ಸೋಮವಾರಪೇಟೆ, ಫೆ. 2: ಇಲ್ಲಿಗೆ ಸಮೀಪದ ಬಳಗುಂದ ಎಸ್ಟೇಟ್ - ಒಂಟಿಯಂಗಡಿ ಲೈನ್‍ಮನೆಯಲ್ಲಿ ತಂಗಿರುವ ಅಸ್ಸಾಮಿಗರ ಗುಂಪಿನಿಂದ ಸ್ಥಳೀಯ ಕಾರ್ಮಿಕರ ಮೇಲೆ ಹಲ್ಲೆ ನಡೆದಿರುವ ಘಟನೆ ಇಂದು ಸಂಜೆ ಸಂಭವಿಸಿದೆ. ಪರಿಣಾಮ ಸ್ಥಳೀಯ ಮೂವರು ಕಾರ್ಮಿಕರು ಸೋಮವಾರಪೇಟೆ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿ ಪೊಲೀಸರಿಗೆ ದೂರು ನೀಡಿದ್ದಾರೆ.ಕಳೆದ ನಾಲ್ಕು ವರ್ಷಗಳ ಹಿಂದೆ ಸೋಮವಾರಪೇಟೆಯ ಒಂಟಿಯಂಗಡಿ ಎಸ್ಟೇಟ್‍ಗೆ ಕೆಲಸಕ್ಕೆಂದು ಆಗಮಿಸಿ, ಲೈನ್‍ಮನೆಯಲ್ಲಿ ಆಶ್ರಯ ಪಡೆದಿದ್ದ 15 ಪುರುಷರು ಮತ್ತು 10 ಮಹಿಳೆಯರನ್ನು ಒಳಗೊಂಡ ತಂಡ ನೆರೆಯ ನಿವಾಸಿಗಳೊಂದಿಗೆ ಕ್ಷುಲ್ಲಕ ವಿಚಾರಕ್ಕೆ ಜಗಳ ತೆಗೆದು ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.