ಶ್ರೀಮಂಗಲ, ಫೆ. 9: ಸಾಂಪ್ರದಾಯಿಕ ಪದ್ಧತಿಯಲ್ಲಿ ಒಂದಾಗಿರುವ ‘ಪುದಿಯಕ್ಕಿ ಕೂಳ್ ಉಂಬೊ’(ಹೊಸ ಅಕ್ಕಿ ಪಾಯಿಸ ಸೇವನೆ) ವಿಶಿಷ್ಟ ಕಾರ್ಯಕ್ರಮವನ್ನು ತಾ 12 ರಂದು ಹುದಿಕೇರಿ ಕೊಡವ ಸಮಾಜದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಪೆಮ್ಮಂಡ ಕೆ.ಪೊನ್ನಪ್ಪ ತಿಳಿಸಿದ್ದಾರೆ.
ಹೊಟೇಲ್ ಸಿಲ್ವರ್‍ಸ್ಕೈ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಹಾಗೂ ಹುದಿಕೇರಿ ಕೊಡವ ಸಮಾಜದ ಸಂಯುಕ್ತ ಆಶ್ರಯದಲ್ಲಿ ತಾ. 12 ರಂದು ಪೂರ್ವಾಹ್ನ 10.30 ಗಂಟೆಗೆ ನಡೆಯುವ ಕಾರ್ಯಕ್ರಮದ ಉದ್ಘಾಟನೆಯನ್ನು ಹುದಿಕೇರಿ ಕೊಡವ ಸಮಾಜದ ಸ್ಥಾಪಕ ಅಧ್ಯಕ್ಷ ಚೆಕ್ಕೇರ ಸೋಮಯ್ಯ ನೆರವೇರಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಹುದಿಕೇರಿ ಕೊಡವ ಸಮಾಜದ ಅಧ್ಯಕ್ಷ ಕೋದಂಡ ಸನ್ನು ಉತ್ತಪ್ಪ, ಹುದಿಕೇರಿ ಗ್ರಾ.ಪಂ ಅಧ್ಯಕ್ಷೆ ಮತ್ರಂಡ ರೇಖಾ ಪೊನ್ನಪ್ಪ ಭಾಗವಹಿಸಲಿರುವ ಈ ಕಾರ್ಯಕ್ರಮದಲ್ಲಿ ತಕ್ಕಮುಖ್ಯಸ್ಥರಾದ ಬೊಳ್ಳಜ್ಜಿರ ಎನ್.ನಂಜಪ್ಪ, ಚೆಕ್ಕೇರ ಪಿ.ರಾಜೇಶ್, ಅಜ್ಜಿಕುಟ್ಟಿರ ಗಿರೀಶ್, ಕೊಡವ ಐರಿ ಸಮಾಜದ ಅಧ್ಯಕ್ಷ ಮೇಲತಂಡ ಎ.ರಮೇಶ್, ಅಖಿಲ ಅಮ್ಮ ಕೊಡವ ಸಮಾಜದ ಖಜಾಂಚಿ ಅಚ್ಚಿಯಂಡ ಎಸ್.ಸುನಿಲ್, ಕೆಂಬಟ್ಟಿ ಜನಾಂಗದ ಪ್ರತಿನಿಧಿ ಹಾಗೂ ಗ್ರಾ.ಪಂ ಸದಸ್ಯೆ ಹೆಚ್.ಆರ್.ಗೊಂಬೆ, ಕೊಡವ ಹೆಗ್ಗಡೆ ಸಮಾಜದ ಪ್ರತಿನಿಧಿ ಕಾಟಿಕುಟ್ಟಿರ ಚಂಗಪ್ಪ ಉಪಸ್ಥಿತರಿರುವರು. ಕಾರ್ಯಕ್ರಮದ ವಿಚಾರವಾಗಿ ಕೊಡವ ತಕ್ಕ ಎಳ್ತ್‍ಕಾರಡ ಕೂಟದ ಅಧ್ಯಕ್ಷ ಚೆಟ್ಟಂಗಡ ರವಿ ಸುಬ್ಬಯ್ಯ ವಿಚಾರ ಮಂಡನೆ ಮಾಡಲಿದ್ದಾರೆ ಎಂದು ತಿಳಿಸಿದರು.
ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯ ಸದಸ್ಯ ಆಪಟ್ಟಿರ ಟಾಟು ಮೊಣ್ಣಪ್ಪ ಮಾತನಾಡಿ ಪುದಿಯಕ್ಕಿ ಕೂಳ್ ಉಂಬೊ ಕಾರ್ಯಕ್ರಮ ತಲತಲಾಂತರದಿಂದ ನಮ್ಮ ಸಂಸ್ಕøತಿಯ ಅವಿಭಾಜ್ಯ ಅಂಗವಾಗಿ ನಡೆದುಕೊಂಡು ಬರುತ್ತಿದೆ. ಗದ್ದೆ ಕೆಲಸದ ನಂತರ ಹೊಸ ಅಕ್ಕಿಯಿಂದ ಪಾಯಸ ಮಾಡಿ ಮನೆಯವರು ಹಾಗೂ ಕಾರ್ಮಿಕ ವರ್ಗದವರು ಒಂದುಗೂಡಿ ಬೋಜನ ಮಾಡುವದರೊಂದಿಗೆ ಧಾನ್ಯ ಲಕ್ಷ್ಮಿಯನ್ನು ಮನೆಗೆ ಆಹ್ವಾನೆ ಮಾಡುವ ಕಾರ್ಯಕ್ರಮವಾಗಿದೆ. ಆದರೆ, ಇಂದು ಈ ಹಬ್ಬ ಕಣ್ಮರೆಯಾಗುತ್ತಿದ್ದು ಇದನ್ನು ಯುವ ಸಮುದಾಯಕ್ಕೆ ಪರಿಚಯಿಸುವ ನಿಟ್ಟಿನಲ್ಲಿ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯಿಂದ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಕರ್ನಾಟಕ ಕೊಡವ ಸಾಹಿತ್ಯ ಸಮಿತಿಯ ಸದಸ್ಯ ನಾಳಿಯಮ್ಮಂಡ ಉಮೇಶ್ ಕೇಚಮಯ್ಯ ಮಾತನಾಡಿ ಹಳೆ ಸಂಪ್ರದಾಯಗಳು ಮರೆಯಾಗಿ ಹೋಗಬಾರದು. ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಕಲೆ, ಸಾಹಿತ್ಯ, ಪದ್ಧತಿ-ಪರಂಪರೆ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ವಿನೂತನವಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಿದೆ ಎಂದು ತಿಳಿಸಿದರು.
ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಸದಸ್ಯ ಚಂಗುಲಂಡ ಸುರಾಜ್ ಮಾತನಾಡಿ ಕಾರ್ಯಕ್ರಮದಲ್ಲಿ ನಮ್ಮ ಸಂಸ್ಕøತಿಯ ಮೂಲ ಕೇಂದ್ರ ಬಿಂದುವಾಗಿರುವ ಮಂದ್ ಸಂಸ್ಕøತಿಯನ್ನು ಉಳಿಸುವ ನಿಟ್ಟಿನಲ್ಲಿ ಹುದಿಕೇರಿ ಕೊಡವ ಸಮಾಜದ ಆವರಣದಲ್ಲಿ ಹಲವು ಶತಮಾನಗಳಿಂದ ನಡೆಸಿಕೊಂಡು ಬರುತ್ತಿರುವ ಮಂದ್‍ನ್ನು ಉಳಿಸುವ ಹಾಗೂ ಇದರ ಮಹತ್ವವನ್ನು ತಿಳಿಸುವ ನಿಟ್ಟಿನಲ್ಲಿ ನಾಮಫ Àಲಕವನ್ನು ಅಳವಡಿಸಿ ಮಂದ್ ಗೌರವವನ್ನು ನೀಡುವ ಕಾಂiÀರ್iಕ್ರಮವು ನಡೆಯಲಿದೆ. ಇದೇ ಸಂದರ್ಭ ಸ್ಥಳೀಯ ಕಲಾವಿದರಿಂದ ಹಾಡುಗಾರಿಕೆ, ನೃತ್ಯ ಹಾಗೂ ಜಾನಪದ ನೃತ್ಯಗಳೊಂದಿಗೆ ಸಾಂಸ್ಕøತಿಕ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದರು. ಸಭೆಯಲ್ಲಿ ಆಂಗೀರ ಕುಸುಮ್ ಮಾದಪ್ಪ ಹಾಗೂ ಇನ್ನಿತರರು ಉಪಸ್ಥಿತರಿದ್ದರು.