ಮಡಿಕೇರಿ, ಫೆ. 1: ಕೇರಳ ರಾಜ್ಯದ ಅಂಗ ಮಾಲಿಯಲ್ಲಿ ಇತ್ತೀಚೆಗೆ ಅಂತರರಾಷ್ಟ್ರೀಯ ಕರಾಟೆ ಸಂಸ್ಥೆ ಆಶ್ರಯದಲ್ಲಿ ನಡೆದ ಆಹ್ವಾನಿತ ಅಂತರ ರಾಜ್ಯಮಟ್ಟದ ಕರಾಟೆ ಪಂದ್ಯಾವಳಿಯಲ್ಲಿ ಕರ್ನಾಟಕ ರಾಜ್ಯದಿಂದ ಭಾಗವಹಿಸಿದ ಕೊಡಗು ಜಿಲ್ಲೆಯ ಅಕಾಡೆಮಿ ಆಫ್ ಕರಾಟೆ ಸಂಸ್ಥೆಯ ಕರಾಟೆ ಪಟುಗಳು ಕಲರ್ ಬೆಲ್ಟ್ ಕುಮಿತ್ತೆ ವಿಭಾಗದಲ್ಲಿ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ.