ಮಡಿಕೇರಿ, ಜ. 31: ಬಿಜೆಪಿ ನೇತೃತ್ವದ ಕೇಂದ್ರ ಸರಕಾರದ ಜನ ವಿರೋಧಿ ಮತ್ತು ರೈತ ವಿರೋಧಿ ಧೋರಣೆ, ತೈಲ ಬೆಲೆ ಹೆಚ್ಚಳವನ್ನು ವಿರೋಧಿಸಿ ಡಿ.ಕೆ. ಶಿವಕುಮಾರ್ ಅಭಿಮಾನಿ ಬಳಗದ ವತಿಯಿಂದ ಸಧ್ಯದಲ್ಲಿಯೇ ಬೃಹತ್ ಪ್ರತಿಭಟನೆಯನ್ನು ನಡೆಸಲಾಗುವದೆಂದು ಬಳಗದ ಜಿಲ್ಲಾ ಸಂಚಾಲಕ ಅಬ್ದುಲ್ ರಜಾóಕ್ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಂದಿನ ಯುಪಿಎ ಅಧಿಕಾರದ ಅವಧಿಯಲ್ಲಿ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಛಾ ತೈಲದ ಬೆಲೆ ಬ್ಯಾರೆಲ್‍ಗೆ 120 ಡಾಲರ್ ಇದ್ದಾಗ, ಭಾರತದಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಬೆಲೆ 70 ರೂ. ಆಗಿತ್ತು. ಪ್ರಸ್ತುತ ಕಚ್ಛಾ ತೈಲದ ಬೆಲೆ 60 ಡಾಲರ್‍ಗೆ ಕುಸಿದಿದ್ದರು ಕೇಂದ್ರದ ಬಿಜೆಪಿ ಸರ್ಕಾರ ತೈಲ ಬೆಲೆಯನ್ನು ಇಳಿಕೆ ಮಾಡದೆ, ಪ್ರತಿ ಲೀಟರ್ ಪೆಟ್ರೋಲ್ ಬೆಲೆಯನ್ನು 80ರ ಆಸು ಪಾಸಿನಲ್ಲಿ ನಿಗದಿ ಪಡಿಸುವ ಮೂಲಕ ಜನ ಸಾಮಾನ್ಯರಿಗೆ ಹೆಚ್ಚಿನ ಹೊರೆ ಹಾಕಿರುವದಾಗಿ ಆರೋಪಿಸಿದರು.

ಡಿ.ಕೆ. ಶಿವಕುಮಾರ್ ಅಭಿಮಾನಿ ಬಳಗದ ಮೂರು ತಾಲೂಕು ಅಧ್ಯಕ್ಷರು ಮತ್ತು ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಹೋಬಳಿ ಮತ್ತು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಸಮಿತಿಗಳನ್ನು ರಚಿಸಿ ಕನಿಷ್ಟ ಪಂಚಾಯಿತಿ ಮಟ್ಟದಲ್ಲಿ ಹತ್ತು ಮಂದಿಯ ಕ್ರಿಯಾಶೀಲ ತಂಡವನ್ನು ಕಟ್ಟುವ ಮೂಲಕ ಬಳಗವನ್ನು ಸಶಕ್ತವಾಗಿ ಕಟ್ಟುವದಲ್ಲದೆ, ಮುಂದಿನ ಮಾರ್ಚ್‍ನಲ್ಲಿ ಬಳಗದಿಂದ ಮಡಿಕೆÉೀರಿಯಲ್ಲಿ ಬೃಹತ್ ಸಮಾವೇಶವನ್ನು ಆಯೋಜಿಸುವದಾಗಿ ಮಾಹಿತಿ ನೀಡಿದರು. ತಾ. 14 ರಂದು ಬಳಗದ ಜಿಲ್ಲಾ ಸಮಿತಿ ಸಭೆÉಯನ್ನು ಕರೆಯಲಾಗಿದೆ ಎಂದು ಅಬ್ದುಲ್ ರಜಾóಕ್ ತಿಳಿಸಿದರು.

ಗೋಷ್ಠಿಯಲ್ಲಿ ಡಿ.ಕೆ. ಶಿವಕುಮಾರ್ ಅಭಿಮಾನಿ ಬಳಗದ ಜಿಲ್ಲಾಧ್ಯಕ್ಷ ನವೀದ್ ಖಾನ್, ಜಿಲ್ಲಾ ಸಂಚಾಲಕ ಚಂದನ್, ಮಡಿಕೆÉೀರಿ ತಾಲೂಕು ಅಧ್ಯಕ್ಷ ರಿಜ್ವಾನ್ ಹಾಗೂ ಸೋಮವಾರಪೇಟೆ ತಾಲೂಕು ಅಧ್ಯಕ್ಷ ತೇಜ್ ಕುಮಾರ್ ಉಪಸ್ಥಿತರಿದ್ದರು.