ಮಡಿಕೇರಿ, ಫೆ. 1: 12ನೇ ಶತಮಾನದಲ್ಲಿ ಮಡಿವಾಳ ಸಮುದಾಯದಲ್ಲಿ ಜನಿಸಿ ಸಮಾಜದ ಕೊಳಕನ್ನು ನಿರ್ಮೂಲನೆ ಮಾಡಲು ಶ್ರಮಿಸಿದ ಮಹಾನ್ ಶರಣ ಶ್ರೀ ಮಡಿವಾಳ ಮಾಚಿದೇವರು ಎಂದು ಶಾಸಕರಾದ ಸುನಿಲ್ ಸುಬ್ರಮಣಿ ಹೇಳಿದರು. ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ವತಿಯಿಂದ ನಗರದ ಕೋಟೆ ಹಳೇ ವಿಧಾನ ಸಭಾ ಸಭಾಂಗಣದಲ್ಲಿ ಶ್ರೀ ಮಡಿವಾಳ ಮಾಚಿದೇವರ ಜಯಂತೋತ್ಸವ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು.

ಶೋಷಣೆಗೆ ಒಳಗಾದವರನ್ನು ಮೇಲೆತ್ತುವ ಕೆಲಸ ಮಾಡಿದರು ಇವರ ತತ್ವಗಳನ್ನು ವಿದ್ಯಾರ್ಥಿಗಳು ಅಳವಡಿಸಿಕೊಳ್ಳಬೇಕು. ಹಾಗೆಯೇ ತಂದೆ ತಾಯಿಗಳಿಗೆ ಉತ್ತಮ ಹೆಸರು ತನ್ನಿ ಮೊಬೈಲ್ ಮತ್ತು ಟಿ.ವಿ ಗಳಿಂದ ದೂರವಿರಿ. ಓದಿನ ಬಗ್ಗೆ ಹೆಚ್ಚಿನ ನಿಗಾವಹಿಸಿ, ವಿದ್ಯಾರ್ಥಿಗಳ ಭವಿಷ್ಯಕ್ಕೆ ಶಿಕ್ಷಣವೇ ದಾರಿ ಎಂದು ಹೇಳಿದರು.

ಕರ್ನಾಟಕ ರೇಷ್ಮೆ ಮಾರಾಟ ಮಂಡಳಿಯ ಅಧ್ಯಕ್ಷ ಟಿ.ಪಿ ರಮೇಶ್ ಅವರು ಮಾತನಾಡಿ 12ನೇ ಶತಮಾನದ

(ಮೊದಲ ಪುಟದಿಂದ) ಕ್ರಾಂತಿಕಾರಿ ಮಾಚಿದೇವರು ಸಮಾನತೆಯ ಸಮಾಜ ನಿರ್ಮಾಣಕ್ಕೆ ಮತ್ತು ವಚನ ಸಾಹಿತ್ಯಕ್ಕೆ ತಮ್ಮದೆ ಆದ ಚಾಪು ಮೂಡಿಸಿದವರು ಎಂದು ತಿಳಿಸಿದರು.

ನಗರಸಭೆ ಅಧ್ಯಕ್ಷೆ ಕಾವೇರಮ್ಮ ಸೋಮಣ್ಣ ಮಾತನಾಡಿ 12ನೇ ಶತಮಾನದ ಯುಗ ಪುರುಷರು ವೀರರು ಶೂರರು ಹುಟ್ಟಿದ ನಾಡು ನಮ್ಮದು. ಇಲ್ಲಿ ಯಾರು ಮೇಲಲ್ಲ ಯಾರು ಕೀಳಲ್ಲ ಎಂದು ತಿಳಿಸಿದರು.

ಜಿ.ಪಂ ಸಿ.ಇ.ಒ ಪ್ರಶಾಂತ್ ಕುಮಾರ್ ಮಿಶ್ರ ಮಾತನಾಡಿ ಮಾಚಿದೇವರು ನೀಡಿದ ತತ್ವಗಳು ಪ್ರಸ್ತುತವಾಗಿದ್ದು ನಮ್ಮ ದೇಶದ ಸಂವಿಧಾನದ ಆಶಯಗಳಂತಿವೆ ಹಾಗೆಯೇ ಇವರ ಆದರ್ಶಗಳು ಎಲ್ಲಾ ಕಾಲಕ್ಕೂ ಅನ್ವಯಿಸುತ್ತವೆ ಎಂದರು.

ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಬೆಳ್ಯಪ್ಪ ಮಾತನಾಡಿ, ಶ್ರೀ ಮಡಿವಾಳ ಮಾಚಿದೇವರು ಸುಮಾರು 354 ವಚನಗಳನ್ನು ರಚಿಸಿದ್ದಾರೆ. ಮಾನವ ಅರಿಷಡ್ವರ್ಗಗಳನ್ನು ಗೆಲ್ಲಬೇಕು ಹಾಗೆಯೇ ವಿದ್ಯಾರ್ಥಿಗಳು ಆತ್ಮ ವಿಶ್ವಾಸದಿಂದ ಓದಬೇಕು ಎಂದರು.

ಹೆಚ್ಚುವರಿ ಜಿಲ್ಲಾಧಿಕಾರಿ ಡಾ. ನಂಜುಂಡೇಗೌಡ ಮಾತನಾಡಿ 12ನೇ ಶತಮಾನ ಸಂಸ್ಕøತದಿಂದ ಪ್ರೇರಿತವಾಗಿದ್ದ ಕಾಲಘಟ್ಟ ಕೇವಲ ಒಂದು ವರ್ಗಕ್ಕೆ ಮಾತ್ರ ಶಿಕ್ಷಣ ಸಿಮಿತವಾಗಿತ್ತು ಅಂತಹ ಸಂದರ್ಭದಲ್ಲಿ ಜನ್ಮತಾಳಿದ ದಾರ್ಶನಿಕರು ಶೋಷಣೆ ವಿರುದ್ದ ಹೋರಾಡಿದರು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಮಡಿವಾಳ ಅಭಿವೃದ್ಧಿ ಸಂಘದ ಅಧ್ಯಕ್ಷರಾದ ಸುಕುಮಾರ್, ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಚಿನ್ನಸ್ವಾಮಿ, ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಮಂಜುನಾಥ ವಿದ್ಯಾರ್ಥಿಗಳು ಇತರರು ಇದ್ದರು.