ಸುಂಟಿಕೊಪ್ಪ, ಫೆ. 11: ಇಲ್ಲಿನ ನಾಡ ಕಚೇರಿಯಲ್ಲಿ ಪಿಂಚಣಿ ಅದಾಲತ್ ಕಾರ್ಯಕ್ರಮಕ್ಕೆ ಪ್ರಬಾರ ಉಪ ತಹಶೀಲ್ದಾರ್ ಹಾಗೂ ಕಂದಾಯ ಪರಿವೀಕ್ಷಕ ಹೆಚ್.ಕೆ. ಶಿವಪ್ಪ ಚಾಲನೆ ನೀಡಿದರು. ನಂತರ ಅಂಗವಿಕಲ ವೇತನ, ಸಂದ್ಯಾ ಸುರಕ್ಷಾ ವೇತನ, ಮನಸ್ವಿನಿ ವೇತನ, ಇಂದಿರಾ ಗಾಂಧಿ ವೃದ್ಧಾಪ್ಯ ವೇತನ, ವಿಧವಾ ವೇತನ , ಆದೇಶ ಪತ್ರ ವಿತರಿಸಿದರು. ಈ ಸಂದರ್ಭ ಗ್ರಾಮ ಲೆಕ್ಕಿಗರಾದ ಕೆ. ಯಶವಂತ್ ರೂಪಶ್ರೀ, ಉಮೇಶ್, ನಸೀಮ, ಪರಮೇಶ್ ಗ್ರಾಮ ಸಹಾಯಕ ರಾದ ಎ. ಶಿವಪ್ಪ, ದೇವೇಗೌಡ, ಮಂಜುಳ, ಬೇಬಿ, ಕೆ.ಕೆ. ಮಾಂಕು, ಎಂ.ಕೆ. ಪುಟ್ಟಣ್ಣ, ಬಿ.ಎಂ. ಬೊಗ್ರಪ್ಪ, ಅಕ್ಕಯ್ಯ, ಸುಶೀಲಾ ಹಾಜರಿದ್ದರು.