*ಗೋಣಿಕೊಪ್ಪಲು, ಫೆ. 14: ಪರಿಪೂರ್ಣ ಜೀವನ ಕಾಣಲು ಆಧ್ಯಾತ್ಮಿಕತೆಯಿಂದ ಮಾತ್ರ ಸಾಧ್ಯ ಎಂದು ಪೆÇನ್ನಂಪೇಟೆ ರಾಮಕೃಷ್ಣ ಶಾರದಾಶ್ರಮದ ಅಧ್ಯಕ್ಷ ಸ್ವಾಮಿ ಬೋದಸ್ವರೂಪಾನಂದಾಜೀ ಹೇಳಿದರು. ಮಾತಾಯಿ ಪುರುಷರ ಸ್ವಸಹಾಯ ಸಂಘ ಪೆÇನ್ನಂಪೇಟೆ ಬಸ್ ನಿಲ್ದಾಣದಲ್ಲಿ ಆಯೋಜಿಸಿದ 12ನೇ ವರ್ಷದ ಶಿವರಾತ್ರಿ ಸಂಭ್ರಮಾಚರಣೆಗೆ ಚಾಲನೆ ನೀಡಿ ಮಾತನಾಡಿದರು. ಪೆÇನ್ನಂಪೇಟೆ ಸಂತ ಅಂತೋಣಿ ಚರ್ಚ್‍ನ ಧರ್ಮಗುರು ಜೇಕಬ್ ಕೊಲ್ಲನೂರ್ ಮಾತನಾಡಿ, ಧರ್ಮ, ಭಾಷೆ, ಪ್ರಾರ್ಥನೆಗಳು ವಿಭಿನ್ನವಾದರೂ ಪ್ರತಿಯೊಬ್ಬರು ದೇವರನ್ನು ಕಾಣುವದೇ ಮುಖ್ಯವಾಗಿರುತ್ತದೆ ಎಂದರು. ಬಿಗ್ ಬಾಸ್ ಖ್ಯಾತಿಯ ದಿವಾಕರ್ ಮಾತನಾಡಿ, ಈ ಮಣ್ಣಿನ ಋಣ ತೀರಿಸಲು ತನಗೆ ಶಕ್ತಿಯನ್ನು ಕರುಣಿಸಲು ದೇವರಲ್ಲಿ ಪ್ರಾರ್ಥಿಸುತ್ತೇನೆ. ಪೆÇನ್ನಂಪೇಟೆ ನಾಡಿನಲ್ಲಿ ಕೂಲಿ ಕೆಲಸ ಮಾಡುತ್ತಿದ್ದ ತಾನು ಇಂದು ರಾಜ್ಯದ ಜನತೆ ಗುರುತಿಸುವಂತೆ ಮಾಡಿದೆ ಎಂದರೆ ಇಲ್ಲಿನ ಜನರು ನೀಡಿದ ಭಿಕ್ಷೆಯಾಗಿದೆ ಎಂದರು. ಪೆÇನ್ನಂಪೇಟೆ ಪೆÇಲೀಸ್ ಠಾಣಾಧಿಕಾರಿ ಬಿ.ಜಿ. ಮಹೇಶ್ ಮಾತನಾಡಿ, ಮಕ್ಕಳ ಪ್ರತಿಭೆಗಳನ್ನು ಹೊರತರಲು ಪೆÇೀಷಕರು ವೇದಿಕೆಗಳನ್ನು ನಿರ್ಮಿಸಬೇಕು ಎಂದು ಹೇಳಿದರು.
ವೇದಿಕೆಯಲ್ಲಿ ಗ್ರಾ.ಪಂ. ಅಧ್ಯಕ್ಷೆ ಮೂಕಳೇರ ಸುಮಿತಾ ಗಣೇಶ್, ಬೇಗೂರು ಕಲಾಯಿ ಮಸೀದಿ ತಕ್ಕ ಎ.ಪಿ. ಚೇಕು ಹಾಜಿ, ಮಾತಾಯಿ ಪುರುಷರ ಸ್ವಸಹಾಯ ಸಂಘದ ಅಧ್ಯಕ್ಷ ಟಿ.ವಿ. ಸುರೇಶ್, ಗೌರವ ಅಧ್ಯಕ್ಷ ಸಿ.ಬಿ. ವಿನೋದ್, ಗೌರವ ಉಪಾಧ್ಯಕ್ಷ ಪಿ.ಜೆ. ವಿಜಯನ್, ಗ್ರಾಮ ವಿಕಾಸ ಸ್ವಸಹಾಯ ಸಂಘ ರಾಜ್ಯ ಅಧ್ಯಕ್ಷ ಎಂ.ಬಿ. ಅನೀಸ್ ಹಾಜರಿದ್ದರು. ಈ ಸಂದರ್ಭ ಅಂತರರಾಷ್ಟ್ರೀಯ ಹಿರಿಯ ಓಟಗಾರ ಪೆಮ್ಮಂಡ ಅಪ್ಪಯ್ಯ, ನಿವೃತ್ತ ಶಿಕ್ಷಕಿ ಪೆಮ್ಮಂಡ ಮಾಯಮ್ಮ ಅವರನ್ನು ಸನ್ಮಾನಿಸಲಾಯಿತು.
ಟಿ. ಶೆಟ್ಟಿಗೇರಿ: ಇಲ್ಲಿನ ಶ್ರೀ ಸಿದ್ಧಾರೂಡ ಆಶ್ರಮದಲ್ಲಿ ಬೆಳಿಗ್ಗೆಯಿಂದಲೇ ಮಹಾ ಶಿವರಾತ್ರಿ ಪ್ರಯುಕ್ತ ವಿಶೇಷ ಪೂಜಾ ವಿಧಿ-ವಿಧಾನಗಳು ಜರುಗಿದವು. ಮುಂಜಾನೆ ನಿತ್ಯಪೂಜೆ, ಗಣಪತಿ ಹೋಮ, ರುದ್ರಾಭಿಷೇಕ, ಬಿಲ್ವಾರ್ಚನೆ ಸೇವೆಗಳು ನಡೆಯಿತು. ಬಳಿಕ ನಡೆದ ಧಾರ್ಮಿಕ ಉಪನ್ಯಾಸ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಾ. ಕಾಳಿಮಾಡ ಕೆ. ಶಿವಪ್ಪ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಆರ್.ಎಸ್.ಎಸ್. ಜಿಲ್ಲಾ ಸಂಘಚಾಲಕ್ ಚೆಕ್ಕೇರ ಮನು ಕಾವೇರಪ್ಪ, ಮಾತಂಡ ಕಂಬ ಉತ್ತಯ್ಯ ಉಪಸ್ಥಿತರಿದ್ದರು. ಶಿವರಾತ್ರಿ ಮಹತ್ವದ ಬಗ್ಗೆ ಉಪನ್ಯಾಸ ನೀಡಿದರು.
ಇದೇ ಸಂದರ್ಭ ಸತ್ಯಸಾಯಿ ಭಕ್ತ ಮಂಡಳಿಯಿಂದ ಭಜನಾ ಕಾರ್ಯಕ್ರಮ ಬಳಿಕ ಮಹಾಮಂಗಳಾರತಿ, ಪ್ರಸಾದ ವಿತರಣೆ ನಡೆಯಿತು.
ಹುದುಗೂರು ಉಮಾಮಹೇಶ್ವರ: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹುದುಗೂರು ಶ್ರೀ ಉಮಾಮಹೇಶ್ವರ ಕ್ಷೇತ್ರ ಸಮಿತಿಯ ವತಿಯಿಂದ ಉಮಾಮಹೇಶ್ವರ ದೇವಾಲಯದಲ್ಲಿ ವಿಶೇಷ ಪೂಜಾ ಕಾರ್ಯಕ್ರಮಗಳು ನಡೆದವು. ಬೆಳಿಗ್ಗೆ ಶ್ರೀ ಮಹಾಗಣಪತಿ ಹೋಮ, ಶ್ರೀ ಮಹಾ ಮೃತ್ಯುಂಜಯ ಹೋಮ, ಶ್ರೀ ರುದ್ರಹೋಮ, ರುದ್ರಾಭಿಷೇಕದ ನಂತರ ವಿಶೇಷ ಪೂಜೆಗಳು ನೆರವೇರಿದವು. ಕೇರಳದ ಅರ್ಚಕ ಶ್ರೀನಾಥ್ ಕಾರಾಯಟ್ ನೇತೃತ್ವದಲ್ಲಿ ಪೂಜಾ ಕಾರ್ಯಕ್ರಮಗಳು ನಡೆದವು.
ದೇವಾಲಯದಲ್ಲಿ ಭಕ್ತಾದಿಗಳಿಗೆ ಲಘು ಉಪಹಾರದ ವ್ಯವಸ್ಥೆ ಮಾಡಲಾಗಿತ್ತು. ಸಂಜೆ ಶ್ರೀ ಉಮಾಮಹೇಶ್ವರ ಸ್ವಾಮಿಯ ಉತ್ಸವ ಮೂರ್ತಿಯನ್ನು ಅಲಂಕೃತ ಭವ್ಯ ಮಂಟಪದಲ್ಲಿರಿಸಿ ಕ್ಷೇತ್ರ ಪ್ರದಕ್ಷಿಣೆಯ ನಂತರ ಈ ವ್ಯಾಪ್ತಿಯ ಗ್ರಾಮಗಳಲ್ಲಿ ಮೆರವಣಿಗೆ ಸಾಗಿತು. ಪೂಜಾ ಕಾರ್ಯಕ್ರಮದಲ್ಲಿ ದೇವಾಲಯ ಸಮಿತಿಯ ಅಧ್ಯಕ್ಷ ಚಾಮಿ, ಕಾರ್ಯದರ್ಶಿ ಸುರೇಶ್, ಸಮಿತಿಯ ನಿರ್ದೇಶಕರು ಹಾಗೂ ಮಹಿಳಾ ಸಂಘಟನೆಯ ಪದಾಧಿಕಾರಿಗಳು ಸ್ವ-ಸಹಾಯ ಮತ್ತು ಸ್ತ್ರೀಶಕ್ತಿ ಸಂಘಗಳ ಪದಾಧಿಕಾರಿಗಳು, ಕುಶಾಲನಗರ ಹೋಬಳಿ ವ್ಯಾಪ್ತಿಯ ಕೂಡಿಗೆ, ಕೂಡುಮಂಗಳೂರು, ಹಾರಂಗಿ, ಗುಡ್ಡೆಹೊಸೂರು ಸುತ್ತಮುತ್ತಲಿನ ಗ್ರಾಮಗಳ ಸಾವಿರಾರು ಭಕ್ತಾದಿಗಳು ಪಾಲ್ಗೊಂಡಿದ್ದರು.
ಉದ್ಭವ ಗೌರಿ ಶಂಕರ: ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿಕ್ಕತ್ತೂರು ಉದ್ಭವ ಗೌರಿ ಶಂಕರ ದೇವಾಲಯದಲ್ಲಿ ಅದ್ಧೂರಿಯ ಮಹಾಶಿವರಾತ್ರಿ ಪೂಜೋತ್ಸವ ವಿಶೇಷ ಪೂಜಾ, ಹೋಮ-ಹವನಗಳೊಂದಿಗೆ ನಡೆಯಿತು.
ಈ ದೇವಾಲಯದಲ್ಲಿರುವ ಉದ್ಭವ ಶಿವ ಲಿಂಗವು ಬೆಳೆಯುತ್ತಿರುವದನ್ನು ಕಂಡ ಭಕ್ತಾದಿಗಳೂ ಮಹಾ ಶಿವರಾತ್ರಿಯ ಅಂಗವಾಗಿ ತಂಡೋಪತಂಡವಾಗಿ ಸಾವಿರಾರು ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ಸ್ವಾಮಿಗೆ ಬೆಳಗ್ಗಿನಿಂದಲೇ ವಿಶೇಷ ಪೂಜೆ, ಹೋಮ-ಹವನದ ನಂತರ ಅನ್ನದಾನ ನೆರವೇರಿತು. ದೇವಾಲಯ ಸಮಿತಿಯ ಅಧ್ಯಕ್ಷ ಕೆ.ಕೆ. ಬೋಗಪ್ಪ, ಕಾರ್ಯದರ್ಶಿ ಹೆಚ್.ಡಿ. ಮಂಜುನಾಥ್ ಸೇರಿದಂತೆ ಸಮಿತಿಯ ನಿರ್ದೇಶಕರು ಹಾಗೂ ಭಕ್ತಾದಿಗಳು ಹಾಜರಿದ್ದರು.
*ಕಣಿವೆ ಶ್ರೀ ರಾಮಲಿಂಗೇಶ್ವರ: ಕಣಿವೆಯ ಶ್ರೀ ರಾಮಲಿಂಗೇಶ್ವರ ದೇವಾಲಯದಲ್ಲಿ ಮಹಾ ಶಿವರಾತ್ರಿಯ ಅಂಗವಾಗಿ ಪೂಜೋತ್ಸವ ಹಾಗೂ ವಿದ್ಯುತ್ ಅಲಂಕೃತವಾದ ಭವ್ಯ ಮಂಟಪದಲ್ಲಿ ಸ್ವಾಮಿಯ ಮೆರವಣಿಗೆಯು ಕಣಿವೆಯ ಪ್ರಮುಖ ಬೀದಿಗಳಲ್ಲಿ ಸಾಗಿತು. ಈ ಸಂದರ್ಭ ದೇವಾಲಯವನ್ನು ವಿದ್ಯುತ್ ದೀಪಗಳಿಂದ ಅಲಂಕೃತಗೊಳಿಸಲಾಗಿತ್ತು. ಸ್ವಾಮಿಗೆ ವಿಶೇಷ ಪೂಜೆಗಳು ನಡೆದವು.
ಅತ್ತೂರಿನ ಪಂಚಲಿಂಗೇಶ್ವರ: ಗುಡ್ಡೆಹೊಸೂರು ಸಮೀಪದ ಅತ್ತೂರಿನಲ್ಲಿ ಹೊಸದಾಗಿ ನಿರ್ಮಾಣ ಹಂತದಲ್ಲಿರುವ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿ ಶಿವಸಹಸ್ರನಾಮ ಕಾರ್ಯಕ್ರಮ ನಡೆಯಿತು.
ಈ ಸಂದರ್ಭ ದೇವಸ್ಥಾನ ಸಮಿತಿ ಅಧ್ಯಕ್ಷ ಮನೋಜ್, ಉಪಾಧ್ಯಕ್ಷ ದಿವಾಕರ, ಕಾರ್ಯದರ್ಶಿ ಮಧು, ನರೇಂದ್ರ (ಮಣಿ) ಪುಲಿಯಂಡ ಲವ ನಂಜಪ್ಪ ಮತ್ತು ಗಾಮಸ್ಥರು ಪೂಜಾ ಕಾರ್ಯದಲ್ಲಿ ಭಾಗವಹಿಸಿದ್ದರು. ದೇವಸ್ಥಾನ ಆವರಣದಲ್ಲಿ ಶಿವರಾತ್ರಿ ಪ್ರಯುಕ್ತ ಜಾಗರಣೆ ಹಾಗೂ ಅನ್ನಸಂತರ್ಪಣೆ ನಡೆಯಿತು.