ಕೂಡಿಗೆ, ಫೆ. 7: ಕೇರಳ ರಾಜ್ಯದ ಪಾಲಕಾಡ್‍ನಲ್ಲಿ ನಡೆದ ದಕ್ಷಿಣ ಭಾರತದ ಬಹುಭಾಷಾ ಸಾಹಿತ್ಯ ಹಬ್ಬದಲ್ಲಿ ಕೊಡಗಿನ ಕವಯತ್ರಿ ಹಾಗೂ ಸಾಹಿತಿ ಸುನೀತ ಲೋಕೇಶ್ ಅವರು ಪಾಲ್ಗೊಂಡು ‘ಕೊಡಗಿನ ಸಾಹಿತ್ಯ ಮತ್ತು ಅನುವಾದ’ ಎಂಬ ವಿಷಯದ ಬಗ್ಗೆ ವಿಷಯ ಮಂಡಿಸಿದರು.

ಪಾಲಕಾಡ್ ಲಿಟ್ರೇಚರ್ ಫೆಸ್ಟ್ ಎಂಬ ಸಂಸ್ಥೆಯು ಎರಡು ದಿನಗಳ ಕಾಲ ನಡೆದ ಕಾರ್ಯಕ್ರಮದಲ್ಲಿ ತಮಿಳು, ಕನ್ನಡ, ಮಲೆಯಾಳಂ, ತೆಲುಗು ಮತ್ತು ಮರಾಠಿ ಭಾಷಾ ಸಾಹಿತ್ಯದ ಬಗ್ಗೆ ಸಂವಾದ ಏರ್ಪಡಿಸಲಾಗಿತ್ತು.

ಈ ಕಾರ್ಯಕ್ರಮದಲ್ಲಿ ಖ್ಯಾತ ಸಾಹಿತಿಗಳಾದ ಯುವನ್ ಚಂದ್ರಶೇಖರ್, ಅನುಪಮ ಪ್ರಸಾದ್, ಸುಕುಮಾರನ್, ತಮಿಳು ಸಾಹಿತಿ ದಮಯಂತಿ ಮತ್ತು ಇತರೆ ಸಾಹಿತಿಗಳು ಹಾಗೂ ಅನುವಾದಕರು ಇದ್ದರು.