ಸೋಮವಾರಪೇಟೆ,ಫೆ.1: ದಲಿತ ಸಂಘರ್ಷ ಸಮಿತಿಯ ಸ್ಥಾಪಕಾಧ್ಯಕ್ಷರಾಗಿ ಸೋಮವಾರಪೇಟೆ ಭಾಗದಲ್ಲಿ ದಲಿತಪರ ಹೋರಾಟಗಳನ್ನು ನಡೆಸಿ ಸಮಾಜದ ಸಂಘಟನೆಗಾಗಿ ಶ್ರಮಿಸಿದ ಇಲ್ಲಿನ ವೆಂಕಟೇಶ್ವರ ಬಡಾವಣೆಯ ದಿ. ಗುರುಲಿಂಗಪ್ಪ ಅವರ ಸ್ಮರಣೆ ಕಾರ್ಯಕ್ರಮ ಇಲ್ಲಿನ ಅಂಬೇಡ್ಕರ್ ಭವನದಲ್ಲಿ ನಡೆಯಿತು. ದಲಿತ ಪರ ಸಂಘಟನೆಗಳ ಮುಖಂಡರಾದ ಜಯಪ್ಪ ಹಾನಗಲ್ಲು, ಬಿ.ಈ. ಜಯೇಂದ್ರ, ನಳಿನಿ ಗಣೇಶ್, ಶೈಲಾ ಗುರುಲಿಂಗಪ್ಪ, ಗಣೇಶ್ ಸೇರಿದಂತೆ ಇತರರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.