ಗೋಣಿಕೊಪ್ಪಲು ವರದಿ, ಫೆ. 14 : ಭದ್ರಗೊಳ ಗ್ರಾಮದ ಕಾಫಿ ತೋಟದ ಮುಖ್ಯ ರಸ್ತೆ ಸಮೀಪ ಅಂದಾಜು 60 ವಯಸ್ಸಿನ ಅಪರಿಚಿತ ಮಹಿಳೆ ಅಸ್ವಸ್ಥ ಸ್ಥಿತಿಯಲ್ಲಿ ಪತ್ತೆಯಾದ ಹಿನ್ನೆಲೆ ಸಾರ್ವಜನಿಕರ ಸಹಾಯದಿಂದ ಗೋಣಿಕೊಪ್ಪಲು ಆರೋಗ್ಯ ಕೇಂದ್ರಕ್ಕೆ ದಾಖಲಿಸಲಾಗಿ ವೈದ್ಯರು ಮೃತಪಟ್ಟಿರುವದಾಗಿ ಧೃಡಪಡಿಸಿದ್ದಾರೆ. ವಾರಸುದಾರರು ಯಾರಾದರು ಇದ್ದಲ್ಲಿ ಪೊಲೀಸ್ ಅಧೀಕ್ಷಕರು 08272 229000, ವೃತ್ತ ನಿರೀಕ್ಷಕರು ಗೋಣಿಕೊಪ್ಪಲು 08274 247209 ಉಪನಿರೀಕ್ಷಕರು ಪೊನ್ನಂಪೇಟೆ ಠಾಣೆ 08274 249044 ಸಂಪರ್ಕಿಸಬೇಕಾಗಿ ಪೊನ್ನಂಪೇಟೆ ಠಾಣೆ ಉಪನಿರೀಕ್ಷಕರು ತಿಳಿಸಿದ್ದಾರೆ.