ಮಡಿಕೇರಿ, ಫೆ. 1: ಫಲಪುಷ್ಪ ಪ್ರದರ್ಶನವನ್ನು ವಿಭಿನ್ನ ರೀತಿಯಲ್ಲಿ ಆಯೋಜಿಸುವಂತೆ ಜಿ.ಪಂ.ಸಿಇಒ ಪ್ರಶಾಂತ್ ಕುಮಾರ್ ಮಿಶ್ರ ಅಧಿಕಾರಿಗಳಿಗೆ ಸೂಚಿಸಿದರು ನಗರದ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಫಲಪುಷ್ಪ ಪ್ರದರ್ಶನ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.ಜನರಿಗೆ ಸಂದೇಶ ನೀಡುವಂತಹ ಕಲಾಕೃತಿಗಳನ್ನು ಮಾಡಿ. ಬರುವ ಪ್ರವಾಸಿಗರಿಗೆ ಯಾವದೇ ರೀತಿಯ ತೊಂದರೆ ಯಾಗಬಾರದು. ಕುಡಿಯುವ ನೀರಿನ ವ್ಯೆವಸ್ಥೆ

ಮತ್ತು ಶೌಚಲಯದ ವ್ಯೆವಸ್ಥೆ ಮಾಡಬೇಕೆಂದರು.ಲಾಲ್‍ಬಾಗ್‍ನ ಮಾರ್ಗದರ್ಶಕರ ಸಲಹೆ ಪಡೆಯುವದು, ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆ, ಪ್ರವಾಸೋದ್ಯಮ ಇಲಾಖೆ, ನಗರಸಭೆ ಒಟ್ಟಾಗಿ ಸೇರಿ ಕೆಲಸ ಮಾಡುವಂತಾಗ ಬೇಕೆಂದರು.

(ಮೊದಲ ಪುಟದಿಂದ) ತೋಟಗಾರಿಕೆ ಇಲಾಖೆಯ ಉಪನಿರ್ದೇಶಕಿ ದೇವಕಿ ಮಾತನಾಡಿ ನಮ್ಮ ಇಲಾಖೆಯಿಂದ ಬ್ರಹ್ಮಗಿರಿ, ಕಾವೇರಿ ಪ್ರತಿಮೆ, ಪ್ರವೇಶಗೋಪುರ, ಇನ್ನಿತರ ಕಲಾಕೃತಿಗಳನ್ನು ಪ್ರದರ್ಶನ ಮಾಡುತ್ತೇವೆ ಹಾಗೆಯೇ ಅರಣ್ಯ ಇಲಾಖೆಯವರು ಅರಣ್ಯ ಸಂರಕ್ಷಣೆ ಕುರಿತು ಪ್ರದರ್ಶನ ಮಾಡುತ್ತಾರೆ ಎಂದು ತಿಳಿಸಿದರು

ನಗರ ಸಭೆ ಆಯುಕ್ತರಾದ ಬಿ.ಶುಭಾ ಮಾತನಾಡಿ ಬಾಲಮಂದಿರದ ಮಕ್ಕಳಿಂದ ಸ್ವಚ್ಛತಾ ಕಾರ್ಯದ ಬಗ್ಗೆ ಪ್ರದರ್ಶನ, ಅಂಗವಿಕಲರ ಬಳಕೆಗೆ ಶೌಚಾಲಯದ ವ್ಯೆವಸ್ಥೆ ಮಾಡುತ್ತೇವೆ ಎಂದು ತಿಳಿಸಿದರು ಕೃಷಿ ಇಲಾಖೆಯ ಜಂಟಿ ನಿರ್ದೇಶಕರಾದ ರಾಮಪ್ಪ ಮಾತನಾಡಿ ಸ್ಟಾಲ್ ವ್ಯೆವಸ್ಥೆ, ಕೃಷಿಹೊಂಡ, ಮತ್ತು ಕೃಷಿ ವಿಜೇತರಿಗೆ ಪ್ರಶಸ್ತಿ ವಿತರಣೆ ಮಾಡುವದಾಗಿ ತಿಳಿಸಿದರು.

ತೋಟಗಾರಿಕೆ ಇಲಾಖೆಯ ಉಪನಿರ್ದೇಶಕರಾದ ದೇವಕಿ, ಪ್ರವಾಸೋದ್ಯಮ ಇಲಾಖೆಯ ರಾಘವೇಂದ್ರ, ಪ್ರಮೋದ್ ಇತರರು ಇದ್ದರು.