ಮಡಿಕೇರಿ, ಫೆ. 7: ಕೊಡಗು ಜಿಲ್ಲಾ ಜಾತ್ಯತೀತ ಜನತಾದಳ ಪಕ್ಷದ ಆಂತರಿಕ ಗೊಂದಲಗಳಿಗೆ ಪಕ್ಷದ ಜಿಲ್ಲಾಧ್ಯಕ್ಷ ಸಂಕೇತ್ ಪೂವಯ್ಯ ಅವರೇ ನೇರ ಕಾರಣಕರ್ತರೆಂದು ಕುಮಾರಸ್ವಾಮಿ ಅಭಿಮಾನಿಗಳ ಬಳಗದ ಅಧ್ಯಕ್ಷ ಚಿಲ್ಲನ ದರ್ಶನ್ ಪ್ರಭಾಕರ್ ಆರೋಪಿಸಿದ್ದಾರೆ. ಈ ಬಗ್ಗೆ ಕುಮಾರಸ್ವಾಮಿ ಅವರ ಗಮನ ಸೆಳೆದು ಸಂಕೇತ್ ಪೂವಯ್ಯ ಅವರ ರಾಜೀನಾಮೆಗೆ ಒತ್ತಾಯಿಸ ಲಾಗುವದೆಂದು ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವೀರಾಜ ಪೇಟೆ ಕ್ಷೇತ್ರದ ಅಭ್ಯರ್ಥಿ ತಾನೇ ಎಂದು ಹೇಳಿ ಕೊಳ್ಳುತ್ತಿರುವ ಸಂಕೇತ್ ಪೂವಯ್ಯ ಅವರೆ ಪಕ್ಷದ ಬಂಡಾಯ ಸಭೆಗಳಿಗೂ ಕಾರಣರಾಗಿದ್ದಾರೆ ಎಂದು ಆರೋಪಿಸಿದರು. ಸಂಧಾನ ಸಭೆ ಎಂದು ಕರೆದು ಅದಕ್ಕೆ ಅಗತ್ಯವಿರು ವವರನ್ನು ಕರೆಯದೆ ಭಿನ್ನಮತೀ ಯರನ್ನು ಓಲೈಸಿಕೊಳ್ಳುವ ಪ್ರಯತ್ನ ನಡೆಸುತ್ತಿರುವದಾಗಿ ಟೀಕಿಸಿದರು.

ಜೆಡಿಎಸ್ ಪಕ್ಷದ ಜಿಲ್ಲಾಧ್ಯಕ್ಷ ಸ್ಥಾನ ಹಾಗೂ ವೀರಾಜಪೇಟೆ ಕ್ಷೇತ್ರದ ಅಭ್ಯರ್ಥಿ ಸ್ಥಾನಕ್ಕೆ ಪ್ರಬಲ ಪೈಪೋಟಿ ನೀಡುತ್ತಿರುವ ಡಾ. ಯಾಲದಾಳು ಮನೋಜ್ ಬೋಪಯ್ಯ ಅವರ ವಿರುದ್ಧ ಷಡ್ಯಂತ್ರ ರೂಪಿಸುತ್ತಿರುವ ಸಂಕೇತ್ ಪೂವಯ್ಯ ಅವರು, ಪಕ್ಷದ ಸಭೆÉಗಳ ವೇದಿಕೆಗೆ ಡಾ. ಮನೋಜ್ ಬೋಪಯ್ಯ ಅವರನ್ನು ಆಹ್ವಾನಿಸುವ ಕನಿಷ್ಟ ಸೌಜನ್ಯವನ್ನೂ ತೋರುತ್ತಿಲ್ಲವೆಂದು ಅಸಮಾಧಾನ ವ್ಯಕ್ತಪಡಿಸಿದರು.

ಜೆಡಿಎಸ್ ಪಕ್ಷದಲ್ಲಿ ಒಡೆದು ಆಳುವ ರಾಜಕಾರಣ ಮಾಡಲು ಮುಂದಾಗುತ್ತಿರುವ ಸಂಕೇತ್ ಪೂವಯ್ಯ ಅವರನ್ನು ಜಿಲ್ಲಾಧ್ಯಕ್ಷ ಸ್ಥಾನದಿಂದ ಕೆಳಕ್ಕಿಳಿಸಬೇಕೆಂದು ಮತ್ತು ವೀರಾಜಪೇಟೆ ಕ್ಷೇತ್ರದಿಂದ ಡಾ. ಮನೋಜ್ ಬೋಪಯ್ಯ ಅವರನ್ನು ಅಭ್ಯರ್ಥಿಯನ್ನಾಗಿ ಘೋಷಿಸ ಬೇಕೆಂದು ಆಗ್ರಹಿಸಿದರು. ಕುಮಾರ ಸ್ವಾಮಿಯವರ ಬಳಿಗೆ ನಿಯೋಗ ತೆರಳಿ ಬೇಡಿಕೆ ಸಲ್ಲಿಸುವದಾಗಿ ತಿಳಿಸಿದರು.

ಗ್ರಾಮೀಣ ಜಾಥಾ: ಕುಮಾರ ಸ್ವಾಮಿ ಅಭಿಮಾನಿಗಳ ಬಳಗದಿಂದ ಜಿಲ್ಲೆಯ ಪ್ರತಿಯೊಂದು ಗ್ರಾಮಗಳಿಗೆ ತೆರಳಿ ಅಲ್ಲಿನ ಮೂಲಭೂತ ಸಮಸ್ಯೆಗಳನ್ನು ಅರಿಯಲು ಮತ್ತು ಅವುಗಳ ಬಗೆಹರಿಕೆಗೆ ಅಗತ್ಯ ಪ್ರಯತ್ನಗಳನ್ನು ನಡೆಸಲು ಶೀಘ್ರದಲ್ಲೆ ಜಾಥಾ ನಡೆಸುವದಾಗಿ ದರ್ಶನ್ ಪ್ರಭಾಕರ್ ಇದೇ ಸಂದರ್ಭ ಮಾಹಿತಿ ನೀಡಿದರು.

ಗೋಷ್ಠಿಯಲ್ಲಿ ಕುಮಾರಸ್ವಾಮಿ ಅಭಿಮಾನಿ ಬಳಗದ ಉಪಾಧ್ಯಕ್ಷ ಯಕ್ಷಿತ್ ಕೊತ್ತೋಳಿ, ಪ್ರಧಾನ ಕಾರ್ಯದರ್ಶಿ ನಿತೀಶ್, ಪ್ರಮುಖರಾದ ಲೋಕೇಶ್ ಕುರಿಕಡ, ಜಯಚಂದ್ರ ಹಾಗೂ ಗಿರೀಶ್ ಉಪಸ್ಥಿತರಿದ್ದರು.