ಗೋಣಿಕೊಪ್ಪ ವರದಿ, ಫೆ. 11: ರಾಷ್ಟ್ರೀಯ ಹಾಕಿ ಟೂರ್ನಿಯಲ್ಲಿ ಬೆಳ್ಳಿ ಟ್ರೋಫಿ ಗೆದ್ದ ಹಾಕಿ ಕೂರ್ಗ್ ತಂಡವನ್ನು ಹೂಗುಚ್ಚ ನೀಡಿ ಸ್ವಾಗತಿಸಿಕೊಳ್ಳುವ ಮೂಲಕ ಹಾಕಿ ಕೂರ್ಗ್ ಸಂಸ್ಥೆ ವತಿಯಿಂದ ಬರ ಮಾಡಿಕೊಳ್ಳಲಾಯಿತು. ಮೈಸೂರು ರೈಲ್ವೆ ನಿಲ್ದಾಣ ಮತ್ತು ಗೋಣಿಕೊಪ್ಪದಲ್ಲಿ ಪ್ರತ್ಯೇಕವಾಗಿ ಸ್ವಾಗತಿಸಲಾಯಿತು.

ಹಾಕಿ ಕೂರ್ಗ್ ಟೂರ್ನಮೆಂಟ್ ಕಮಿಟಿ ಅಧ್ಯಕ್ಷ ಬುಟ್ಟಿಯಂಡ ಚೆಂಗಪ್ಪ, ಪದಾಧಿಕಾರಿಗಳಾದ ಕೊಕ್ಕಂಡ ರೋಶನ್, ಪಳಂಗಂಡ ಲವಕುಮಾರ್, ನೆಲ್ಲಮಕ್ಕಡ ಪವನ್, ಐನಂಡ ಲಾಲಾ ಅಯ್ಯಣ್ಣ ಅವರುಗಳು ಇದ್ದರು.

ಇತ್ತೀಚೆಗೆ ಅಸ್ಸಾಂನ ಕಾಲಿಬೊರ್ ಮೈದಾನದಲ್ಲಿ ನಡೆದ 8 ನೇ ನ್ಯಾಷನಲ್ ಸಬ್ ಜೂನಿಯರ್ ಚಾಂಪಿಯನ್‍ಶಿಪ್ ಟೂರ್ನಿಯಲ್ಲಿ ರನ್ನರ್ ಅಪ್ ಸ್ಥಾನ ಪಡೆದ ಸಾಧನೆ ಹಾಗೂ ಬಿ ಡಿವಿಜನ್‍ನಿಂದ ಎ ಡಿವಿಜನ್‍ಗೆ ಬಡ್ತಿ ಪಡೆದು ಕೊಂಡಿ ರುವ ಬಗ್ಗೆ ಶ್ಲಾಘನೆ ವ್ಯಕ್ತವಾಯಿತು.

ಆಟಗಾರರುಗಳಾದ ಹೆಚ್. ಡಿ. ನೇತ್ರಾವತಿ, ಎಂ.ಕೆ. ಸುಜಾತ, ಕೆ.ಎಸ್. ಅನ್ನಪೂರ್ಣ, ಡಿ.ಜೆ. ನವ್ಯ, ಶಯಾ ಕಾವೇರಮ್ಮ, ಹೆಚ್.ಎ. ಅಪ್ಸರಾ, ಪಿ.ಓ. ಶಿಲ್ಪ, ಎಸ್. ಅದಿರಾ, ಕೆ.ಎಸ್. ಸುರಕ್ಷಾ, ಕೆ.ಕೆ. ಗೌತಮಿ, ಕೆ.ಎ. ಪಾರ್ವತಿ, ಪಿ.ಯು. ರಮ್ಯ, ಜಿ. ಕಾವ್ಯ, ಹೆಚ್.ಎಸ್. ಜಾಹ್ನವಿ, ಸಿ.ಕೆ. ಪ್ರಗತಿ, ಟಿ.ಸಿ. ಸುಚಿತ್ರಾ, ಎಸ್.ಹೆಚ್. ಬೃಂದಾ, ಬಿ.ಜಿ. ಜೀವಿತಾ, ತರಬೇತುದಾರ ವಿನೋದ್, ವ್ಯವಸ್ಥಾಪಕಿ ಕುಡೆಕಲ್ ಸವಿತಾ ಪಾಲ್ಗೊಂಡಿದ್ದರು.

- ವರದಿ : ಸುದ್ದಿಪುತ್ರ