ವೀರಾಜಪೇಟೆ, ಫೆ. 11: ಸಂತ ಅನ್ನಮ್ಮ ವಿದ್ಯಾ ಸಂಸ್ಥೆಯಲ್ಲಿ ಜಿಲ್ಲಾ ಅಗ್ನಿ ಶಾಮಕ ಮತ್ತು ತುರ್ತು ಸೇವೆಗಳ ವತಿಯಿಂದ ಅಗ್ನಿ ದುರಂತ ಮತ್ತು ತುರ್ತು ಸೇವೆಗಳ ಬಗ್ಗೆ ಮಾಹಿತಿ ಕಾರ್ಯಾಗಾರ ಮತ್ತು ಪ್ರಾತ್ಯಕ್ಷಿಕೆ ಏರ್ಪಡಿಸಲಾಗಿತ್ತು. ಸಂತ ಅನ್ನಮ್ಮ ವಿದ್ಯಾ ಸಂಸ್ಥೆಗಳ ವ್ಯವಸ್ಥಾಪಕ ಧರ್ಮಗುರು ರೆ.ಫಾ. ಮದುಲೈ ಮುತ್ತು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಅಗ್ನಿ ಶಾಮಕ ಮತ್ತು ತುರ್ತು ಸೇವೆಗಳ ಜಿಲ್ಲಾ ಅಧಿಕಾರಿ ಚಂದನ್ ನೇತೃತ್ವದ ತಂಡ ಕಾರ್ಯಕ್ರಮವನ್ನು ನಡೆಸಿಕೊಟ್ಟಿತು. ಮಾಹಿತಿ ಕಾರ್ಯಾಗಾರದಲ್ಲಿ ವಿದ್ಯಾರ್ಥಿಗಳು ಅಗ್ನಿ ದುರಂತ ಸಂಭವಿಸುವ ಬಗ್ಗೆ ಮತ್ತು ಆ ಸಂದರ್ಭ ಪಡೆಯಬೇಕಾದ ತುರ್ತು ಸೇವೆಗಳ ಬಗ್ಗೆ ಮಾಹಿತಿಯನ್ನು ಪಡೆದರು. ಪದವಿ ಕಾಲೇಜಿನ ಪ್ರಾಂಶುಪಾಲ ಐಸಕ್ ರತ್ನಾಕರ್ ಉಪಸ್ಥಿತರಿದ್ದರು.