ಕುಶಾಲನಗರ, ಫೆ. 11: ಕುಶಾಲನಗರ ಸರಕಾರಿ ಮಾದರಿ ಪ್ರಾಥಮಿಕ ಶಾಲೆ ಮುಂಭಾಗ ಹೆದ್ದಾರಿ ರಸ್ತೆಯಲ್ಲಿ ನೂತನವಾಗಿ ಅಳವಡಿಸಿದ ಜೀಬ್ರಾ ಕ್ರಾಸ್ ಪಟ್ಟಿಗಳ ಉದ್ಘಾಟನೆಯನ್ನು ಕುಶಾಲನಗರ ಡಿವೈಎಸ್ಪಿ ಮುರಳೀಧರ್ ನೆರವೇರಿಸಿದರು. ಕುಶಾಲನಗರ ಪೊಲೀಸ್ ಇಲಾಖೆ ಮತ್ತು ರೋಟರಿ ಕುಶಾಲನಗರ ಸಂಯುಕ್ತ ಆಶ್ರಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಜೀಬ್ರಾ ಕ್ರಾಸ್‍ಗೆ ಚಾಲನೆ ನೀಡಿದ ಡಿವೈಎಸ್ಪಿ ಮುರಳೀಧರ್ ಮಾತನಾಡಿ, ವಿದ್ಯಾರ್ಥಿಗಳು, ಪಾದಾಚಾರಿಗಳು ಸಂಚಾರ ನಿಯಮಗಳ ಬಗ್ಗೆ ಅರಿವು ಹೊಂದಿರಬೇಕು.
ಚಾಲಕರು ಸಂಚಾರಿ ನಿಯಮಗಳನ್ನು ಸಮರ್ಪಕವಾಗಿ ಪಾಲಿಸಿದಲ್ಲಿ ವ್ಯವಸ್ಥಿತ ವಾಹನ ಸಂಚಾರ ಸಾಧ್ಯ ಎಂದರು. ಕುಶಾಲನಗರ ರೋಟರಿ ಕ್ಲಬ್ ಪಟ್ಟಣದ 6 ಕಡೆ ರಸ್ತೆಯಲ್ಲಿ ಜೀಬ್ರಾ ಪಟ್ಟಿಗಳನ್ನು ಹಾಕಲು ಸಹಕರಿಸಿರುವ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದರು. ಈ ಸಂದರ್ಭ ರೋಟರಿ ಅಧ್ಯಕ್ಷ ಪ್ರಕಾಶ್, ಕಾರ್ಯಕ್ರಮ ಸಂಯೋಜಕ ರವೀಂದ್ರ ರೈ, ಹಿರಿಯ ಸದಸ್ಯರುಗಳಾದ ಗಂಗಾಧರ್, ಅಶೋಕ್, ಸಹಾಯಕ ಠಾಣಾಧಿಕಾರಿ ರವಿ ಇದ್ದರು.