ಗೋಣಿಕೊಪ್ಪ ವರದಿ, ಫೆ. 6 : 200 ಲಕ್ಷ ರೂ. ವೆಚ್ಚದಲ್ಲಿ ಪಟ್ಟಣದ ಮುಖ್ಯ ರಸ್ತೆಯ ಮರು ಡಾಂಬರೀಕರಣ ಕಾಮಗಾರಿ ನಡೆಯುತ್ತಿದೆ. ರಾಷ್ಟ್ರೀಯ ಹೆದ್ದಾರಿ ಸಬ್ ಡಿವಿಜನ್ ವತಿಯಿಂದ ನಡೆಯುತ್ತಿರುವ ಕಾಮಗಾರಿಯು ಸುಮಾರು 1.03 ಕಿ. ಮೀ. ನಷ್ಟು ಮರು ಡಾಂಬರೀಕರಣಗೊಳ್ಳುತ್ತಿದೆ.
ಸೋಮವಾರದಿಂದ ಆರಂಭಗೊಂಡಿರುವ ಕೆಲಸ ಮಂಗಳವಾರವು ಮುಂದುವರಿಯಿತು. ಉಮಾಮಹೇಶ್ವರಿ ದೇವಾಲಯ ಆವರಣದ ಮುಂಭಾಗದಿಂದ ಬಸ್ ನಿಲ್ದಾಣದವರೆಗೆ ಕಾಮಗಾರಿ ಆರಂಭಿಸಲಾಯಿತು. ರಸ್ತೆಯ ಎರಡು ಬದಿಗಳಲ್ಲಿ ಪಾರ್ಕಿಂಗ್ ನಿಷೇದಗೊಳಿಸಲಾಗಿತ್ತು. ಇದರಿಂದಾಗಿ ವಾಹನಗಳ ಚಾಲಕರುಗಳು ಪಾರ್ಕಿಂಗ್ ಸಮಸ್ಯೆ ಅನುಭವಿಸಿದರು. ಮುಖ್ಯ ಪಟ್ಟಣಗಳಲ್ಲಿ ರಾತ್ರಿ ಹೊತ್ತು ಕಾಮಗಾರಿ ನಡೆಸುವದು ಸೂಕ್ತ ಎಂಬ ಒತ್ತಾಯ ಸಾರ್ವಜನಿಕರಿಂದ ಕೇಳಿ ಬಂತು.