ವೀರಾಜಪೇಟೆ, ಫೆ. 6: ಕೊಡಗು ಜಿಲ್ಲೆಯ ಬಹುತೇಕ ದೇವಸ್ಥಾನಗಳಿಗೆ ಸಂಬಂಧವಿರುವ ಕೇರಳದ ಕಣ್ಣೂರು ಜಿಲ್ಲೆಯ ಇರಿಟ್ಟಿ ತಾಲೂಕಿನ ಅರ್ಜುನ್ ಕೋಟಾ ಮಹಾದೇವರ ದೇವಸ್ಥಾನದಲ್ಲಿ ತಾ. 13 ರಂದು ಮಹಾ ಶಿವರಾತ್ರಿ ಪೂಜೆಯನ್ನು ಸಾಂಪ್ರದಾಯಿಕವಾಗಿ ಆಚರಿಸಲಾಗುವದು ಎಂದು ಕೊಡಗಿನ ತಕ್ಕ ಮುಖ್ಯಸ್ಥ ಮುಕ್ಕಾಟ್ಟಿರ ಚೋಟು ಅಪ್ಪಯ್ಯ ಹೇಳಿದರು
ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮಹಾಶಿವರಾತ್ರಿ ದಿನದಂದು ಲಕ್ಷ ಪಂಚಾಕ್ಷರಿನಾಮ ಜಪಾರ್ಚನಾ, ಅಷ್ಟದ್ರವ್ಯ ಗಣಪತಿ ಹೋವi, ಮೃತ್ಯುಂಜಯ ಹೋಮ, ರುದ್ರಾಭಿಷೇಕ, ದ್ರವ್ಯಾಭಿಷೇಕ, ಸಾವಿರ ಪರೆ ಸಮರ್ಪಣೆ ಪಾಯಸ ನೈವೇದ್ಯವನ್ನು ನಡೆಸಲಾಗುವದು. ಪೂಜೆಗಳಿಗೆ ಬೇಕಾದ ಸಾಮಗ್ರಿಗಳು ದೇವಾಲಯದಲ್ಲಿ ಲಭ್ಯವಿದೆ ಎಂದು ತಿಳಿಸಿದರು.
ಗೋಷ್ಠಿಯಲ್ಲಿ ದೇವಾಲಯದ ಅಧ್ಯಕ್ಷ ಕೆ.ವಿ.ಜಿ. ಕುರೂಪ್, ಉಪಾಧ್ಯಕ್ಷ ಕೃಷ್ಣನ್ ಮಾಸ್ಟರ್, ವ್ಯವಸ್ಥಾಪಕ ನಾರಾಯಣ್ ಮಾಸ್ಟರ್, ಕಾರ್ಯದರ್ಶಿ ಕೃಷ್ಣನ್ ಕುಟ್ಟಿ ಉಪಸ್ಥಿತರಿದ್ದರು.