ಸುಂಟಿಕೊಪ್ಪ, ಜ. 31: ಜೇ.ಸಿ.ಐ. ಸುಂಟಿಕೊಪ್ಪದ 2018ನೇ ಸಾಲಿನ ನೂತನ ಅಧ್ಯಕ್ಷ ಹೆಚ್.ಆರ್. ಅರುಣ್ ಕುಮಾರ್ ಅವರ ಪದಗ್ರಹಣ ಸಮಾರಂಭ ಸುಂಟಿಕೊಪ್ಪ ಕೊಡವ ಸಮಾಜದಲ್ಲಿ ತಾ. 4 ರಂದು ಸಂಜೆ 6.30 ಗಂಟೆಗೆ ನಡೆಯಲಿದೆ ಎಂದು ಜೇ.ಸಿ.ಐ. ಕಾರ್ಯದರ್ಶಿ ಎನ್.ಎಸ್. ಅಶೋಕ್ ತಿಳಿಸಿದ್ದಾರೆ.

ಈ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ವಲಯ ಅಧ್ಯಕ್ಷ ಜೇ.ಸಿ. ವಿಕಾಸ್ ಗೂಗ್ಲಿಯ ಆಗಮಿಸಲಿದ್ದು, ಉದ್ಘಾಟನೆಯನ್ನು ಹಾಸನ ಜಿಲ್ಲಾ ಗ್ರಾಹಕರ ವ್ಯಾಜ್ಯ ಪರಿಹಾರ ವೇದಿಕೆಯ ಅಧ್ಯಕ್ಷ ಎ. ಲೋಕೇಶ್ ಕುಮಾರ್ ನೇರವೇರಿಸಲಿದ್ದಾರೆ. ಗೌರವ ಅತಿಥಿಗಳಾಗಿ ಮೈಸೂರು ವಲಯದ ಲೆಕ್ಕ ಪರಿಶೋಧಕರ ಸಂಘದ ಮಾಜಿ ಅಧ್ಯಕ್ಷ ಪಿ.ಡಬ್ಲ್ಯು. ಪ್ರಾನ್ಸಿಸ್, ವಲಯ ಕಾಯ್ನಿರತ ಉಪಾಧ್ಯಕ್ಷ ಸೆನೆಟರ್ ಜೆಪಿನ್ ಜಾಯ್ ಆಗಮಿಸಲಿದ್ದು, ಸಮಾರಂಭದದಲ್ಲಿ 2017ರ ಸಾಲಿನ ಅಧ್ಯಕ್ಷ ಜೆಎಫ್‍ಎ ಜಿ.ಬಿ. ಹರೀಶ್ ಅಧ್ಯಕ್ಷತೆ ವಹಿಸಲಿದ್ದಾರೆ ಎಂದರು.

ಹೇಳಿಕೆಯ ಸಂದರ್ಭ ಅಧ್ಯಕ್ಷ ಜೇ.ಸಿ. ಹೆಚ್.ಆರ್. ಅರುಣ್ ಕುಮಾರ್, ಖಜಾಂಚಿ ಜೇ.ಸಿ. ನಿರಂಜನ್, ಪೂರ್ವ ವಲಯಾಧ್ಯಕ್ಷ ಜೇ.ಸಿ. ದೇವಿ ಪ್ರಸಾದ್, ಪುರ್ವವಲಯಾಧಿಕಾರಿ ಜೇ.ಸಿ. ಸದಾಶಿವ ರೈ, ಸುಂಟಿಕೊಪ್ಪ ಜೇ.ಸಿ. ಪೂರ್ವಾಧ್ಯಕ್ಷ ಮನು ಅಚ್ಚಮಯ್ಯ ತಿಳಿಸಿದ್ದಾರೆ.