ವೀರಾಜಪೇಟೆ, ಫೆ. 7: ಕೊಡಗಿನಲ್ಲಿ ಶಾಸಕರು, ಸಂಸದರಿಲ್ಲದೆ ಅನಾಥ ವಾಗಿದೆ ಎಂಬ ಜೆ.ಡಿ.ಎಸ್. ನಾಯಕ ಸಂಕೇತ್ ಪೂವಯ್ಯ ಅವರ ಹೇಳಿಕೆ ಯನ್ನು ಭಾರತೀಯ ಜನತಾ ಪಕ್ಷ ಖಂಡಿಸಿದೆ.
ಚುನಾವಣೆಯ ಸಮಯದಲ್ಲಿ ಮತದಾರರನ್ನು ಓಲೈಸುವ ಸಲುವಾಗಿ ಅಪಪ್ರಚಾರ ಮಾಡುತ್ತಿದ್ದಾರೆಂದು ಬಿಜೆಪಿ ಪಕ್ಷದ ತಾಲೂಕು ವಕ್ತಾರ ಟಿ.ಪಿ. ಕೃಷ್ಣ ಆರೋಪಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ವೀರಾಜಪೇಟೆ ವಿಧಾನಸಭಾ ಕ್ಷೇತ್ರ ಅತಿ ದೊಡ್ಡ ಕ್ಷೇತ್ರವಾಗಿದ್ದು, ಕುಟ್ಟದಿಂದ ಪೆರಾಜೆವರೆಗೆ 140 ಕಿ.ಮೀ. ನೆಲ್ಲಿಹುದಿಕೇರಿಯಿಂದ ಮಾಕುಟ್ಟ ದವರೆಗೆ 60 ಕಿ.ಮೀ ವಿಸ್ತೀರ್ಣ ಹೊಂದಿದೆ.
ಬಿಜೆಪಿ ಅಧಿಕಾರ ದಲ್ಲಿದ್ದಾಗ ಕೊಡಗು ಜಿಲ್ಲೆಯ ಎರಡು ಕ್ಷೇತ್ರಗಳಿಗೆ ರೂ. 1870 ಕೋಟಿ ಬಿಡುಗಡೆ ಮಾಡಲಾಗಿದ್ದರೆ ಈಗಿನ ಕಾಂಗ್ರೆಸ್ ಸರಕಾರ 200 ಕೋಟಿ ಮಂಜೂರು ಮಾಡಿ ಕೇವಲ ರೂ. 41 ಕೋಟಿ ಬಿಡುಗಡೆ ಮಾಡಿ ಕೈ ತೊಳೆದುಕೊಂಡಿದೆ.
ಇದನ್ನು ಪ್ರಶ್ನಿಸಲು ಮುಂದಾಗದ ಜೆಡಿಎಸ್ ನಾಯಕರು ಪ್ರಚಾರಕ್ಕಾಗಿ ಹೋದ ಕಡೆಗಳಲ್ಲಿ ಬಿಜೆಪಿ ಶಾಸಕರು ಸಂಸದರನ್ನು ದೂರುತ್ತಿದ್ದಾರೆ.
ಸಂಸದ ಪ್ರತಾಪ್ ಸಿಂಹ ಕೇಂದ್ರ ಸರಕಾರದ ವಿವಿಧ ವಿದ್ಯುತ್ ಯೋಜನೆಗಳಿಂದ ಮಡಿಕೇರಿ ನಗರಕ್ಕೆ ರೂ. 475 ಲಕ್ಷ, ಸೋಮವಾರಪೇಟೆಗೆ 930 ಲಕ್ಷ, ಕುಶಾಲನಗರಕ್ಕೆ 484 ಲಕ್ಷ ಹಾಗೂ ವೀರಾಜಪೇಟೆಗೆ 520 ಲಕ್ಷ ಮಂಜೂರು ಮಾಡಿಸಿ ವಿದ್ಯುತ್ ಯೋಜನೆಗಳ ಕಾಮಗಾರಿ ಮುಂದುವರೆದಿದೆ.
ಅಲ್ಲದೆ ಡಿ.ಡಿ. ಯುಜಿಟಿವೈ ಯೋಜನೆಯಲ್ಲಿಯೂ ಮಡಿಕೇರಿಗೆ ರೂ. 258 ಲಕ್ಷ, ಸೋಮವಾರಪೇಟೆಗೆ 238 ಲಕ್ಷ ವೀರಾಜ ಪೇಟೆಗೆ ರೂ. 762 ಬಿಡುಗಡೆ ಮಾಡಿದ್ದಾರೆ.
ವಿವಿಧ ಅಭಿವೃದ್ಧಿ ಕಾಮಗಾರಿಗೆ ಮಡಿಕೇರಿಗೆ ರೂ. 2 ಕೋಟಿ 20 ಲಕ್ಷ, ಸೋಮವಾರಪೇಟೆಗೆ ರೂ. 1.69 ಲಕ್ಷ, ವೀರಾಜಪೇಟೆಗೆ ರೂ. 1.81 ಲಕ್ಷ ಬಿಡುಗಡೆಗೊಳಿಸಿದ್ದರೂ ಜೆಡಿಎಸ್‍ನ ಸಂಕೇತ್ ಪೂವಯ್ಯ ಪಕ್ಷದ ಜನಪ್ರತಿನಿಧಿಗಳ ಕುರಿತು ಬಾಲಿಶ: ಹೇಳಿಕೆ ನೀಡುತ್ತಿರುವದು ಅವರ ಪಕ್ಷಕ್ಕೆ ಶೋಭೆ ತರುವಂತದ್ದಲ್ಲ. ಜನಪ್ರತಿನಿಧಿಗಳ ವಿರುದ್ಧ ಯಾವದೇ ಆರೋಪಕ್ಕೂ ಸಾಕ್ಷ್ಯಾಧಾರ ಗಳಿರಬೇಕೆಂದು ಹೇಳಿದರು.
ಪಕ್ಷದ ಎಸ್.ಟಿ. ಮೋರ್ಚಾದ ತಾಲೂಕು ಸಮಿತಿ ಅಧ್ಯಕ್ಷ ಎಂ.ಎಂ. ಪರಮೇಶ್ವರ್ ಮಾತನಾಡಿ ಕೊಡಗಿನ ಜಲ್ವಂತ ಜಮ್ಮಾ ಭೂಮಿ ಸಮಸ್ಯೆಂiÀiನ್ನು ಬಿಜೆ.ಪಿ ಬಗೆಹರಿಸಿದೆ. ಇತರ ಯಾವದೇ ಪಕ್ಷವಾಗಲಿ, ನಾಯಕರಾಗಲಿ ಇದರ ಬಗ್ಗೆ ಆಸಕ್ತಿ ತೋರಲಿಲ್ಲ ಎಂದರು.