ಕೂಡಿಗೆ, ಫೆ. 6: ಕೂಡಿಗೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಬ್ಯಾಡಗೊಟ್ಟ ಗ್ರಾಮದಲ್ಲಿ ಗ್ರಾಮ ಪಂಚಾಯಿತಿ ಜನಪ್ರತಿನಿಧಿಗಳು ಹಾಗೂ ನಿವೇಶನ ರಹಿತ ಸಾರ್ವಜನಿಕರು ತಾ.8ರಂದು ಅನಿರ್ಧಿಷ್ಟಾವಧಿ ಧರಣಿ ನಡೆಸಲು ಮಾಸಿಕ ಸಭೆಯಲ್ಲಿ ತೀರ್ಮಾನಿಸಿ, ಈ ಬಗ್ಗೆ ಜಿಲ್ಲಾಧಿಕಾರಿಯವರಿಗೆ ಮತ್ತು ಜಿಲ್ಲಾ ಮುಖ್ಯ ಕಾರ್ಯನಿರ್ವಹಾಣಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಲಾಗಿತ್ತು. ಪತ್ರಕ್ಕೆ ಸ್ಪಂದಿಸಿದ ಅಧಿಕಾರಿಗಳು ಧರಣಿಯನ್ನು ಕೈಬಿಡುವಂತೆ ಸೂಚಿಸಿ, ಮುಂದಿನ 15 ದಿನಗಳೊಳಗೆ ಬ್ಯಾಡಗೊಟ್ಟ ಗ್ರಾಮದ ಸರ್ವೇ ನಂ. 11 ರ ಒಂದೂವರೆ ಎಕರೆ ಜಾಗವನ್ನು ಕೂಡಿಗೆ ಗ್ರಾಮ ಪಂಚಾಯ್ತಿಗೆ ಸರ್ವೇ ಮಾಡಿ ನೀಡಲಾಗುವದು ಎಂದು ಭರವಸೆ ನೀಡಿದ ಹಿನ್ನೆಲೆಯಲ್ಲಿ ಕೂಡಿಗೆ ಗ್ರಾ. ಪಂ ಅಧ್ಯಕ್ಷೆ, ಸದಸ್ಯರು ಮತ್ತು ವಸತಿ ರಹಿತ ಸಾರ್ವಜನಿಕರು ಧರಣಿಯನ್ನು ಮುಂದೂಡಲಾಗಿದೆ ಎಂದು ಕೂಡಿಗೆ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಪ್ರೇಮಲೀಲಾ, ಸದಸ್ಯರಾದ ಕೆ.ವೈ.ರವಿ, ರಾಮಚಂದ್ರ ಮತ್ತು ಗ್ರಾಮಸ್ಥರು ಪತ್ರಿಕಾ ಹೇಳಿಕೆ ನೀಡಿದ್ದಾರೆ.