ಮಡಿಕೇರಿ, ಫೆ. 2: 2017-18ನೇ ಸಾಲಿನ ಪದವಿಪೂರ್ವ ಕಾಲೇಜು ಬಾಲಕಿಯರ ಕಾಲ್ಚೆಂಡು ಪಂದ್ಯಾಟದ ವಿಭಾಗದಲ್ಲಿ ಪಾಲಿಬೆಟ್ಟ ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರಥಮ ಪಿ.ಯು.ಸಿ ಕಲಾ ವಿಭಾಗದ ನೇತ್ರಾ ಜೆ.ಆರ್. ತಾ. 5 ರಿಂದ ಮಹರಾಷ್ಟ್ರದಲ್ಲಿ ನಡೆಯುವ ರಾಷ್ಟ್ರಮಟ್ಟದ ಪಂದ್ಯಾಟದಲ್ಲಿ ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸುತ್ತಾಳೆ.

ತಾಲೂಕು, ಜಿಲ್ಲಾ ಹಾಗೂ ರಾಜ್ಯ ಮಟ್ಟದ ಪಂದ್ಯಾಟದಲ್ಲಿ ಉತ್ತಮ ಪ್ರದರ್ಶನ ತೋರಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿರುವ ನೇತ್ರಾ ಪಾಲಿಬೆಟ್ಟ ಸಮೀಪದ ಕೋಟೆಬೆಟ್ಟ ಎಸ್ಟೇಟ್‍ನ ಕಾರ್ಮಿಕ ರಮೇಶ್ ಹಾಗೂ ಪುಷ್ಪ ದಂಪತಿಗಳ ಪುತ್ರಿ. ಈಕೆ ರಾಷ್ಟ್ರಮಟ್ಟದಲ್ಲೂ ಉತ್ತಮ ಪ್ರದರ್ಶನ ನೀಡುವ ಭರವಸೆಯನ್ನು ಹೊಂದಿದ್ದಾಳೆ. ಈ ಪ್ರತಿಭೆಗೆ ಪಾಲಿಬೆಟ್ಟ ಗ್ರಾ.ಪಂ. ನೆರವು ಕಲ್ಪಿಸಿದೆ.