ನಾಪೋಕ್ಲು, ಫೆ. 11: ಸ್ಥಳೀಯ ಲಯನ್ಸ್ ಕ್ಲಬ್‍ಗೆ ಜಿಲ್ಲಾ ರಾಜ್ಯಪಾಲರ ಭೇಟಿ ಕಾರ್ಯಕ್ರಮ ಇಲ್ಲಿನ ಕೊಡವ ಸಮಾಜದಲ್ಲಿ ಜರುಗಿತು.

ಕಾರ್ಯಕ್ರಮದಲ್ಲಿ ಭಾಗವಹಿಸಿದ ಜಿಲ್ಲಾ ರಾಜ್ಯಪಾಲ ಹೆಚ್.ಆರ್. ಹರೀಶ್ ಸಂಸ್ಥೆಯ ಕಾರ್ಯವೈಖರಿ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದ್ದಲ್ಲದೇ ಸಂಸ್ಥೆಯ ಉನ್ನತಿಗೆ ಕೆಲವು ಮಾರ್ಗದರ್ಶನ ನೀಡಿ ಸಂಸ್ಥೆಯಲ್ಲಿ ದುಡಿದ ಪ್ರಮುಖರಿಗೆ ನೆನಪಿನ ಕಾಣಿಕೆ ನೀಡಿದರು. ಸಂಸ್ಥೆಯ ಹಿರಿಯರಾಗಿ ಇದೀಗ ಕೊಡಗು ಜಿಲ್ಲಾ ಪ್ಲಾಂಟರ್ಸ್ ಅಸೋಸಿಯೇಶನ್‍ನ ಅಧ್ಯಕ್ಷರಾಗಿ ಆಯ್ಕೆಗೊಂಡಿರುವ ಡಾ. ಬೊಪ್ಪಂಡ ಜಾಲಿ ಬೋಪಯ್ಯ ಅವರಿಗೆ ಸಂಸ್ಥೆಯ ವತಿಯಿಂದ ಗೌರವಿಸಲಾಯಿತು.

ಈ ಸಂದರ್ಭ ಸಂಸ್ಥೆಯ ಹಿರಿಯ ಸದಸ್ಯರಾಗಿದ್ದು ಇತ್ತೀಚೆಗೆ ನಿಧನಹೊಂದಿದ ಬಿದ್ದಾಟಂಡ ಬೆಳ್ಯಪ್ಪ ಅವರಿಗೆ ಗೌರವ ಸಲ್ಲಿಸಿ ಮೌನ ಪ್ರಾರ್ಥನೆ ನೆರವೇರಿಸಲಾಯಿತು. ನೂತನ ಸದಸ್ಯರಾಗಿ ಸೇರ್ಪಡೆಗೊಂಡ ಬೊಳ್ಳಂಡ ಶ್ಯಾಮ್ ಅವರಿಗೆ ಜಿಲ್ಲಾ ರಾಜ್ಯಪಾಲ ಹೆಚ್.ಆರ್. ಹರೀಶ್ ಪ್ರಮಾಣ ವಚನ ಬೋಧಿಸಿದರು. ಸಂಸ್ಥೆಯ ಅಧ್ಯಕ್ಷ ಡಾ. ಕೋಟೇರ ಪಂಚಮ್ ತಿಮ್ಮಯ್ಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವೇದಿಕೆಯಲ್ಲಿ ರೀಜನಲ್ ಚೇರ್‍ಮನ್ ಕೇಟೋಲಿರ ರತ್ನಾ ಚರ್ಮಣ್ಣ, ಜೋನಲ್ ಚೇರ್‍ಮನ್ ಸೋಮಣ್ಣ, ಎಂ.ಎನ್. ಅಚ್ಚಯ್ಯ, ಸ್ವರೂಪ್ ಅಯ್ಯಪ್ಪ, ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ಕೇಟೋಳಿರ ರೇಖಾ ಪೊನ್ನಣ್ಣ ಪ್ರಾರ್ಥಿಸಿ, ಬೊಪ್ಪಂಡ ಶೈಲಾ ಬೋಪಯ್ಯ ಧ್ವಜವಂದನೆ ನೆರವೇರಿಸಿದರು. ಕಲಿಯಂಡ ಇಂದಿರಾ ಅಯ್ಯಣ್ಣ, ಖಜಾಂಚಿ ಶ್ವೇತಾ ಉತ್ತಪ್ಪ, ಕುಂಡ್ಯೋಳಂಡ ರಮೇಶ್ ಮುದ್ದಯ್ಯ ಪರಿಚಯಿಸಿ ಕಾರ್ಯದರ್ಶಿ ಮುಕ್ಕಾಟಿರ ವಿನಯ್ ವರದಿ ವಾಚಿಸಿ ವಂದಿಸಿದರು.