ಮಡಿಕೇರಿ, ಫೆ. 25: ಮಡಿಕೇರಿ ಸಂಚಾರಿ ಪೊಲೀಸ್ ಠಾಣೆಗೆ ಮಹಿಳಾ ಪಿಎಸ್ಐ ಆಗಿ ಚೆನ್ನರಾಯಪಟ್ಟಣ ಗ್ರಾಮಾಂತರ ಠಾಣೆಯ ಪಿಎಸ್ಐ ಟಿ.ಪಿ. ಕುಸುಮ ಅವರನ್ನು ನೇಮಕಗೊಳಿಸಿ ಜಿಲ್ಲೆಯ ವಿವಿಧ ಠಾಣೆಗಳ ಪಿಎಸ್ಐಗಳನ್ನು ವರ್ಗಾವಣೆ ಮಾಡಿ ದಕ್ಷಿಣ ವಲಯ ಪೊಲೀಸ್ ಮಹಾ ನಿರೀಕ್ಷಕರು ಆದೇಶ ಹೊರಡಿಸಿದ್ದಾರೆ.
ಕೊಡಗು ಜಿಲ್ಲೆಯ ಭಾಗಮಂಡಲ ಪೊಲೀಸ್ ಠಾಣೆಯ ಎಂ.ಕೆ. ಸದಾಶಿವ ಅವರನ್ನು ಹಾಸನ ಜಿಲ್ಲೆಯ ಹಳ್ಳಿಮೈಸೂರು ಠಾಣೆಗೆ, ಶನಿವಾರಸಂತೆಯ ಹೆಚ್.ಎಂ. ಮರಿಸ್ವಾಮಿ ಅವರನ್ನು ಶ್ರವಣಬೆಳಗೊಳ, ಮಡಿಕೇರಿ ಗ್ರಾಮಾಂತರ ಅಪರಾಧ ವಿಭಾಗದ ಪಿಎಸ್ಐ ಹೆಚ್.ಎಸ್. ಬೋಜಪ್ಪ ಅವರನ್ನು ಹಾಸನ ಜಿಲ್ಲೆಯ ದುದ್ದ ಠಾಣೆಗೆ, ಮಹಿಳಾ ಠಾಣೆಯ ಕೆ.ಬಿ. ಅಚ್ಚಮ್ಮ ಅವರನ್ನು ಮಂಡ್ಯ ಜಿಲ್ಲೆಯ ಮಹಿಳಾ ಠಾಣೆಗೆ, ವೀರಾಜಪೇಟೆಯ ಎಫ್ಎಂಎಸ್ನ ಪಿ.ಬಿ. ಮುತ್ತ ಅವರನ್ನು ಹುಣಸೂರು ಗ್ರಾಮಾಂತರ ಠಾಣೆ (ಅಪರಾಧ)ಗೆ, ಗೋಣಿಕೊಪ್ಪ (ಕಾನೂನು ಮತ್ತು ಸುವ್ಯವಸ್ಥೆ) ಹೆಚ್.ವೈ. ರಾಜು ಅವರನ್ನು ಮೈಸೂರು ಜಿಲ್ಲೆಯ ಬೆಟ್ಟದಪುರ ಠಾಣೆಗೆ, ವೀರಾಜಪೇಟೆ ಗ್ರಾಮಾಂತರ ಠಾಣೆಯ ಸುರೇಶ್ ಬೋಪಣ್ಣ ಅವರನ್ನು ಹಾಸನ ಜಿಲ್ಲೆಯ ಪೆನ್ಷನ್ ಮೊಹಲ್ಲಾ (ಕಾ ಮತ್ತು ಸು) ಠಾಣೆಗೆ ವರ್ಗಾವಣೆಗೊಳಿಸಿ ಆದೇಶ ಹೊರಡಿಸಿದ್ದಾರೆ.
(ಮೊದಲ ಪುಟದಿಂದ) ಭಾಗಮಂಡಲ ಪೊಲೀಸ್ ಠಾಣೆಗೆ ಚೆನ್ನರಾಯಪಟ್ಟಣ ನಗರ ಠಾಣೆ (ಅಪರಾಧ)ಯ ಪುಟ್ಟರಾಜಯ್ಯ, ಕೊಡಗು ಜಿಲ್ಲಾ ಡಿ.ಎಸ್.ಬಿ.ಗೆ ಹಾಸನ ಜಿಲ್ಲೆ ಬೇಲೂರು ಠಾಣೆಯ ಹೆಚ್.ಎನ್. ಬಾಲು, ಗೋಣಿಕೊಪ್ಪ (ಕಾ ಮತ್ತು ಸು) ಠಾಣೆಗೆ ಹಾಸನ ಜಿಲ್ಲೆಯ ಅರೇಹಳ್ಳಿ ಠಾಣೆಯ ಹೆಚ್. ಸುಬ್ಬಯ್ಯ, ಕುಟ್ಟ ಪೊಲೀಸ್ ಠಾಣೆಗೆ ಹಾಸನ ಜಿಲ್ಲೆಯ ಹಳ್ಳಿಮೈಸೂರು ಠಾಣೆಯ ಶಕುಂತಲಾ, ಶನಿವಾರಸಂತೆ ಪೊಲೀಸ್ ಠಾಣೆಗೆ ಮೈಸೂರು ಜಿಲ್ಲೆ ಟಿ.ಎನ್. ಠಾಣೆಯ ಆನಂದ್, ವೀರಾಜಪೇಟೆ ಗ್ರಾಮಾಂತರ ಠಾಣೆಗೆ ಚಾಮರಾಜನಗರ ಜಿಲ್ಲೆಯ ಸಂತೆಮರಹಳ್ಳಿ ಠಾಣೆಯ ಬಸವರಾಜು ಅವರನ್ನು ನೇಮಕಗೊಳಿಸಿ ಆದೇಶ ಹೊರಡಿಸಿದ್ದಾರೆ.