ನಾಪೋಕ್ಲು, ಫೆ. 6: ಕಕ್ಕಬ್ಬೆ ಪಾಡಿ ಶ್ರೀ ಇಗ್ಗುತ್ತಪ್ಪ ದೇವಾಲಯದ ಪ್ರತಿಷ್ಠಾಪನಾ ಮಹೋತ್ಸವವು ತಾ. 10 ರಂದು ನಡೆಯಲಿದೆ. ಅಂದು ತುಲಾಭಾರ ಸೇವೆ ಹಾಗೂ ಇತರ ಪೂಜಾ ಕೈಂಕರ್ಯಗಳು ಜರುಗಲಿದ್ದು ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಉತ್ಸವದಲ್ಲಿ ಪಾಲ್ಗೊಂಡು ದೇವರ ಕೃಪೆಗೆ ಪಾತ್ರರಾಗಬೇಕೆಂದು ತಕ್ಕರಾದ ಪರದಂಡ ಡಾಲಿ ತಿಳಿಸಿದ್ದಾರೆ.