ಮಡಿಕೇರಿ, ಫೆ. 2: ತೀರಾ ಹದಗೆಟ್ಟಿರುವ ಕತ್ತಲೆಕಾಡು - ಚೆಟ್ಟಳ್ಳಿ ನಡುವಿನ ಅಬ್ಯಾಲ ರಸ್ತೆ ದುರಸ್ತಿಗೆ ಲೋಕೋಪಯೋಗಿ ಇಲಾಖೆ ಮುಂದಾಗಿದ್ದು, ತಾ.ಪಂ. ಸದಸ್ಯ ಬಲ್ಲಾರಂಡ ಮಣಿ ಉತ್ತಪ್ಪ ಖುದ್ದು ಪರಿಶೀಲನೆ ನಡೆಸಿದರು. ಹದಗೆಟ್ಟಿರುವ ರಸ್ತೆ ಸರಿಪಡಿಸದಿದ್ದರೆ, ಲೋಕೋಪಯೋಗಿ ಇಲಾಖೆ ಕಚೇರಿಗೆ ಮುತ್ತಿಗೆ ಹಾಕುವದಾಗಿ ಈ ಹಿಂದೆ ಮಣಿ ಉತ್ತಪ್ಪ ಹಾಗೂ ಗ್ರಾಮಸ್ಥರು ಎಚ್ಚರಿಸಿದ್ದರು. ಆ ಬೆನ್ನಲ್ಲೇ ಕೆಲಸ ಕೈಗೊಂಡಿರುವ ಅಧಿಕಾರಿಗಳ ಕ್ರಮವನ್ನು ತಾ.ಪಂ. ಸದಸ್ಯರು ಶ್ಲಾಘಿಸಿದರು.