ಮಡಿಕೇರಿ, ಫೆ. 2: ಕ್ಲುಲ್ಲಕ ಕಾರಣಕ್ಕೆ ಕುಡಿದ ಮತ್ತಿನಲ್ಲಿ ಹೊಡೆದಾಡಿಕೊಂಡಿದ್ದ ಕಾರ್ಮಿಕರ ಪೈಕಿ ಒಬ್ಬಾತ ಮೃತಪಟ್ಟ ಹಿನ್ನೆಲೆಯಲ್ಲಿ ಮತ್ತೋರ್ವನ ವಿರುದ್ಧ ಕೊಲೆ ಮೊಕದ್ದಮೆ ದಾಖಲಿಸಿ ಬಂಧಿಸಲಾಗಿದೆ. ಅಪ್ಪಂಗಳ ನಿವಾಸಿ, ಯೋಗೇಂದ್ರ ಎಂಬವರ ತೋಟ ಕಾರ್ಮಿಕ ಜೇನುಕುರುಬರ ರಾಜ (50) ಕೊಲೆಗೀಡಾದ ದುರ್ದೈವಿ. ಆರೋಪಿ ಅಲ್ಲಿನ ಕಾರ್ಮಿಕ ಮುರುಗ (25) ಎಂಬಾತನನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ. ಜ. 31 ರಂದು ಕಾರ್ಮಿಕರಿಬ್ಬರು ಕುಡಿದ ಅಮಲಿನಲ್ಲಿ ಕಣ್ಣಿಗೆ ಟಾರ್ಜ್ ಬೆಳಕು ಬಿಟ್ಟ ದೂಷಣೆಯೊಂದಿಗೆ ಪರಸ್ಪರ ಬಡಿದಾಡಿಕೊಂಡಿದ್ದಾರೆ. ಆಸ್ಪತ್ರೆಯಲ್ಲಿ ಇಬ್ಬರೂ ಚಿಕಿತ್ಸೆ ಪಡೆದಿದ್ದಾರೆ. ಆ ಬಳಿಕ ರಾಜ ಮೃತಪಟ್ಟ ಮೇರೆಗೆ ಮುರುಗನನ್ನು ಕೊಲೆ ಮೊಕದ್ದಮೆಯೊಂದಿಗೆ ಬಂಧಿಸಲಾಗಿದೆ ಎಂದು ಗ್ರಾಮಾಂತರ ಪೊಲೀಸ್ ವೃತ್ತ ನಿರೀಕ್ಷಕ ಪ್ರದೀಪ್ ಅವರು ಖಾತರಿಪಡಿಸಿದ್ದಾರೆ. ಜಿಲ್ಲಾ ಪೊಲೀಸ್ ಅಧೀಕ್ಷಕ ಪಿ. ರಾಜೇಂದ್ರ ಪ್ರಸಾದ್, ಡಿವೈಎಸ್‍ಪಿ ಸುಂದರ್‍ರಾಜ್ ನಿರ್ದೇಶನ ದೊಂದಿಗೆ ಕಾನೂನು ಕ್ರಮ ಜರುಗಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.