ಗೋಣಿಕೊಪ್ಪ ವರದಿ, ಫೆ. 2 : ಹಾಕಿ ಗುಜರಾತ್ ವಿರುದ್ಧ ಜಯ ಗಳಿಸಿರುವ ಸಬ್‍ಜೂನಿಯರ್ ಹಾಕಿಕೂರ್ಗ್ ತಂಡ ಸೆಮಿ ಫೈನಲ್ ಪ್ರವೇಶಿಸುವ ಉತ್ಸಾಹದಲ್ಲಿದೆ.

ಅಸ್ಸಾಂನ ಕಾಲಿಬೊರ್ ಮೈದಾನದಲ್ಲಿ ನಡೆಯುತ್ತಿರುವ 8 ನೇ ನ್ಯಾಷನಲ್ ಸಬ್ ಜೂನಿಯರ್ ಚಾಂಪಿಯನ್‍ಶಿಪ್ ಟೂರ್ನಿಯ ಲೀಗ್ ಹಂತದ 2 ನೇ ಪಂದ್ಯವನ್ನು ಹಾಕಿಕೂರ್ಗ್ ಗೆದ್ದುಕೊಂಡಿದೆ.ಮುಂಬಯಿ ಸ್ಪೋಟ್ರ್ಸ್ ಸ್ಕೂಲ್ ವಿರುದ್ಧ ನಡೆಯುವ ಲೀಗ್‍ನ ಕೊನೆಯ ಪಂದ್ಯ ಗೆದ್ದು, ಸೆಮಿಫೈನಲ್ ಪ್ರವೇಶಿಸುವ ತವಕದಲ್ಲಿದೆ.

ಗುಜರಾತ್ ಹಾಕಿ ವಿರುದ್ಧ ನಡೆದ ಲೀಗ್‍ನ 2 ನೇ ಪಂದ್ಯದಲ್ಲಿ 10-0 ಗೋಲುಗಳ ಭರ್ಜರಿ ಗೆಲುವು ದಾಖಲಿಸಿತು. ಪೊನ್ನಿಮಾಡ ಶಿಲ್ಪ ಹಾಗೂ ಪಿ. ಯು. ರಮ್ಯ (22, 32, 39, 57 ನೇ ನಿಮಿಷಗಳಲ್ಲಿ) ತಲಾ 4 ಗೋಲು ಹೊಡೆದು ಗೆಲುವಿನಲ್ಲಿ ಮುಖ್ಯ ಪಾತ್ರವಹಿಸಿದರು. ಪೊನ್ನಿಮಾಡ ಶಿಲ್ಪ ಹ್ಯಾಟ್ರಿಕ್ (17, 40, 46, 54 ನೇ ನಿಮಿಷಗಳಲ್ಲಿ) ಗೋಲು ಹೊಡೆದು ಸಂಭ್ರಮಿಸಿದರು.

ಉಳಿದಂತೆ ಜಿ. ಕಾವ್ಯ (13 ನಿಮಿಷ) ಮತ್ತು ಬಿ. ಎ. ಶಯಾ ಕಾವೇರಮ್ಮ (37 ನಿಮಿಷ ) ತಲಾ ಒಂದೊಂದು ಗೋಲು ಹೊಡೆದರು.

ಕೂರ್ಗ್ ತಂಡದಲ್ಲಿ ಹೆಚ್. ಡಿ. ನೇತ್ರಾವತಿ, ಎಂ. ಕೆ. ಸುಜಾತ, ಕೆ. ಎಸ್. ಅನ್ನಪೂರ್ಣ, ಡಿ. ಜೆ. ನವ್ಯ, ಶಯಾ ಕಾವೇರಮ್ಮ, ಹೆಚ್. ಎ. ಅಪ್ಸರಾ, ಪಿ. ಓ. ಶಿಲ್ಪ, ಎಸ್. ಅದಿರಾ, ಕೆ. ಎಸ್. ಸುರಕ್ಷಾ, ಕೆ. ಕೆ. ಗೌತಮಿ, ಕೆ. ಎ. ಪಾರ್ವತಿ, ಪಿ. ಯು. ರಮ್ಯ, ಜಿ. ಕಾವ್ಯ, ಹೆಚ್. ಎಸ್. ಜಾಹ್ನವಿ, ಸಿ. ಕೆ. ಪ್ರಗತಿ, ಟಿ. ಸಿ. ಸುಚಿತ್ರಾ, ಎಸ್. ಹೆಚ್. ಬೃಂದಾ, ಬಿ. ಜಿ. ಜೀವಿತಾ,

ತರಬೇತುದಾರರಾಗಿ ವಿನೋದ್, ವ್ಯವಸ್ಥಾಪಕಿಯಾಗಿ ಕುಡೆಕಲ್ ಸವಿತಾ ಪಾಲ್ಗೊಂಡಿದ್ದಾರೆ.