ಸೋಮವಾರಪೇಟೆ, ಪೆ.6 : ಅಪಘಾತದಲ್ಲಿ ಗಾಯಗೊಂಡಿದ್ದ ಅಂಗವಿಕಲ ವ್ಯಕ್ತಿಯೋರ್ವರು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿರುವ ಘಟನೆ ಇಂದು ನಡೆದಿದೆ.
ಕಳೆದ ಜ. 29 ರಂದು ಗರಗಂದೂರು ಗ್ರಾ.ಪಂ. ವ್ಯಾಪ್ತಿಯ ಕುಂಬಾರಬಾಣೆಯಲ್ಲಿ ಜರುಗಿದ ಅಪಘಾತದಲ್ಲಿ ಅಲ್ಲಿನ ನಿವಾಸಿ ಮಣಿ ಎಂಬವರು ತೀವ್ರವಾಗಿ ಗಾಯ ಗೊಂಡಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಆಸ್ಪತ್ರೆಗೆ ದಾಖಲಿಸ Àಲಾಗಿತ್ತು. ಆದರೆ ಅಲ್ಲೂ ಸಹ ಚಿಕಿತ್ಸೆ ಫಲಕಾರಿಯಾಗದೇ ಇಂದು ಮುಂಜಾನೆ ಮಣಿ ಅವರು ಸಾವನ್ನಪ್ಪಿದ್ದಾರೆ. ಮೃತರು ಪತ್ನಿ ಸೇರಿದಂತೆ ಓರ್ವ ಪುತ್ರ ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ.
ವಾಹನ ತಂದಿತು ಪ್ರಾಣಕ್ಕೆ ಕುತ್ತು: ಪೋಲಿಯೋ ಖಾಯಿಲೆಗೆ ಒಳಗಾಗಿದ್ದ ಮಣಿ ಅವರು ತಮ್ಮ ಕಾಲಿನ ಸ್ವಾಧೀನವನ್ನು ಕಳೆದುಕೊಂಡಿದ್ದು, ಅಂಗವಿಕಲರ ಕಲ್ಯಾಣ ಇಲಾಖೆ ಮೂಲಕ ಕಳೆದ ಜ. 26ರ ಗಣರಾಜ್ಯೋತ್ಸವದಂದು ವಿಶೇಷವಾಗಿ ವಿನ್ಯಾಸಗೊಳಿಸಿರುವ ಅಂಗವಿಕಲರ ವಾಹನವನ್ನು ಪಡೆದುಕೊಂಡಿದ್ದರು.
ತಾ. 29ರಂದು ನಿಯಂತ್ರಣ ತಪ್ಪಿ ವಾಹನ ಸಹಿತ ಕುಂಬಾರಬಾಣೆಯ ಮುಖ್ಯ ರಸ್ತೆ ಬದಿಯ ಗುಂಡಿಗೆ ಬಿದ್ದು ತೀವ್ರ ಗಾಯಗೊಂಡಿದ್ದರು. ಮನೆಯವರು ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ಕೊಡಿಸಿದ್ದರೂ ಯಾವದೇ ಪ್ರಯೋಜನವಾಗಿಲ್ಲ. ವಾಹನ ಚಾಲನೆಯ ಬಗ್ಗೆ ಅನುಭವವಿಲ ್ಲದಿದ್ದರೂ ಸಹ ಚಾಲನಾ ಪರವಾನಗಿ ಪಡೆದುಕೊಂಡಿದ್ದ ಮಣಿ ಕೇವಲ 3 ದಿನದಲ್ಲೇ ವಾಹನ ಅವಘಡಕ್ಕೆ ಒಳಗಾಗಿ ಇಹಲೋಕ ತ್ಯಜಿಸಿದ್ದಾರೆ ಎಂದು ಸ್ಥಳೀಯರು ನೊಂದು ನುಡಿದಿದ್ದಾರೆ.