ಸೋಮವಾರಪೇಟೆ, ಫೆ.2 : ಹಾಸನದ ಜನಮಿತ್ರ ಪತ್ರಿಕೆ ನಡೆಸಿದ ಸಂಕ್ರಾಂತಿ ಸಂಭ್ರಮ ಕಥೆ ಮತ್ತು ಕವಿತೆ ಸ್ಪರ್ಧೆಯಲ್ಲಿ ಸೋಮವಾರಪೇಟೆಯ ಲೇಖಕಿ ಶರ್ಮಿಳಾ ರಮೇಶ್ ಅವರು ಬಹುಮಾನಕ್ಕೆ ಪಾತ್ರರಾಗಿದ್ದಾರೆ.
ಹಾಸನದ ಹೇಮಾವತಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಸಮಾರಂಭದಲ್ಲಿ ಕೋಲಾರದ ಸಾಹಿತಿ ಸ. ರಘುನಾಥ, ಹಾಸನದ ಜ.ನಾ. ತೇಜಶ್ರೀ, ಕರ್ನಾಟಕ ನಾಟಕ ಅಕಾಡೆಮಿ ಸದಸ್ಯ ಬೇಲೂರು ರಘುನಂದನ, ಪತ್ರಕರ್ತರ ಸಂಘದ ಅಧ್ಯಕ್ಷ ರವಿ ನಾಕಲಗೂಡು, ಸಂಪಾದಕ ಮದನಗೌಡ, ವ್ಯವಸ್ಥಾಪಕ ನವೀನ್ ಸೇರಿದಂತೆ ಇತರರು ಬಹುಮಾನ ವಿತರಿಸಿದರು.