ವೀರಾಜಪೇಟೆ, ಫೆ. 1: ಎವೆಂಜರ್ಸ್ ಬಾಸ್ಕೆಟ್‍ಬಾಲ್ ಕ್ಲಬ್‍ನ 6ನೇ ವರ್ಷದ ಜಿಲ್ಲಾಮಟ್ಟದ ಬಾಸ್ಕೆಟ್‍ಬಾಲ್ ಪಂದ್ಯಾವಳಿಗಳಲ್ಲಿ ಆತಿಥೇಯ ಎವಂಜರ್ಸ್ ಬಾಸ್ಕೆಟ್‍ಬಾಲ್ ಕ್ಲಬ್ ತಂಡ ವಿಜೇತವಾಗಿದೆ. ವೀರಾಜಪೇಟೆ ಕಾವೇರಿ ಕಾಲೇಜಿನ ಕ್ರೀಡಾಂಗಣದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಎವೆÀಂಜರ್ಸ್ ತಂಡ ಗೋಣಿಕೊಪ್ಪ ಕಾವೇರಿ ಕಾಲೇಜು ತಂಡವನ್ನು ಮಣಿಸಿ ಚಾಂಪಿಯನ್ ಆಗಿದ್ದಾರೆÉ. ಉಪಾಂತ್ಯ ಪಂದ್ಯಗಳಲ್ಲಿ ಪೊನ್ನಂಪೇಟೆಯ ಎನ್.ಸಿ.ಟಿ. ತಂಡವನ್ನು ಎವೆÀಂಜರ್ಸ್ ಕ್ಲಬ್ ಹಾಗೂ ಮಡಿಕೇರಿಯ ಸ್ಪಾರ್ಟ್ ತಂಡವನ್ನು ಗೋಣಿಕೊಪ್ಪ ಕಾವೇರಿ ಕಾಲೇಜು ತಂಡ ಮಣಿಸಿತು. ಜಿಲ್ಲಾದ್ಯಂತ 10 ತಂಡಗಳು ಪಂದ್ಯಾವಳಿಗಳಲ್ಲಿ ಪಾಲ್ಗೊಂಡಿದ್ದವು. ಪಂದ್ಯ ಶ್ರೇಷ್ಟರಾಗಿ ಕಾವೇರಿ ಕಾಲೇಜಿನ ಅಜಿತ್, ಭವಿಷ್ಯದ ಉತ್ತಮ ಪಟುವಾಗಿ ಎವÀಂಜರ್ಸ್‍ನ ಕವನ್ ಹಾಗೂ ಸರಣಿ ಶ್ರೇಷ್ಟರಾಗಿ ರಾಫಿ ಆಯ್ಕೆ ಹೊಂದಿದರು. ಸಮಾರೋಪ ಸಮಾರಂಭದಲ್ಲಿ ನಿವೃತ್ತ ಕರ್ನಲ್ ಸಿ.ಪಿ. ಮುತ್ತಣ್ಣ, ಪ.ಪಂ. ಸದಸ್ಯ ಕೆ.ಹೆಚ್. ರಾಫಿ, ಕಾವೇರಿ ಕಾಲೇಜಿನ ದೈಹಿಕ ಶಿಕ್ಷಣ ವಿಭಾಗದ ಮುಖ್ಯಸ್ಥೆ ಡಾ. ನೆರವಂಡ ದೇಚಮ್ಮ, ದೈಹಿಕ ಶಿಕ್ಷಕ ನಾಚಪ್ಪ, ಎನ್.ಇ. ಶರೀಫ್ ಅತಿಥಿüಗಳಾಗಿದ್ದರು. ಎವÀಂಜರ್ಸ್ ಬಾಸ್ಕೆಟ್‍ಬಾಲ್ ಕ್ಲಬ್ ಅಧ್ಯಕ್ಷ ಹ್ಯಾರಿ ಅಚ್ಚಯ್ಯ ಅಧ್ಯಕ್ಷತೆ ವಹಿಸಿದ್ದರು.