ಮಡಿಕೇರಿ, ಫೆ. 11: ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ವಿಶೇಷ ಘಟಕ ಗಿರಿಜನ ಉಪ ಯೋಜನೆಯಡಿ ಗುರು-ಶಿಷ್ಯ ಪರಂಪರೆಯ ಯಕ್ಷಗಾನ ನಾಟ್ಯ ತರಬೇತಿಯ ಸಮಾರೋಪ ಸಮಾರಂಭ ಬೆಳಕುಮಾನಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇತ್ತೀಚೆಗೆ ನಡೆಯಿತು.

ಸಮಾರಂಭವನ್ನು ಮದೆ ಗ್ರಾ.ಪಂ. ಸದಸ್ಯರಾದ ಬಟ್ಯನ ಸಿ. ಗಣೇಶ್ ಉದ್ಘಾಟಿಸಿ ಮಾತನಾಡಿದರು. ಶಾಲಾಭಿವೃದ್ಧಿ ಸಮಿತಿ ಉಪಾಧ್ಯಕ್ಷ ಆನಂದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಶಾಲಾ ಮುಖ್ಯ ಶಿಕ್ಷಕಿ ಭಾಗ್ಯಲಕ್ಷ್ಮಿ, ಶಾಲಾಭಿವೃದ್ಧಿ ಸದಸ್ಯ ಬಿ.ಜೆ. ಗಿರಿಯಪ್ಪ, ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ಬಿರುಮಣನ ಬಸಪ್ಪ, ಯಕ್ಷಗಾನ ಹಾಸ್ಯ ಕಲಾವಿದ ಮಹಾಬಲೇಶ್ವರ ಭಟ್, ಅಂಗನವಾಡಿ ಕಾರ್ಯಕರ್ತೆಯರು ಮತ್ತು ಇತರರು ಉಪಸ್ಥಿತರಿದ್ದರು.

ಯಕ್ಷಗಾನ ನಾಟ್ಯ ತರಬೇತಿಯಲ್ಲಿ ಮುಖ್ಯ ಗುರುಗಳಾಗಿ ಕಾರ್ಯ ನಿರ್ವಹಿಸಿದ ಮಹಾಬಲೇಶ್ವರ ಭಟ್ ಸಹಾಯಕ ಗುರುಗಳಾದ ಎ.ಬಿ. ಮಾಧವ, ಉಸ್ತುವಾರಿ ಪಿ.ಯು. ಸುಂದರ ಅವರನ್ನು ಸನ್ಮಾನಿಸಲಾಯಿತು.

ತರಬೇತಿ ಪಡೆದ ಶಿಬಿರಾರ್ಥಿಗಳಾದ ಅಂಕಿತಾ ಬಿ.ಬಿ., ದೀಕ್ಷಾ ಪಿ.ಎಸ್, ಲಾಸ್ಯ ಬಿ.ಜಿ, ತೇಜಸ್ ಕೆ.ಎಂ., ಸಾಯಿ ಪ್ರಕಾಶ್ ಬಿ.ಎಸ್., ಅಕ್ಷತಾ ಪಿ.ಬಿ., ಗುರುಪ್ರಸಾದ್ ಕೆ.ಎಂ., ರೀತಮ್, ಸೋನಿಕ ಬಿ,ಎಲ್., ಹರ್ಪಿತಾ ಕೆ.ಎಂ., ಕಿಶೋರ್, ಧನ್ಯ ಪಿ.ಯು., ಹರ್ಷ ಪಿ.ಎಸ್., ವಿಕಾಸ್ ಎಂ.ಬಿ., ಟೀನಾ, ನಯನ, ಯಶಸ್ವಿನಿ ಬಿ.ವಿ, ಸಹಾನಾ ಬಿ.ಎಸ್., ಅಂಜಲಿ ಪಿ.ಎಸ್. ನಿತೀನ್ ಇವರುಗಳಿಂದ ಕೃಷ್ಣ ಲೀಲೆ-ಕಂಸ ವಧೆ ಯಕ್ಷಗಾನ ಪ್ರದರ್ಶನಗೊಂಡು ಪ್ರೇಕ್ಷಕರ ಮನ ಸೆಳೆಯಿತು.