್ಯಾರ್ಥಿಗಳು ಮುಂದಿನ ಭವಿಷ್ಯವನ್ನು ಉತ್ತಮ ಅಂಕಗಳಿಸುವ ಮೂಲಕ ಉಜ್ವಲಗೊಳಿಸಿಕೊಳ್ಳಬೇಕಾಗಿದೆ ಎಂದು ಶೆಟಲ್ ಪಂದ್ಯಾಟದಲ್ಲಿ ಜಯಗಳಿಸಿದ್ದಾರೆ.

ಮೇಲಾಟದಲ್ಲಿ ನಾಚಪ್ಪ, ಭಾರದ ಗುಂಡು ಎಸೆತದಲ್ಲಿ ಸನವಿ ಗೌರಮ್ಮ, ಎತ್ತರ ಜಿಗಿತ ಹಾಗೂ ಉದ್ದ ಜಿಗಿತದಲ್ಲಿ ಆರ್ಯನ್ ತಮ್ಮಯ್ಯ ಮೊದಲನೇ ಸ್ಥಾನ ಪಡೆದಿದ್ದಾರೆ. ತಾಲೂಕು ಮಟ್ಟದಲ್ಲಿ ಹಾಕಿ, ಹ್ಯಾಂಡ್‍ಬಾಲ್ ಹಾಗೂ ಶೆಟಲ್ ಪಂದ್ಯಗಳಲ್ಲಿ, ಬಾಸ್ಕೆಟ್ ಬಾಲ್ ಮತ್ತು ಹ್ಯಾಂಡ್‍ಬಾಲ್ ಪಂದ್ಯಗಳಲ್ಲಿ ವಿದ್ಯಾರ್ಥಿನಿಯರು ಜಯಗಳಿಸಿದ್ದಾರೆ. ಭಾರದ ಗುಂಡು ಎಸೆತದಲ್ಲಿ ನಾಟ್ಯ ದೇಚಕ್ಕ ಮೊದಲ ಸ್ಥಾನಗಳಿಸಿದ್ದಾರೆ.

ಜಿಲ್ಲಾಮಟ್ಟದಲ್ಲಿ ಶಾಲಾ ಬಾಲಕರು ಹಾಕಿ ಹಾಗೂ ಶೆಟಲ್ ಪಂದ್ಯಾವಳಿಯಲ್ಲಿ ಮೊದಲ ಸ್ಥಾನ ಹಾಗೂ ಬಾಲಕಿಯರ ಹ್ಯಾಂಡ್‍ಬಾಲ್ ಹಾಗೂ ಬಾಸ್ಕೆಟ್‍ಬಾಲ್ ಪಂದ್ಯದಲ್ಲಿ ಮೊದಲ ಸ್ಥಾನ ಹಾಗೂ ಶ್ರೇಷ್ಟ ನಾಚಪ್ಪ 100 ಮೀಟರ್ ಓಟದಲ್ಲಿ ಪ್ರಥಮ ಸ್ಥಾನಗಳಿಸಿದ್ದಾಳೆ.

ವಿಭಾಗ ಮಟ್ಟದ ಬಾಸ್ಕೆಟ್‍ಬಾಲ್ ಪಂದ್ಯ ಮಂಡ್ಯದಲ್ಲಿ ನಡೆದಿದ್ದು, ಶಾಲಾ ವಿದ್ಯಾರ್ಥಿನಿಯರು ಎರಡನೇ ಸ್ಥಾನ ಹಾಗೂ ಹ್ಯಾಂಡ್‍ಬಾಲ್ ಪಂದ್ಯದಲ್ಲಿಯೂ ವಿದ್ಯಾರ್ಥಿನಿಯರು ಪ್ರಥಮ ಸ್ಥಾನ ಪಡೆದಿದ್ದಾರೆ. ವಿಭಾಗಮಟ್ಟದಲ್ಲಿ ನಡೆದ ಹಾಕಿ ಪಂದ್ಯದಲ್ಲಿ ಬಾಲಕರು ಅತ್ಯುತ್ತಮ ಪ್ರದರ್ಶನ ತೋರಿ ಪ್ರಥಮ ಹಾಗೂ ಆಕರ್ಷ್ ಬಿದ್ದಪ್ಪ ಪಂದ್ಯ ಶ್ರೇಷ್ಠನಾಗಿ ಹೊರಹೊಮ್ಮಿದ್ದಾನೆ.

ರಾಜ್ಯಮಟ್ಟದ ಪಂದ್ಯಾಟ ಹಾವೇರಿಯಲ್ಲಿ ನಡೆದು ಹ್ಯಾಂಡ್‍ಬಾಲ್ ಪಂದ್ಯಾಟದಲ್ಲಿ ಲಯನ್ಸ್ ಬಾಲಕಿಯರು ತೃತೀಯ ಹಾಗೂ ರಾಜ್ಯಮಟ್ಟದ ಹಾಕಿ ಪಂದ್ಯಾವಳಿಯಲ್ಲಿ ಬಾಲಕರು ಮೊದಲನೇ ಸ್ಥಾನಗಳಿಸಿದ್ದಾರೆ. ಆರು ವಿದ್ಯಾರ್ಥಿಗಳು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಛತ್ತೀಸ್‍ಗಡ್‍ನಲ್ಲಿ ನಡೆದ ರಾಷ್ಟ್ರಮಟ್ಟದ ಹಾಕಿ ಪಂದ್ಯದಲ್ಲಿ ಲಯನ್ಸ್ ಶಾಲಾ ಬಾಲಕರಾದ ಆಕರ್ಷ್ ಬಿದ್ದಪ್ಪ, ಗೌರವ್ ಗಣಪತಿ, ಲಿಖಿತ್ ಕಾಳಯ್ಯ, ಶಿವಾಂತ್, ಉಜ್ವಲ್ ಅಪ್ಪಚ್ಚು, ಸಪನ್ ಅಯ್ಯಪ್ಪ ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸಿದ್ದಾರೆ.

ಬಾಸ್ಕೆಟ್‍ಬಾಲ್ ಪಂದ್ಯದಲ್ಲಿ ನಾಟ್ಯ ದೇಚಕ್ಕ ರಾಜ್ಯವನ್ನು ಪ್ರತಿನಿಧಿಸಿದ್ದಾಳೆ. ಡಿಸೆಂಬರ್ ತಿಂಗಳಲ್ಲಿ ನಡೆದ ಜಿಲ್ಲಾಮಟ್ಟದ ಹಾಕಿ ಕೂರ್ಗ್ ಅವರಿಂದ ಆಯೋಜಿಸಲಾಗಿದ್ದ ಹಾಕಿ ಪಂದ್ಯದಲ್ಲಿ 14 ವರ್ಷದ ವಯೋಮಿತಿಯ ಬಾಲಕರ ವಿಭಾಗದಲ್ಲಿ ಶಾಲೆಯ ಬಾಲಕರು ಉತ್ತಮ ಪ್ರದರ್ಶನ ನೀಡಿ ದ್ವಿತೀಯ ಸ್ಥಾನಗಳಿಸಿದ್ದಾರೆ ಎಂದು ಕೈಕೇರಿಯ ಲಯನ್ಸ್ ಶಾಲಾ ಪ್ರಕಟಣೆ ತಿಳಿಸಿದೆ.

ವಿದ್ಯಾಸಂಸ್ಥೆ ವಾರ್ಷಿಕೋತ್ಸವ

ಮಡಿಕೇರಿ: ನಗರದ ಹೊಸ ಬಡಾವಣೆಯಲ್ಲಿರುವ ಯೂರೋ ಕಿಡ್ಸ್ ವಿದ್ಯಾಸಂಸ್ಥೆ ಹಾಗೂ ಮಡಿಕೇರಿ ಪಬ್ಲಿಕ್ ಶಾಲೆಯ ವಾರ್ಷಿಕೋತ್ಸವದ ಸಮಾರಂಭ ಸಂಸ್ಥೆಯ ಆವರಣದಲ್ಲಿ ಇತ್ತೀಚೆಗೆ ನಡೆಯಿತು.

ಕಾಫಿ ಬೆಳೆಗಾರ ನಾಪಂಡ ರವಿ ಕಾಳಪ್ಪ ಅತಿಥಿಯಾಗಿ ಪಾಲ್ಗೊಂಡು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಸಂಸ್ಥೆಯ ಅಧ್ಯಕ್ಷ ಕೆ.ಎಂ. ನಾಣಯ್ಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸಂಸ್ಥೆಯ ಖಜಾಂಚಿ ಬಿ.ಆರ್. ಚಂದನ್ ಭಾಗವಹಿಸಿದ್ದರು.

ಶಾಲೆಯ ವಿದ್ಯಾರ್ಥಿಗಳು ವಿವಿಧ ನೃತ್ಯ, ಸಮೂಹ ಗಾಯನವನ್ನು ಪ್ರಸ್ತುತ ಪಡಿಸಿದರು. ಸ್ವಾತಂತ್ರ್ಯ ಸಂಗ್ರಾಮದ ಹುತಾತ್ಮ ಭಗತ್‍ಸಿಂಗ್ ಬಗ್ಗೆ ನಾಟಕವನ್ನು ಪ್ರದರ್ಶಿಸಲಾಯಿತು.

ಮುಖ್ಯ ಶಿಕ್ಷಕಿ ವಿಜಯ ಸ್ವಾಗತಿಸಿ, ಸಂಸ್ಥೆಯ ಆಡಳಿತ ಮುಖ್ಯಸ್ಥರಾದ ರಶ್ಮಿ ದೀಪ ನಿರೂಪಿಸಿ, ಶಿಕ್ಷಕಿ ಪ್ರತಿಮಾ ವರದಿ ವಾಚಿಸಿ, ಶಿಕ್ಷಕಿ ಲಾಂಚನ ವಂದಿಸಿದರು. ಪೋಷಕರು, ಶಿಕ್ಷಕ ವೃಂದದವರು ಹಾಗೂ ಆಡಳಿತ ವೃಂದದವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.ಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯಿನಿ ಕೆ.ಎ. ಸಾವಿತ್ರಿ ಮಾತನಾಡಿ, ಇಂದಿನ ಶಿಕ್ಷಣ ಕಂಪ್ಯೂಟರ್ ಆಧಾರಿತವಾಗಿದ್ದು ಸ್ಮಾರ್ಟ್‍ಕ್ಲಾಸ್ ತರಬೇತಿ ಗ್ರಾಮೀಣ ಪ್ರದೇಶದ ಮಕ್ಕಳಿಗೆ ಪ್ರಾಥಮಿಕ ಹಂತದಲ್ಲಿಯೇ ದೊರೆಯುತ್ತಿರುವದು ಶ್ಲಾಘನೀಯ ಎಂದರು.

ಸಮಾರಂಭದ ಅಧ್ಯಕ್ಷತೆಯನ್ನು 7ನೇ ಹೊಸಕೋಟೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸುಮಲತಾ ವಹಿಸಿದ್ದರು. ಸಮಾರಂಭದ ವೇದಿಕೆಯಲ್ಲಿ ದಾನಿಗಳಾದ ಉದ್ಯಮಿಗಳಾದ ಕಾವೇರಪ್ಪ, ಕೊರನ ಮನು ಬೆಳ್ಯಪ್ಪ, ದಿನೇಶ್, ರಮೇಶ್, ಹರಿಪ್ರಸಾದ್, 7ನೇ ಹೊಸಕೋಟೆ ಗ್ರಾ.ಪಂ. ಪಿ.ಡಿ.ಓ. ಆಸ್ಮ, ಸುಂಟಿಕೊಪ್ಪ ಗ್ರಾ.ಪಂ. ಉಪಾಧ್ಯಕ್ಷ ಪಿ.ಆರ್. ಸುಕುಮಾರ್, 7ನೇ ಹೊಸಕೋಟೆ ಗ್ರಾ.ಪಂ. ಸದಸ್ಯರುಗಳಾದ ಎ.ಪಿ. ರಮೇಶ್, ಪುಷ್ಪಾ, ಶಾಲಾ ಎಸ್.ಡಿ.ಎಂ.ಸಿ. ಅಧ್ಯಕ್ಷೆ ಕಲಾ ಉಪಸ್ಥಿತರಿದ್ದರು.

ಶಾಲಾ ಮಕ್ಕಳ ಸಾಂಸ್ಕøತಿಕ ಕಾರ್ಯಕ್ರಮ ಅತಿಥಿಗಳು ಹಾಗೂ ಪೋಷಕರ ಜನಮನಸೂರೆಗೊಳಿಸಿದ್ದವು. ಶಿಕ್ಷಕಿ ಶಕೀಲಾ ಸ್ವಾಗತಿಸಿ, ಮುಖ್ಯ ಶಿಕ್ಷಕಿ ಲೀಲಾವತಿ ವರದಿ ವಾಚಿಸಿ, ಪಿ.ಆರ್. ದಿವ್ಯ ನಿರೂಪಿಸಿ, ವಂದಿಸಿದರು.

ಪ್ರತಿಭಾ ಪುರಸ್ಕಾರ-ಶಾರದಾ ಪೂಜೆ

ಕುಶಾಲನಗರ: ವಿದ್ಯಾರ್ಥಿಗಳ ಭವಿಷ್ಯ ರೂಪಿಸುವಲ್ಲಿ ಪ್ರೌಢಶಾಲಾ ತರಗತಿಗಳು ಪ್ರಮುಖ ಘಟ್ಟವಾಗಿದೆ ಎಂದು ಕುಶಾಲನಗರ ಸರಕಾರಿ ಪದವಿಪೂರ್ವ ಕಾಲೇಜು ಮತ್ತು ಪ್ರೌಢಶಾಲಾ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ವಿ.ಎನ್. ವಸಂತಕುಮಾರ್ ತಿಳಿಸಿದ್ದಾರೆ.

ಪ್ರೌಢಶಾಲಾ ವಿಭಾಗದ ವತಿಯಿಂದ ಏರ್ಪಡಿಸಿದ್ದ ಪ್ರತಿಭಾ ಪುರಸ್ಕಾರ ಮತ್ತು ಶಾರದಾ ಪೂಜೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ಕಠಿಣ ಅಭ್ಯಾಸದ ಮೂಲಕ ಉತ್ತಮ ಫಲಿತಾಂಶ ಸಾಧ್ಯ, ಪರೀಕ್ಷೆ ಬಗ್ಗೆ ಭಯಪಡುವ ಅಗತ್ಯವಿಲ್ಲ. ದಿನನಿತ್ಯ ವ್ಯಾಸಂಗದತ್ತ ಗಮನಹರಿಸಿ ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಪಡೆಯುವಂತೆ ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ಶಾಲಾ ಸಭಾಂಗಣದಲ್ಲಿ ನಡೆದ ಶಾರದಾ ಪೂಜೆ ಕಾರ್ಯಕ್ರಮದಲ್ಲಿ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಭಕ್ತಿಗೀತೆ ಹಾಡಿದರು. ಮಹಾಮಂಗಳಾರತಿ ನಂತರ ಪ್ರಸಾದ ವಿತರಣೆ ನಡೆಯಿತು.

2016-17ನೇ ಸಾಲಿನ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಾದ ಅಖಿಲೇಶ್, ದೇವಿಕಾ ಮತ್ತು ಕ್ರೀಡೆ ಹಾಗೂ ಪ್ರತಿಭಾ ಕಾರಂಜಿಯಲ್ಲಿ ವಿಜೇತರಾದ ಸವಿತಾ, ಮಂಜುನಾಥ್, ಸುದೀಪ್, ಉಮೇಶ್ ಅವರುಗಳನ್ನು ಗೌರವಿಸಲಾಯಿತು.

ಶಾಲಾಭಿವೃದ್ಧಿ ಸಮಿತಿ ಸದಸ್ಯರಾದ ರಫೀಕ್, ಮಂಜು, ಶಿಕ್ಷಕರಾದ ಉರಾ ನಾಗೇಶ್, ಸದಾಶಿವಯ್ಯ ಪಲ್ಲೇದ್, ಎ.ಸಿ. ಮಂಜುನಾಥ್, ತುಳಸಿ ಮತ್ತಿತರರು, ಶಿಕ್ಷಕೇತರರು ಇದ್ದರು.

ಸ್ಕೌ�?