ಮಡಿಕೇರಿ, ಫೆ. 6: ಕೊಡಗಿನ ನೃತ್ಯ ತರಬೇತುಗಾರ ವಿನೋದ್ ಕರ್ಕೆರಾ ಅವರ ನೇತೃತ್ವದ ‘ಸಿಗ್Àನೇಚರ್ ಡ್ಯಾನ್ಸ್ ಕಂಪೆನಿ’ ನಾಲ್ಕನೇ ರಾಷ್ಟ್ರೀಯ ನೃತ್ಯ ಸ್ಪರ್ಧೆಯಲಿ ್ಲಕರ್ನಾಟಕದ ಪರವಾಗಿ ಪದಕಗಳನ್ನು ಗಳಿಸಿದೆ. ವಾಸ್ಕೋ ಗೋವಾದ ರವೀಂದ್ರ ಭವನದಲ್ಲಿ ಇತ್ತೀಚೆಗೆ ಏರ್ಪಟ್ಟ ಸ್ಪರ್ಧೆಯಲ್ಲಿ ಈ ತಂಡವು 5 ಚಿನ್ನದ ಪದಕ ಹಾಗೂ 2 ರಜತ ಪದಕಗಳನ್ನು ಗಳಿಸುವಲ್ಲಿ ಯಶಸ್ವಿಯಾಗಿದೆ. ಈ ತಂಡದಲ್ಲಿ ರಾಹುಲ್ ರಾವ್, ರೋಹಿತ್, ಜಯಂತ್, ಶಶಾಂಕ್, ಯಶಸ್ವಿನಿ, ಹರ್ಷಿಣಿ, ರಕ್ಷಿತ್‍ಗೌಡ, ಪೃಥ್ವಿ ನಾಯಕ್, ಕುಶಲ್ ಅಣ್ವೇೀಕರ್, ವಿಶಾಲ್ ಅಣ್ವೇಕರ್, ಕುಶಾಲ್ ಹಾಗೂ ರಾಹುಲ್‍ಗೌಡ ಪಾಲ್ಗೊಂಡಿದ್ದರು.

ಮುಂದಿನ ಮೇ ತಿಂಗಳಿನಲ್ಲ್ಲಿ ಈ ನೃತ್ಯ ತಂಡವು ಥಾಯ್ಲಾಂಡ್‍ನಲ್ಲಿ ನಡೆಯಲಿರುವ ಅಂತಾರ್ರಾಷ್ಟ್ರೀಯ ಪ್ರಶಸ್ತಿ ಸ್ಪರ್ಧೆಯಲ್ಲಿ ಭಾಗವಹಿಸಲಿರುವದಾಗಿ ವಿನೋದ್ ಕರ್ಕೇರ ತಿಳಿಸಿದ್ದಾರೆ.