ಸೋಮವಾರಪೇಟೆ, ಜ. 31: ಸಮೀಪದ ಹಾನಗಲ್ಲು ಬಾಣೆಯಲ್ಲಿರುವ ಹಿಂದೂ ರುದ್ರಭೂಮಿಯನ್ನು ಸಾರ್ವಜನಿಕರು ಶ್ರಮದಾನದ ಮೂಲಕ ಸ್ವಚ್ಛಗೊಳಿಸಿದರು.

ರುದ್ರಭೂಮಿ ಅಭಿವೃದ್ಧಿ ಸಮಿತಿಯ ವತಿಯಿಂದ ಆಯೋಜಿಸಲಾಗಿದ್ದ ಶ್ರಮದಾನ ಕಾರ್ಯಕ್ರಮದಲ್ಲಿ ಆಲೇಕಟ್ಟೆರಸ್ತೆ, ಗಾಂಧಿನಗರ, ಕಲ್ಲಾರೆ, ಚೌಡ್ಲು, ಕಾನ್ವೆಂಟ್‍ಬಾಣೆ, ಹಾನಗಲ್ಲು, ಕಪ್ಪೆಗುಂಡಿ ಗ್ರಾಮಗಳ ಸಾರ್ವಜನಿಕರು ಪಾಲ್ಗೊಂಡಿದ್ದರು.

ಸಮಿತಿಯ ಕಾರ್ಯದರ್ಶಿ ಕೃಷ್ಣಮೂರ್ತಿ, ಖಜಾಂಚಿ ಧರ್ಮ, ಉಪಾಧ್ಯಕ್ಷ ಹರೀಶ್, ಪದಾಧಿಕಾರಿಗಳಾದ ಮಣಿ, ತನಿಯಪ್ಪ, ಗಣೇಶ್, ಚಂದ್ರ, ಮೋಹನ್ ಸೇರಿದಂತೆ 100ಕ್ಕೂ ಅಧಿಕ ಮಂದಿ ಸ್ವಚ್ಛತಾ ಕಾರ್ಯದಲ್ಲಿ ಭಾಗಿಯಾಗಿದ್ದರು.