ಮಡಿಕೇರಿ, ಜ. 31: ಅರ್ಜುನ್ ಫ್ರೆಂಡ್ಸ್ ಬಿಳಿಗೇರಿ, ಇವರ ವತಿಯಿಂದ ದ್ವಿತೀಯ ವರ್ಷದ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾಟವನ್ನು ನಗರದ ಮ್ಯಾನ್ಸ್‍ಕಾಂಪೌಂಡ್ ಮೈದಾನದಲ್ಲಿ ತಾ. 3, 4, 5 ರಂದು ಆಯೋಜಿಸಲಾಗಿದೆ.

ಪಂದ್ಯಾಟದಲ್ಲಿ ಪ್ರಥಮ ಬಹುಮಾನವಾಗಿ ರೂ.15 ಸಾವಿರ ನಗದು, ಆಕರ್ಷಕ ಟ್ರೋಫಿ ಮತ್ತು ದ್ವಿತೀಯ ಬಹುಮಾನವಾಗಿ 7 ಸಾವಿರ ನಗದು ಆಕರ್ಷಕ ಟ್ರೋಫಿ ನೀಡಲಾಗುವುದು. ಎಲ್ಲಾ ಪಂದ್ಯಗಳಲ್ಲೂ ಮ್ಯಾನ್ ಆಫ್ ದಿ ಮ್ಯಾಚ್ ನೀಡಿ ಗೌರವಿಸಲಾಗುವದು. 4 ಓವರ್‍ಗಳ ಈ ಪಂದ್ಯಾಟದಲ್ಲಿ 8 ಜನರಿಗೆ ಆಟವಾಡುವ ಅವಕಾಶವನ್ನು ನೀಡಲಾಗಿದೆ. ಮೈದಾನ ಶುಲ್ಕ ರೂ.1500 ನಿಗದಿಪಡಿಸಲಾಗಿದ್ದು ಹೆಸರು ನೋಂದಾಯಿಸುವ ಆಸಕ್ತ ತಂಡಗಳು 8277778744, 9483826022, 9483114226 ಈ ದೂರವಾಣಿ ಸಂಖ್ಯೆಗಳನ್ನು ಸಂಪರ್ಕಿಸಬಹುದು ಎಂದು ಅರ್ಜುನ್ ಫ್ರೆಂಡ್ಸ್ ಪದಾಧಿಕಾರಿಗಳು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.