ಗೋಣಿಕೊಪ್ಪ ವರದಿ, ಜ. 31: 8 ನೇ ನ್ಯಾಷನಲ್ ಸಬ್ ಜೂನಿಯರ್ ಚಾಂಪಿಯನ್‍ಶಿಪ್ ಟೂರ್ನಿಯಲ್ಲಿ ಹಾಕಿ ಕೂರ್ಗ್ ತಂಡವು ಗೆಲುವು ದಾಖಲಿಸುವ ಮೂಲಕ ಶುಭಾರಂಭ ಮಾಡಿದೆ. ಅಸ್ಸಾಂನ ಕಾಲಿಬೊರ್ ಮೈದಾನದಲ್ಲಿ ನಡೆಯುತ್ತಿರುವ ಟೂರ್ನಿಯ ಮೊದಲ ಪಂದ್ಯದಲ್ಲಿ ಸಿಟಿಜನ್ ಹಾಕಿ ವಿರುದ್ಧ 6-0 ಗೋಲುಗಳ ಜಯ ಸಾಧಿಸುವ ಮೂಲಕ ಮೊದಲ ಗೆಲುವು ದಾಖಲಿಸಿತು.9, 53 ನೇ ನಿಮಿಷಗಳಲ್ಲಿ ಪೊನ್ನಿಮಾಡ ಶಿಲ್ಪ, 24 ರಲ್ಲಿ ಶಯಾ ಕಾವೇರಮ್ಮ, 34 ರಲ್ಲಿ ಜಾಹ್ನವಿ, 46 ರಲ್ಲಿ ಸುಜಾತ, 64 ರಲ್ಲಿ ಜೀವಿತಾ ಗೋಲು ಹೊಡೆದರು. ತಂಡದ ತರಬೇತುದಾರರಾಗಿ ವಿನೋದ್, ವ್ಯವಸ್ಥಾಪಕಿಯಾಗಿ ಕುಡೆಕಲ್ ಸವಿತಾ ಪಾಲ್ಗೊಂಡಿದ್ದಾರೆ.