ಮಡಿಕೇರಿ, ಜ. 30 : ಮಹಾತ್ಮ ಗಾಂಧೀಜಿ ಅವರ ಬಲಿದಾನ ದಿನವಾದ ಇಂದು ‘ಮಾನವೀಯತೆ ಚಿರಾಯುವಾಗಲಿ’ ಎಂಬ ಪ್ರತಿಜ್ಞಾ ಘೋಷಣೆಯೊಂದಿಗೆ ನಗರದಲ್ಲಿ ಮಾನವ ಸರಪಳಿ ರಚಿಸುವ ಮೂಲಕ ಸಂಕಲ್ಪ ಕೈಗೊಳ್ಳಲಾಯಿತು. ಕರ್ನಾಟಕ ಸೌಹಾರ್ದ ವೇದಿಕೆಯ ಆಶ್ರಯದಲ್ಲಿ ಜಿಲ್ಲಾ ಕೇಂದ್ರ ಮಡಿಕೇರಿ ಸೇರಿದಂತೆ ಕೊಡಗಿನ ಪ್ರಮುಖ ಕಡೆಗಳಲ್ಲಿ ಇಂದು ಮಾನವ ಸರಪಳಿ ರಚಿಸುವ ಮೂಲಕ ಜಾಗೃತಿ ಮೂಡಿಸಲಾಯಿತು.ನಗರದ ಜನರಲ್ ತಿಮ್ಮಯ್ಯ ವೃತ್ತದಲ್ಲಿ ಸಮಾವೇಶಗೊಂಡ ಸಾರ್ವಜನಿಕರನ್ನು ಉದ್ದೇಶಿಸಿ ಸೌಹಾರ್ದತೆಗಾಗಿ ಕರ್ನಾಟಕ ಜಿಲ್ಲಾ ಸಂಚಾಲಕ ಡಾ. ಇ.ರಾ. ದುರ್ಗಾಪ್ರಸಾದ್ ಮಾತನಾಡಿದರು. ತಾಲೂಕು ಸಂಚಾಲಕ ಬಿ.ಎ. ಷಂಶುದ್ದೀನ್ ಪ್ರತಿಜ್ಞಾ ವಿಧಿ ಬೋಧಿಸಿದರು. ಈ ಸಂದರ್ಭ ಅರಮೇರಿ ಕಳಂಚೇರಿ ಮಠದ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ, ಸಂತ ಮೈಕಲರ ಚರ್ಚ್‍ನ ಫಾದರ್ ಆಲ್‍ಫ್ರೆಡ್ ಜಾನ್ ಮೆಂಡೋನ್ಸಾ, ಮೌಲ್ವಿ ಹಾಫೀಜ್ ರಫೀಕ್, ಮಾಜಿ ಸಚಿವ ಯಂ.ಸಿ. ನಾಣಯ್ಯ ಮಾತನಾಡಿ, ಸೌಹಾರ್ದತೆಯ ಸಂದೇಶ ಸಾರಿದರು. ತಾಲೂಕು ಸಂಚಾಲಕ ಬೇಬಿ ಮ್ಯಾಥ್ಯು, ರೇಷ್ಮೆ ಅಭಿವೃದ್ಧಿ ನಿಗಮದ ಅಧ್ಯಕ್ಷ ಟಿ.ಪಿ. ರಮೇಶ್, ನಗರಸಭಾ ಅಧ್ಯಕ್ಷೆ ಕಾವೇರಮ್ಮ ಸೋಮಣ್ಣ ಮೊದಲಾದವರು ಪಾಲ್ಗೊಂಡಿದ್ದರು.

ಇದೇ ಸಂದರ್ಭ ಇಂದಿರಾಗಾಂಧಿ ವೃತ್ತದಲ್ಲಿ ನಡೆದ ಮಾನವ ಸರಪಳಿಯಲ್ಲಿ ಸೌಹಾರ್ದ ವೇದಿಕೆ ಪ್ರಮುಖರಾದ ಎಸ್.ಐ. ಮುನೀರ್ ಅಹ್ಮದ್ ಪಾಲ್ಗೊಂಡು ಪ್ರತಿಜ್ಞಾ ವಿಧಿ ಬೋಧಿಸಿದರು. ನೂರಾರು ಸಾರ್ವಜನಿಕರು ಮಾನವ ಸರಪಳಿಗೆ ಕೈಜೋಡಿಸಿದರು.

ಅಂಬೆಕಲ್ ನವೀನ್ ಕುಶಾಲಪ್ಪ, ಅಂಬೆಕಲ್ ಕುಶಾಲಪ್ಪ, ಲಯನ್ಸ್ ಅಧ್ಯಕ್ಷ ಸೋಮಣ್ಣ, ಪ್ರಮುಖರಾದ ಮಧುಕರ್, ಜಯರಾಜ್, ರಾಣಿ ನಾರಾಯಣ, ವಕೀಲರಾದ ಕೆ.ಪಿ. ಬಾಲಸುಬ್ರಹ್ಮಣ್ಯ, ಸೌಹಾರ್ದ ವೇದಿಕೆ ಸಂಚಾಲಕರಾದ ಬಿ.ಎ. ಷಂಶುದ್ದೀನ್, ಕೆ.ಟಿ.ಬೇಬಿ ಮ್ಯಾಥ್ಯು, ರೆವರೆಂಡ್ ಫಾದರ್ ಆಲ್‍ಫ್ರೆಡ್ ಜಾನ್ ಮೆಂಡೋನ್ಸಾ, ರೆವರೆಂಡ್ ಫಾದರ್ ಅಮೃತರಾಜ್, ಹಾಫೀಜ್ ರಫೀಯುಲ್ ಜಮಾ ಉಮ್ಮರ್ ಮೌಲವಿ, ಎಸ್.ಎಂ. ಶರೀಫ್, ರೆವರೆಂಡ್ ಸಿಸ್ಟರ್ ಲೀಮಾ, ಪ್ರಮುಖರಾದ ಎಂ.ಎಂ. ಅಬ್ದುಲ್ಲ, ಲಿಯಾಕತ್ ಆಲಿ, ಸಂಧ್ಯಾ, ಜಯ ಕುಮಾರ್, ರಿಚರ್ಡ್.

ಎವಿ ಶಾಲೆ ಬಳಿ ಪ್ರೇಂ ಕುಮಾರ್,

(ಮೊದಲ ಪುಟದಿಂದ) ಲೀಲಾ ಶೇಷಮ್ಮ, ಮಹಮ್ಮದ್ ಮುಸ್ತಫ, ಜಿ.ಹೆಚ್. ಹನೀಫ್, ಜಯಲಕ್ಷ್ಮಿ ಪಿ. ಅಶ್ರಫ್, ಕೆ.ಎಂ. ಮೊಹಮ್ಮದ್.

ಮಾರುಕಟ್ಟೆ ಬಳಿ- ಬಾಬು ಚಂದ್ರ ಉಳ್ಳಾಗಡ್ಡಿ, ಎಂ.ಎಂ. ಉಸ್ಮಾನ್, ಚಂದ್ರಶೇಖರ್, ಅಶ್ರಫ್, ಎಂ.ಎಂ. ಖಲೀಲ್, ಗಫಾರ್,

ಇಂದಿರಾ ಗಾಂಧಿ ವೃತ್ತದಲ್ಲಿ ಮುನೀರ್ ಅಹಮ್ಮದ್, ಎಂ.ಇ. ಹನೀಫ್, ಟಿ.ಪಿ.ರಾಜೇಂದ್ರÀ್ರ, ಅಫ್ಸರ್, ಕೆ.ಎಂ.ರಾಜನ್, ಎಂ.ಎಂ. ಹಾರೂನ್, ಎಂ.ಜಿ. ಶರೀಫ್, ನಗರಸಭಾ ಸದಸ್ಯರುಗಳಾದ ಚುಮ್ಮಿ ದೇವಯ್ಯ, ಅಮಿನ್ ಮೊಹಿಸಿನ್, ಕೆ.ಜೆ. ಪೀಟರ್, ಮನ್ಸೂರ್, ಯತೀಶ್, ಉಸ್ಮಾನ್, ಎಂ.ಎಂ. ಯಾಕೂಬ್, ಎಂ.ಎಂ. ಹುರೈರ, ಕಿಶನ್ ಪೂವಯ್ಯ, ನಾಗರತ್ನ, ಹೆಚ್.ಎಲ್.ದಿವಾಕರ್, ಎಂ.ಎಂ.ಉಮೇಶ್, ಅಲ್ಲಾರಂಡ ವಿಠಲ್ ಕಾರ್ಯಪ್ಪ ಪಾಲ್ಗೊಂಡಿದ್ದರು.

ಸೋಮವಾರಪೇಟೆ : ಕರ್ನಾಟಕ ಸೌಹಾರ್ದ ವೇದಿಕೆ ವತಿಯಿಂದ ‘ಸೌಹಾರ್ಧ ಕರ್ನಾಟಕ-ಸರ್ವಜನಾಂಗದ ಶಾಂತಿಯ ತೋಟ’ ಎಂಬ ಧ್ಯೇಯವಾಕ್ಯದಡಿ ಪಟ್ಟಣದಲ್ಲಿ ಮಾನವ ಸರಪಳಿ ರಚಿಸಿ ಜಾಗೃತಿ ಮೂಡಿಸಲಾಯಿತು.

ವೇದಿಕೆಯ ತಾಲೂಕು ಸಂಚಾಲಕ ಬಿ.ಈ. ಜಯೇಂದ್ರ ಅವರ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿವಿಧ ಸಂಘಟನೆಗಳ ಮುಖಂಡರಾದ ಡಿ.ಎಸ್. ನಿರ್ವಾಣಪ್ಪ, ಜಯಪ್ಪ ಹಾನಗಲ್, ಹೆಚ್.ಎಂ. ಸೋಮಪ್ಪ, ಹೆಚ್.ಬಿ. ಜಯಮ್ಮ, ಶೀಲಾ ಡಿಸೋಜ, ಕೆ.ಎ. ಆದಂ, ಮೀನಾಕುಮಾರಿ, ಎಸ್.ಎಂ. ಡಿಸಿಲ್ವಾ, ಕಾಟ್ನಮನೆ ವಿಠಲ್‍ಗೌಡ, ಎ.ಪಿ. ವೀರರಾಜು, ಹೆಚ್.ಎ, ನಾಗರಾಜು, ಸುರೇಶ್ ಶೆಟ್ಟಿ, ಮಂಜುನಾಥ್, ಇಂದ್ರೇಶ್ ಸೇರಿದಂತೆ ಇತರರು ಭಾಗವಹಿಸಿದ್ದರು.

ಡಿ.ಎಸ್. ನಿರ್ವಾಣಪ್ಪ ಮಾತನಾಡಿ, ರಾಜ್ಯ ಮತ್ತು ದೇಶದಲ್ಲಿ ಕೋಮುವಾದ ವಿಜೃಂಭಿಸುತ್ತಿದ್ದು, ಶಾಂತಿ ತೊಲಗಿ ಶಾಂತಿ ಮತ್ತು ಸಾಮರಸ್ಯ ನೆಲೆಗೊಳಿಸುವ ಉದ್ದೇಶದಿಂದ ಮಹಾತ್ಮಾ ಗಾಂಧಿ ಬಲಿದಾನಗೈದ ದಿನವಾದ ಇಂದು ಸೌಹಾರ್ದ ಕರ್ನಾಟಕ ಜಾಗೃತಿ ಕಾರ್ಯಕ್ರಮ ನಡೆಸಲಾಗುತ್ತಿದೆ ಎಂದರು.

ವೀರಾಜಪೇಟೆ: ಸೌಹಾರ್ದ ಕರ್ನಾಟಕಕ್ಕಾಗಿ ವೀರಾಜಪೇಟೆಯಲ್ಲಿ ಸರ್ವಜನಾಂಗದ ವಿವಿಧ ಒಕ್ಕೂಟಗಳು ಇಂದು ಅಪರಾಹ್ನ 3-45 ಗಂಟೆಗೆ ಸೇರಿ ಕೋಮು ಸೌಹಾರ್ದತೆಗಾಗಿ ಪ್ರತಿಜ್ಞಾ ವಿಧಿಯೊಂದಿಗೆ 10 ನಿಮಿಷಗಳ ಕಾಲ ಮುಖ್ಯ ರಸ್ತೆಯ ಬದ್ರಿಯಾ ಜಂಕ್ಷನ್‍ನಿಂದ ಮೂರ್ನಾಡು ರಸ್ತೆಯವರೆಗೆ ಮಾನವ ಸರಪಳಿ ನಿರ್ಮಿಸಲಾಯಿತು.

ಪ್ರತಿಜ್ಞಾ ವಿಧಿ ಬೋಧಿಸಿದ ನಂತರ ಮಾತನಾಡಿದ ಸಂಘಟನೆಯ ಸಂಚಾಲಕ ಮೇರಿಯಂಡ ಸಂಕೇತ್ ಪೂವಯ್ಯ ಸರ್ವಜನಾಂಗ ಒಂದಾಗಿ ಇಂದು ಶಾಂತಿ ಸಾಮರಸ್ಯಕ್ಕೆ ಅವಕಾಶ ಕಲ್ಪಿಸಬೇಕಾಗಿದೆ ಎಂದರು.

ಮಾನವ ಸರಪಳಿ ಸೌಹಾರ್ದತೆಯ ಕೂಟದಲ್ಲಿ ಬಿ.ಜೆ.ಪಿ ಹೊರತುಪಡಿಸಿದಂತೆ ವಿವಿಧ ರಾಜಕೀಯ ಮುಖಂಡರುಗಳು ಸಂಘ ಸಂಸ್ಥೆಗಳ ಪ್ರತಿನಿಧಿಗಳು, ವಿವಿಧ ಕಾರ್ಮಿಕ, ದಲಿತ ಸಂಘಟನೆ ಪ್ರತಿನಿಧಿಗಳು, ಎಲ್ಲ ಧರ್ಮದವರು ಭಾಗವಹಿಸಿದ್ದರು. ಸಂಘಟನೆಯ ತಾಲೂಕು ಸಂಚಾಲಕರುಗಳಾದ ಎಂ.ಪಿ.ಕೇಶವ ಕಾಮತ್, ಎಸ್.ಎಚ್.ಮತೀನ್ ಉಪಸ್ಥಿತರಿದ್ದರು.

ವೀರಾಜಪೇಟೆ ನಗರ ಹಾಗೂ ವೃತ್ತ ಪೊಲೀಸರು ಒಂದೂವರೆ ಗಂಟೆಗಳ ಕಾಲ ಗಡಿಯಾರ ಕಂಬದ ಬಳಿ ವಿಶೇಷ ಪೊಲೀಸ್ ಬಂದೋಬಸ್ತ್ ಕಲ್ಪಿಸಿದ್ದರು.

ಕುಶಾಲನಗರ : ಸೌಹಾರ್ದ ಕರ್ನಾಟಕ ವೇದಿಕೆ ಆಶ್ರಯದಲ್ಲಿ ಕುಶಾಲನಗರದಲ್ಲಿ ಮಾನವ ಸರಪಳಿ ರಚನೆ ಕಾರ್ಯಕ್ರಮ ನಡೆಯಿತು. ವೇದಿಕೆಯ ತಾಲೂಕು ಸಂಚಾಲಕರುಗಳಾದ ವಿ.ಪಿ.ಶಶಿಧರ್ ಮತ್ತು ಪಿ.ಆರ್.ಭರತ್ ನೇತೃತ್ವದಲ್ಲಿ ಪಟ್ಟಣದ ರಾಜ್ಯ ಹೆದ್ದಾರಿ ಬದಿಯಲ್ಲಿ ಮಾನವ ಸರಪಳಿ ರಚಿಸಲಾಯಿತು.

ನೂರಾರು ಮಂದಿ ಪಟ್ಟಣದ ಅಂಚೆ ಕಚೇರಿಯಿಂದ ಜಾಮಿಯಾ ಮಸೀದಿ ವರೆಗೆ ರಸ್ತೆ ಬದಿಯಲ್ಲಿ ಮಾನವ ಸರಪಳಿ ರಚಿಸಿ ಶಾಂತಿ ಸಹಬಾಳ್ವೆ ಸಾರುವ ಫಲಕಗಳೊಂದಿಗೆ ಒಕ್ಕೊರಲಿನ ಸಂದೇಶ ಹರಡಿದರು.

ಪಟ್ಟಣ ಪಂಚಾಯಿತಿ ಸದಸ್ಯ ಫಜಲುಲ್ಲಾ, ಹಿರಿಯ ನಾಗರಿಕ ನಜೀರ್ ಅಹಮ್ಮದ್ ಸೇರಿದಂತೆ ವಿವಿಧ ಸಂಘಟನೆಗಳು, ಸಂಘಸಂಸ್ಥೆಗಳ ಪ್ರಮುಖರು, ಪದಾಧಿಕಾರಿಗಳು, ಸಾರ್ವಜನಿಕರು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.