ಸಿದ್ದಾಪುರ, ಫೆ.2: ಕರ್ತವ್ಯ ನಿರತ ಮಹಿಳಾ ಹೋಂಗಾರ್ಡ್ ಆಟೋ ಚಾಲಕರೋರ್ವರಿಗೆÀ ಹೊಡೆದ ಘಟನೆ ಪೊಲೀಸ್ ಠಾಣಾ ಮೆಟ್ಟಿಲೇರಿದ ಪ್ರಸಂಗ ನಡೆಯಿತು. ಸಿದ್ದಾಪುರ ಪಟ್ಟಣದಲ್ಲಿ ಕರ್ತವ್ಯ ನಿರತ ಹೋಂಗಾರ್ಡ್ ಆಟೋ ಪಾರ್ಕಿಂಗ್ ವಿಚಾರಕ್ಕೆ ಸಂಬಂಧಿಸಿದಂತೆ, ಮಾತಿನ ಚಕಮಕಿ ನಡೆದಿದೆ.

ಬಳಿಕ ವಿಕೋಪಕ್ಕೆ ತೆರಳಿ ಆಕ್ರೋಶಕೊಂಡ ವೇಳೆ ಚಾಲಕನ ಮೇಲೆ ಹಲ್ಲೆ ನಡೆದಿದೆ ಎನ್ನಲಾಗಿದೆ. ಪರಿಣಾಮ ಚಾಲಕನ ತಲೆಯ ಭಾಗಕ್ಕೆ ಗಾಯವಾಗಿದ್ದು, ಇಲ್ಲಿನ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಪ್ರಥಮ ಚಿಕಿತ್ಸೆ ಪಡೆದುಕೊಂಡಿದ್ದಾರೆ. ಬಳಿಕ ಚಾಲಕರ ಸಂಘ ಹೋಂಗಾರ್ಡ್ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಠಾಣೆಯ ಮೆಟ್ಟಿಲೇರಿದರು. ಈ ಸಂದರ್ಭ ಇತರ ಹೋಂಗಾರ್ಡ್ ಸಿಬ್ಬಂದಿಗಳು ಸಹ ಠಾಣೆಗೆ ಆಗಮಿಸಿದರು. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಹೋಂಗಾರ್ಡ್ ಮಹಿಳೆಯು ತನ್ನ ಕಾಲಿನ ಮೇಲೆ ಆಟೋ ಚಲಾಯಿಸಿಕೊಂಡು ಗಾಯಗೊಳಿಸಿದ್ದಾಗಿ ಠಾಣೆಯಲ್ಲಿ ವಿಷಯವನ್ನು ಪ್ರಸ್ತಾಪಿಸಿದ್ದಾರೆ. ಬಳಿಕ ಠಾಣೆಯಲ್ಲಿ ಉಭಯ ಕಡೆ ರಾಜಿ ತೀರ್ಮಾನಕ್ಕೆ ಮುಂದಾದರೆಂದು ಗೊತ್ತಾಗಿದೆ.