ಸುಂಟಿಕೊಪ್ಪ, ಫೆ. 11: ಸುಂಟಿಕೊಪ್ಪ ಹೋಬಳಿ ಮೊಗೇರ ಸೇವಾ ಸಮಾಜ ನೂತನ ಅಧ್ಯಕ್ಷರಾಗಿ ನಾಕೂರು ಗ್ರಾಮದ ಸೀತರಾಮ ಮೊಗೇರಾ ನೇಮಕಗೊಂಡಿದ್ದಾರೆ.

ಇಲ್ಲಿನ ಮಂಜುನಾಥಯ್ಯ ಮೀನಾಕ್ಷಮ್ಮ ಕಲ್ಯಾಣ ಮಂಟಪದಲ್ಲಿ ಪಿ.ಬಿ. ಮಂಜು ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಉಪಾಧ್ಯಕ್ಷರಾಗಿ ಸಂಜೀವ ಮೊಗೇರಾ ಎಮ್ಮೆಗುಂಡಿ, ಕಾರ್ಯದರ್ಶಿಯಾಗಿ ನಾಗೇಶ್ ಮೊಗೇರಾ, ಖಜಾಂಚಿಯಾಗಿ ಅನಿತ ಮೊಗೇರ, ಸಂಘಟನಾ ಕಾರ್ಯದರ್ಶಿಯಾಗಿ ಪೂವಪ್ಪ ಮೊಗೇರ, 15 ಮಂದಿಯನ್ನು ಕಾರ್ಯಕಾರಿ ಸಮಿತಿಗೆ ಆಯ್ಕೆ ಮಾಡಲಾಯಿತು. ಈ ಸಂದರ್ಭ ಸುಂಟಿಕೊಪ್ಪ ಹೋಬಳಿ ಮೊಗೇರ ಸಂಘದ ವತಿಯಿಂದ ನಡೆದ ಪ್ರಥಮ ವರ್ಷದ ರಾಜ್ಯಮಟ್ಟದ ಕ್ರೀಡಾಕೂಟ ಮತ್ತು ಸಾಂಸ್ಕøತಿಕ ಕಾರ್ಯಕ್ರಮದ ಲೆಕ್ಕಪತ್ರವನ್ನು ಮಂಡಿಸಲಾಯಿತು.

ಸಭೆಯಲ್ಲಿ ಜಿಲ್ಲಾ ಮೊಗೇರ ಸೇವಾ ಸಮಾಜದ ಸ್ಥಾಪಕಾಧ್ಯಕ್ಷ ಸದಾನಂದ ಮಾಸ್ಟರ್, ಜಿಲ್ಲಾಧ್ಯಕ್ಷ ಬಿ.ಬಿ. ಶಿವಪ್ಪ, ಮಾಜಿ ಅಧ್ಯಕ್ಷ ಪಿ.ಎಂ. ರವಿ, ಕಾರ್ಯದರ್ಶಿ ಚಂದ್ರ, ಖಜಾಂಚಿ ಮಂಜು, ಹೋಬಳಿ ಘಟಕದ ಪದಾಧಿಕಾರಿಗಳು ಇತರರು ಇದ್ದರು.