ವೀರಾಜಪೇಟೆ, ಫೆ. 1: ಕೂರ್ಗ್ ಕೇಬಲ್ ಬಾಯ್ಸ್ ವತಿಯಿಂದ ದ್ವೀತಿಯ ವರ್ಷದ ಟೈಗರ್ ಪೈ ಕಾಲ್ಚೇಂಡು ಪಂದ್ಯಾವಳಿಯು ವೀರಾಜಪೇಟೆ ನಗರದ ತಾಲೂಕು ಮೈದಾನದಲ್ಲಿ ತಾ. 2-2 ರಿಂದ (ಇಂದಿನಿಂದ) ಅರಂಭಗೊಂಡು ತಾ. 4 ರವರೆಗೆ ನಡೆಯಲಿದೆ ಎಂದು ಸಂಸ್ಥೆಯ ವೈವಸ್ಥಾಪಕ ಅಭೀನವ್ ತಿಳಿಸಿದರು.

ಪಂದ್ಯಾವಳಿಯಲ್ಲಿ ರಾಜ್ಯ ಮಟ್ಟದ ಹೆಸರಾಂತ ಹಾಗು ಜಿಲ್ಲೆಯಲ್ಲಿ ಗುರುತಿಸಿಕೊಂಡಿರುವ ಕ್ರೀಡಾ ಸಂಸ್ಥೆಗಳ ಆಟಗಾರರು ಭಾಗವಹಿಸಲಿದ್ದಾರೆ ಪಂದ್ಯಾಟದಲ್ಲಿ ವಿಜೇತ ತಂಡಗಳಿಗೆ ಪ್ರಥಮ 25,000 ರೂ. ನಗದು ಸೇರಿದಂತೆ ಅಕರ್ಷಕ ಟ್ರೋಫಿ ಮತ್ತು ದ್ವೀತಿಯ 15,000 ರೂ. ನಗದು ಸೇರಿದಂತೆ ಅಕರ್ಷಕ ಟ್ರೋಫಿ ನೀಡಲಾಗುತ್ತದೆ ಎಂದು ತಿಳಿಸಿದ್ದಾರೆ.