ಗೋಣಿಕೊಪ್ಪ ವರದಿ, ಫೆ. 1 : ಮಧುಮೇಹ ಹಾಗೂ ನೇತ್ರ ಉಚಿತ ತಪಾಸಣಾ ಶಿಬಿರವನ್ನು ತಾ. 6 ರಂದು ಬೆಳಗ್ಗೆ 8.30 ಗಂಟೆಯಿಂದ ಸಂಜೆ 4 ರ ವರೆಗೆ ಪೊನ್ನಂಪೇಟೆಯ ಶ್ರೀ ರಾಮಕೃಷ್ಣಾಶ್ರಮದಲ್ಲಿ ಆಯೋಜಿಸಲಾಗಿದೆ ಎಂದು ಲಯನ್ಸ್ ಸಂಸ್ಥೆಯ ಅಧ್ಯಕ್ಷ ಸೋಮೆಯಂಡ ಪೂಣಚ್ಚ ತಿಳಿಸಿದ್ದಾರೆ.
ಶಿಬಿರವು ಮೈಸೂರು ಡಾ.ಮೋಹನ್ಸ್ ಡಯಾಬಿಟಿಕ್ಸ್ ಸ್ಪೆಷಾಲಿಟಿ ಸೆಂಟರ್ ಹಾಗೂ ಪೊನ್ನಂಪೇಟೆಯ ಶ್ರೀ ರಾಮಕೃಷ್ಣ ಸೇವಾಶ್ರಮದ ಸಹಯೋಗಲ್ಲಿ ನಡೆಯಲಿದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಮಧುಮೇಹ ತಜ್ಞ ಡಾ. ರೇಣುಕಾ ಪ್ರಸಾದ್ ತಪಾಸಣೆ ನಡೆಸಿ ಸಲಹೆಗಳನ್ನು ನೀಡಲಿದ್ದಾರೆ. ಶಿಬಿರದಲ್ಲಿ ಭಾಗವಹಿಸುವ ರೋಗಿಗಳಿಗೆ ತಪಾಸಣೆಯೊಂದಿಗೆ ವೈದ್ಯರೊಂದಿಗೆ ಸಮಾಲೋಚನೆ ಹಾಗೂ ಉಚಿತ ಡಯಾಬೆಟಿಕ್ ಟೆಸ್ಟ್ ಪ್ಯಾಕೇಜ್ ನೀಡಲಾಗುವದು. ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆಗೆ ಒಳಗಾಗುವವರಿಗೆ ಹೆಚ್ಚಿನ ಚಿಕಿತ್ಸೆಯನ್ನು ಉಚಿತವಾಗಿ ಕಲ್ಪಿಸಲಾಗುವದು ಎಂದು ಹೇಳಿದರು.
ಕಾರ್ಯಕ್ರಮದ ಉದ್ಘಾಟನೆಯನ್ನು ರಾಮಕೃಷ್ಣ ಸೇವಾಶ್ರಮದ ಶ್ರೀ ಬೋಧಸ್ವರೂಪನಂದ ಸ್ವಾಮೀಜಿ ನೆರವೇರಿಸಲಿದ್ದಾರೆ. ಅತಿಥಿಗಳಾಗಿ ಮೈಸೂರಿನ ಡಾ.ಮೋಹನ್ಸ್ ಆಸ್ಪತ್ರೆಯ ಡಾ. ರೇಣುಕಾ ಪ್ರಸಾದ್ ಹಾಗೂ ಶ್ರೀ ಪಾರಿಜಾತ ನಂದಾ ಸ್ವಾಮೀಜಿ ಪಾಲ್ಗೊಳ್ಳಲಿದ್ದಾರೆ ಎಂದರು.
ಹೆಚ್ಚಿನ ಮಾಹಿತಿಗೆ 94804 48862 ಹಾಗೂ 72044 06659 ಸಂಪರ್ಕಿಸುವಂತೆ ತಿಳಿಸಲಾಗಿದೆ. ಗೋಷ್ಠಿಯಲ್ಲಿ ಡಾ. ಮೋಹನ್ಸ್ ಡಯಾಬೆಟಿಕ್ಸ್ ಸ್ಪೆಷಾಲಿಟಿ ಸೆಂಟರ್ ಮಾರುಕಟ್ಟೆ ವ್ಯವಸ್ಥಾಪಕ ಇಮ್ರಾನ್‍ಖಾನ್ ಉಪಸ್ಥಿತರಿದ್ದರು.