ಮಡಿಕೇರಿ, ಫೆ. 9: ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯು ಕಾರ್ಡಿಯೋ ಡೈಯಬಿಟಲಜಿ (ಛಿಚಿಡಿಜioಜiಚಿbeಣoಟogಥಿ) -2017 ಎಂಬ ವಿಷಯ ಕುರಿತು ಕಾರ್ಯಗಾರವು ತಾ. 11 ರಂದು ವೈದ್ಯಕೀಯ ಕಾಲೇಜಿನ ಉಪನ್ಯಾಸಕರ ಸಭಾಂಗಣದಲ್ಲಿ ಆಯೋಜಿಸಲಾಗಿದೆ.
ರಾಜ್ಯದ ಸುಮಾರು 150 ವೈದ್ಯರುಗಳು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಕಾರ್ಯಕ್ರಮಕ್ಕೆ ಸಂಪನ್ಮೂಲ ವ್ಯಕ್ತಿಗಳಾಗಿ ಏಳು ಜನ ವೈದ್ಯರುಗಳು ಆಗಮಿಸುತ್ತಿದ್ದು, ಇವರುಗಳು ಹೃದಯರೋಗ ಮತ್ತು ಸಕ್ಕರೆ ಖಾಯಿಲೆ ಬಗ್ಗೆ ಹೆಚ್ಚಿನ ತಿಳುವಳಿಕೆ ನೀಡಲಿದ್ದಾರೆ ಎಂದು ವೈದ್ಯಕೀಯ ವಿಜ್ಞಾನ ಸಂಸ್ಥೆ ಪ್ರಾಧ್ಯಪಕರು ಹಾಗೂ ಮುಖ್ಯಸ್ಥರು ಹಾಗೂ ಸಂಘಟನಾ ಅಧ್ಯಕ್ಷ ಡಾ.ಲೋಕೇಶ ತಿಳಿಸಿದ್ದಾರೆ.