ಕರಿಕೆ, ಫೆ. 6: ಇಲ್ಲಿಗೆ ಸಮೀಪದ ಸುಮಾರು 500 ವರ್ಷ ಇತಿಹಾಸವಿರುವ ಎಳ್ಳುಕೊಚ್ಚಿ ಮಂಙನಡ್ಕ ಶ್ರೀ ತುಳೂರು ವನದ ಭಗವತಿ ಕ್ಷೇತ್ರದ ವಾರ್ಷಿಕ ಜಾತ್ರಾ ಮಹೋತ್ಸವ ತಾ. 14 ರಿಂದ 21 ರವರೆಗೆ ನಡೆಯಲಿದ್ದು, ತಾ. 20 ರಂದು ಮುನ್ನಾಯರೀಶ್ವರ ಕೋಲ ಹಾಗೂ ತಾ. 21 ರಿಂದ ಭಗವತಿ ಅಮ್ಮನವರ ಕೋಲ ನಡೆಯಲಿದೆ. ಪ್ರತಿ ವರ್ಷ ಶಿವರಾತ್ರಿ ಮರುದಿನ ಆರಂಭವಾಗುವ ಈ ಉತ್ಸವದಲ್ಲಿ ಒಟ್ಟು 101 ಭೂತಗಳ ದರ್ಶನ ನಡೆಯಲಿದ್ದು, ಕೇರಳ ರಾಜ್ಯದ ಕಾಸರಗೋಡು, ಕಣ್ಣೂರು, ಕರ್ನಾಟಕದ ಕೊಡಗು, ದಕ್ಷಿಣ ಕನ್ನಡ ಜಿಲ್ಲೆಗಳಿಂದ ಸಾವಿರಾರು ಭಕ್ತರು ಆಗಮಿಸಲಿದ್ದು ದೇವಾಲಯದಿಂದ ಅನ್ನಸಂತರ್ಪಣೆ ಏರ್ಪಡಿಸಲಾಗಿದೆ.