ಚೆಟ್ಟಳ್ಳಿ, ಫೆ. 11: ಕರ್ನಾಟಕ ಸರಕಾರದ ಧಾರ್ಮಿಕ ದತ್ತಿ ನಿಧಿ ಇಲಾಖೆಯ ಸಹಯೋಗದಲ್ಲಿ ತಾ. 13ರಂದು ಭಾಗಮಂಡಲ ಶ್ರೀ ಭಗಂಡೇಶ್ವರ ದೇವರ ಸನ್ನಿಧಿಯಲ್ಲಿ ಹಾಗೂ ತಲಕಾವೇರಿಯಲ್ಲಿ ಮಹಾ ಶಿವರಾತ್ರಿ ಉತ್ಸವವನ್ನು ಆಚರಿಸಲಾಗು ತ್ತಿದೆ ಎಂದು ದೇವಾಲಯ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಬಿದ್ದಾಟಂಡ ತಮ್ಮಯ್ಯ ತಿಳಿಸಿದ್ದಾರೆ .

ಅಂದು ಬೆಳಿಗ್ಗೆ 6.30 ಶತರುದ್ರಾಭಿಷೇಕ, ಬೆಳಿಗ್ಗೆ 9.30 ಮಹಾರುದ್ರಹೋಮ, ಮಧ್ಯಾಹ್ನ 12ಕ್ಕೆ ಮಹಾಮಂಗಳಾರತಿ, ಪ್ರಸಾದ ವಿತರಣೆ, ಅನ್ನ ಸಂತರ್ಪಣೆ, ಸಂಜೆ 6 ಗಂಟೆಗೆ ತಾಯಂಬಕ ಸೇವೆ, ಮಹಾಮಂಗಳಾರತಿ ಭಗಂಡೇಶ್ವರ ದೇವಾಲಯದಲ್ಲಿ ನಡೆಯಲಿದೆ.

ತಲಕಾವೇರಿ ದೇವಾಲಯದಲ್ಲಿ ಬೆಳ್ಳಿಗೆ 9 ಗಂಟೆಗೆ ಶತರುದ್ರಾಭಿಷೇಕ, ಮಧ್ಯಾಹ್ನ 12 ಗಂಟೆಗೆ ಮಹಾ ಮಂಗಳಾರತಿ ಪ್ರಸಾದ ವಿನಿಯೋಗ ನಡೆಯಲಿದೆÉ.

ನಂತರ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದೊಂದಿಗೆ ಸಂಜೆ 6.30 ಗೆ ಗೋಪಾಲ ಕೃಷ್ಣ ಯಕ್ಷಗಾನ ಕಲಾಸಂಘ, ಕಡಬ ದಕ್ಷಿಣ ಕನ್ನಡ ಜಿಲ್ಲೆ ಇವರಿಂದ ಶಿವಶಕ್ತಿ ಮಹಾತ್ಮೆ ಯಕ್ಷಗಾನ ಬಯಲಾಟ ಕಾರ್ಯಕ್ರಮ ಜರುಗಲಿದೆ.