ಮಡಿಕೇರಿ, ಫೆ.14 : ಕೊಡಗು ಜಿಲ್ಲೆಯ ಮುಖಾಂತರ ಹಾದು ಹೋಗುವ ಹಾಗೂ ಕೊಡಗು ಜಿಲ್ಲೆಗೆ ಪ್ರವೇಶಿಸಲು ಉದ್ದೇಶಿತ ರೈಲ್ವೇ ಮಾರ್ಗ ದಕ್ಷ್ಷಿಣ ಕೊಡಗು ಪ್ರದೇಶಗಳಿಗೆ ಭೌಗೋಳಿಕವಾಗಿ ಮತ್ತು ಜನಜೀವನಕ್ಕೆ ಹಾನಿ ಆಗುವ ಸಂಭವವಿರುವದರಿಂದ ಕೊಡಗು ಗೌಡ ಸಮಾಜಗಳ ಒಕ್ಕೂಟ ಒತ್ತಾಯಿಸಿದೆ.

ಪತ್ರಿಕಾ ಹೇಳಿಕೆ ನೀಡಿರುವ ಅಧ್ಯಕ್ಷ ಸೂರ್ತಲೆ ಕೆ. ಸೋಮಣ್ಣ ಅವರು ಕುಶಾಲನಗರದವರೆಗಿನ ರೈಲ್ವೆ ಸಂಪರ್ಕವನ್ನು ಸ್ವಾಗತಿಸಿದ್ದಾರೆ.

ತಲಕಾವೇರಿಯಲ್ಲಿ ಮೇಲ್ಸೇತುವೆ ನಿರ್ಮಾಣ ಆಗಬೇಕೆಂದು ಅವರು ಹೇಳಿಕೆ ನೀಡಿದ್ದಾರೆ. ತಲಕಾವೇರಿಯಲ್ಲಿ ಅಷ್ಟಮಂಗಲದಲ್ಲಿ ಕಂಡುಬಂದಂತೆ ಸಾಂಪ್ರದಾಯಿಕವಾಗಿ ಹಾಗೂ ಧಾರ್ಮಿಕವಾಗಿ ದೇವಕಾರ್ಯ ನಡೆಸಲಾಗುವದು ಎಂದು ವ್ಯವಸ್ಥಾಪನಾ ಸಮಿತಿಯ ನೂತನ ಅಧ್ಯಕ್ಷರ ಹೇಳಿಕೆ ಸ್ವಾಗತಾರ್ಹ ಎಂದು ಅವರು ಹೇಳಿದ್ದಾರೆ. ಬ್ರಹ್ಮಗಿರಿ ಬೆಟ್ಟಕ್ಕೆ ಮುಕ್ತ ಅವಕಾಶವಿರಬೇಕೆಂದು ಅವರು ಆಗ್ರಹಿಸಿದ್ದಾರೆ.