ಮಡಿಕೇರಿ, ಫೆ. 1: ಪಾಡಿ ಶ್ರೀ ಇಗ್ಗುತ್ತಪ್ಪ ದೇವಾಲಯಕ್ಕೆ ಕರ್ನಾಟಕ ಧಾರ್ಮಿಕ ದತ್ತಿ ಮತ್ತು ಧರ್ಮಾದಾಯ ಇಲಾಖೆಯಿಂದ ಅಭಿವೃದ್ಧಿಗಾಗಿ ರೂ. 12.50 ಲಕ್ಷ ಅನುದಾನ ಬಿಡುಗಡೆಗೊಳಿಸಲಾಗಿದೆ ಎಂದು ಶಾಸಕ ಕೆ.ಜಿ. ಬೋಪಯ್ಯ ತಿಳಿಸಿದ್ದಾರೆ. ರಾಜ್ಯ ಧಾರ್ಮಿಕ ಇಲಾಖೆ ಸಚಿವ ರುದ್ರಪ್ಪ ಆರ್. ಲಮಾಣಿ ಅವರಿಗೆ ತಾವು ಕೋರಿಕೆ ಸಲ್ಲಿಸುವದರೊಂದಿಗೆ ಅನುದಾನ ಒದಗಿಸಿದ್ದಾಗಿ ಅವರು ಮಾಹಿತಿ ನೀಡಿದ್ದಾರೆ.