ಮಡಿಕೇರಿ, ಫೆ. 7: ಗೌತಮ್ ಫ್ರೆಂಡ್ಸ್ ವತಿಯಿಂದ ಏಪ್ರಿಲ್ 14 ಮತ್ತು 15 ರಂದು ಮೂರ್ನಾಡಿನ ಸಹಕಾರಿ ಸ್ಪೋಟ್ರ್ಸ್ ಕ್ಲಬ್ ಮೈದಾನದಲ್ಲಿ ಮೂರನೇ ವರ್ಷದ ಕೊಡಗು ಪ್ರೀಮಿಯರ್ ಲೀಗ್ (ಕೆಪಿಎಲ್) ವಾಲಿಬಾಲ್ ಪಂದ್ಯಾವಳಿ ನಡೆಯಲಿದೆ.
ಸುದ್ದಿಗೋಷ್ಠಿಯಲ್ಲಿ ಗೌತಮ್ ಫ್ರ್ರೆಂಡ್ಸ್ ಪದಾಧಿಕಾರಿ ಅಬ್ದುಲ್ ರೆಹಮಾನ್ ಕೆಪಿಎಲ್ ಕುರಿತು ಮಾಹಿತಿ ನೀಡಿದರು. ಪ್ರೀಮಿಯರ್ ಲೀಗ್ ಪಂದ್ಯಾವಳಿಯಲ್ಲಿ ಒಟ್ಟು ಹತ್ತು ತಂಡಗಳು ಪಾಲ್ಗೊಳ್ಳಲಿದ್ದು, ಈಗಾಗಲೇ 9 ತಂಡಗಳನ್ನು ಖರೀದಿಸಲು ಆಸಕ್ತರು ಮುಂದೆ ಬಂದಿದ್ದಾರೆ.
ಜಿಲ್ಲಾ ವ್ಯಾಪ್ತಿಯ 80 ಆಟಗಾರರ ಹರಾಜು ಪ್ರಕ್ರಿಯೆ ತಾ. 20 ರಂದು ಮೂರ್ನಾಡು ಇಲ್ಲವೇ ಮಡಿಕೇರಿಯಲ್ಲಿ ನಡೆಯಲಿದೆ ಎಂದು ತಿಳಿಸಿದರು.
ಪ್ರತಿ ತಂಡಕ್ಕೆ 8 ಆಟಗಾರರನ್ನು ಖರೀದಿಸಲು ಅವಕಾಶವಿರುವದಾಗಿ ಮಾಹಿತಿ ನೀಡಿದ ಅವರು, ಕೆಪಿಎಲ್‍ನಲ್ಲಿ ಪಾಲ್ಗೊಳ್ಳಲು ಆಸಕ್ತರಾಗಿರುವ ಆಟಗಾರರಿಗೆ ಈಗಾಗಲೇ ಅಗತ್ಯ ಅರ್ಜಿಗಳನ್ನು ವಿತರಿಸಲಾಗಿದೆ.
ಇದನ್ನು ತಾ. 15 ರೊಳಗೆ ಹಿಂದಿರುಗಿಸಬೇಕು. ಈಗಾಗÀಲೇ ತಂಡಗಳ ಖರೀದಿಗೆ ಮೂರ್ನಾಡಿನ ಗೌತಮ್, ವೀರಾಜಪೇಟೆಯ ಸೂಫಿ, ಗುಂಡಿಗೆರೆ ಸುಹೇಲ್, ಮೂರ್ನಾಡಿನ ಪಾಪಣ್ಣ, ಮೂರ್ನಾಡಿನ ಸೈಫುದ್ದೀನ್, ಅಂಬಟ್ಟಿಯ ಶರ್ಫುದ್ದೀನ್, ಗುಂಡಿಗೆರೆಯ ಉಬೈದು, ತಾಕೇರಿಯ ಅಮೃತ್ ಮತ್ತು ಎಡಪಾಲದ ಜಕೀರಿಯಾ ಆಸಕ್ತರಾಗಿದ್ದಾರೆ ಎಂದು ತಿಳಿಸಿದರು.
ಪಂದ್ಯಾವಳಿ ವಿಜೇತ ತಂಡಕ್ಕೆ ರೂ. 40 ಸಾವಿರ ನಗದು ಮತ್ತು ಟ್ರೋಫಿ, ದ್ವಿತೀಯ ರೂ. 25 ಸಾವಿರ ನಗದು ಮತ್ತು ಟ್ರೋಫಿ, ಮೂರನೇ ಮತ್ತು ನಾಲ್ಕನೇ ಸ್ಥಾನ ಪಡೆÉಯುವ ತಂಡಗಳಿಗೆ ರೂ. 11,111 ನಗದು ಹಾಗೂ ಟ್ರೋಫಿಯನ್ನು ಬಹುಮಾನ ವಾಗಿ ನೀಡಲಾಗುವದೆಂದು ಮಾಹಿತಿ ನೀಡಿದರು.
ಅಸೋಸಿಯೇಷನ್ ವಿರುದ್ಧ ಅಸಮಾಧಾನ
ಕೊಡಗಿನ ಪ್ರತಿಭಾವಂತ ವಾಲಿಬಾಲ್ ಆಟಗಾರರಿಗೆ ಸೂಕ್ತ ಪ್ರೋತ್ಸಾಹ ನೀಡುವಲ್ಲಿ ರಾಜ್ಯ ವಾಲಿಬಾಲ್ ಅಸೋಸಿಯೇಷನ್‍ನ ಜಿಲ್ಲಾ ಘಟಕ ವಿಫಲವಾಗಿದೆ ಎಂದು ಆರೋಪಿಸಿದರು. ಈ ಹಿನ್ನೆಲೆ ಗೌತಮ್ ಫ್ರೆಂಡ್ಸ್ ವತಿಯಿಂದ ಕೆಪಿಎಲ್ ವಾಲಿಬಾಲ್ ಪಂದ್ಯಾವಳಿಯನ್ನು ಆಯೋಜಿಸುವ ಮೂಲಕ, ಪ್ರತಿಭಾವಂತರಿಗೆ ಪ್ರೋತ್ಸಾ ಹವನ್ನು ನೀಡಲಾಗುತ್ತಿದೆ ಎಂದು ತಿಳಿಸಿದರು.
ಕೊಡಗು ಜಿಲ್ಲಾ ವಾಲಿಬಾಲ್ ಅಸೋಸಿಯೇಷನ್‍ನ ಅಧ್ಯಕ್ಷ ರನ್ನಾಗಿ ಮೈಸೂರಿನ ನಾಗೇಶ್ ಎಂಬವರನ್ನು ಅಧ್ಯಕ್ಷರನ್ನಾಗಿ ಮತ್ತು ಕಾರ್ಯದರ್ಶಿ ಯನ್ನಾಗಿ ಹೊರ ಜಿಲ್ಲೆಯ ಮಂಜು ಎಂಬವರನ್ನು ನಿಯೋಜಿಸಲಾಗಿದ್ದು, ಇವರಿಂದ ಜಿಲ್ಲೆಯ ವಾಲಿಬಾಲ್ ಪಂದ್ಯಾವಳಿಗೆ ಹೆಚ್ಚಿನ ಪ್ರಯೋಜನ ವಾಗುತ್ತಿಲ್ಲವೆಂದು ಬೇಸರ ವ್ಯಕ್ತಪಡಿಸಿದರು.
ಗೋಷ್ಠಿಯಲ್ಲಿ ಗೌತಮ್ ಫ್ರೆಂಡ್ಸ್‍ನ ಅಧ್ಯಕ್ಷ ಗೌತಮ್, ಕೆಪಿಎಲ್ ವಾಲಿಬಾಲ್ ಪಂದ್ಯಾವಳಿ ಆಯೋಜನ ಸಮಿತಿ ಪ್ರಮುಖರಾದ ಯಾಹ್ಯಾ, ಅಹಮ್ಮದ್ ಕೊಟ್ಟಮುಡಿ, ವೀರಾಜಪೇಟೆಯ ಸೂಫಿ, ಎಮ್ಮೆಮಾಡಿನ ಹಫೀಳ್(ಅಪ್ಪಿ) ಉಪಸ್ಥಿತರಿದ್ದರು.